ಮನೆ Latest News ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಬರೋವರೆಗೂ ನಿಮ್ಮ ಖಾತೆಗೆ ಗೃಹಲಕ್ಷ್ಮಿ ದುಡ್ಡು ಹಾಕಲ್ಲ; ಜೆಡಿಎಸ್ ಯುವ...

ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಬರೋವರೆಗೂ ನಿಮ್ಮ ಖಾತೆಗೆ ಗೃಹಲಕ್ಷ್ಮಿ ದುಡ್ಡು ಹಾಕಲ್ಲ; ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿಕೆ

0

ಬೆಂಗಳೂರು: ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಬರೋವರೆಗೂ ನಿಮ್ಮ ಖಾತೆಗೆ ಗೃಹಲಕ್ಷ್ಮಿ ದುಡ್ಡು ಹಾಕಲ್ಲ ಎಂದು ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು 2 ವರ್ಷ ಆಯ್ತು. ಇದೇ ಕಾಂಗ್ರೆಸ್ ಪಕ್ಷ ಕಮಿಟ್ಮೆಂಟ್ ಕೊಟ್ಟರು . 5 ಗ್ಯಾರಂಟಿ ಜನರಿಗೆ ಸಂಪೂರ್ಣ ಮಾಡ್ತೀವಿ . ನಮಗೆ ಅವಕಾಶ ಕೊಡಿ ಅಂತ ಮನವಿ ಮಾಡಿದ್ರು ನಮ್ಮ ರಾಜ್ಯದ ಸಿಎಂ ಡಿಸಿಎಂಗೆ ಪ್ರಶ್ನೆ ಕೇಳಬೇಕು. 5 ಗ್ಯಾರಂಟಿ ಗೆ ಹಣ ಹೊಂದಿಸಬೇಕು ಅಂತ ಗೊತ್ತಿತ್ತು .ಪ್ರತೀ ತಿಂಗಳ 2 ಸಾವಿರ ಗೃಹಲಕ್ಷ್ಮಿ ಇರಬಹುದು. ಯುವಕರಿಗೆ ಯುವ ನಿಧಿ ಹಣ ಇರಬಹುದು .ಗೃಹ ಜ್ಯೋತಿ ಕೂಡ ಇರಬಹುದು.. ಇದ್ರ ಬಗ್ಗೆ ಮಾತು ಕೊಟ್ರಿ . ಮಾತು ಕೊಡುವಾಗ ಪರಿಜ್ಞಾನ ಇರ್ಲಿಲ್ವಾ ಎಂದು ಪ್ರಶ್ನಿಸಿದ್ದಾರೆ.

ಹಿಮಾಚಾಲದಲ್ಲಿ ಕಾಂಗ್ರೆಸ್ ಸರ್ಕಾರ ಇದೆ .ಅಲ್ಲಿ ಕರ್ನಾಟಕಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ದಿವಾಳಿ ಆಗಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ತಿಂಗಳಿಗೆ 2 ವರೆ ಸಾವಿರ ಕೋಟಿ ಹಣ ಹೊಂದಿಸಬೇಕು.ಎಂ ಪಿ ಚುನಾವಣಾ ಸಂದರ್ಭ ಒಂದು ಸಮಾವೇಶ ಮಾಡ್ತಾರೆ.ನೇರವಾಗಿ ನಾಡಿನ ಹೆಣ್ಣು ಮಕ್ಕಳಿಗೆ ಧಮ್ಕಿ ಹಾಕ್ತಾರೆ . ನೀವು ಮತ ಕೊಟ್ಟಿಲ್ಲ ಅಂದ್ರೆ ಗ್ಯಾರಂಟಿ ರದ್ದು ಮಾಡ್ತೀವಿ ಅಂತ ಧಮ್ಕಿ ಹಾಕ್ತಾರೆ. ಉಪ ಚುನಾವಣೆ ಸಂದರ್ಭ ಎಲೆಕ್ಷನ್ 48 ಗಂಟೆ ಪೂರ್ವ ಹಣ ಖಾತೆಗೆ ಜಮಾ ಆಯ್ತು.ಸರ್ಕಾರ ತಿಂಗಳು ಹಣ ಹಾಕ್ತೀವಿ ಅಂತ ಹೇಳಿ ಸರ್ಕಾರ ಕೊಟ್ಟಿಲ್ಲ ಅಂತ ಹೆಣ್ಣು ಮಕ್ಳು ಆತಂಕದಿಂದ ಪ್ರಶ್ನೆ ಮಾಡಿದ್ರು ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಅವರು ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಚುನಾವಣೆ ಬರೋವರೆಗೂ ಇವರು ಗೃಹಲಕ್ಷ್ಮೀ ದುಡ್ಡು ಹಾಕಲ್ಲ ಎಂದು ನಿಖಿಲ್ ಹೇಳಿದ್ದಾರೆ. ಚುನಾವಣೆ ಬಂದಾಗ ನಿಮ್ಮ ಖಾತೆಗೆ ಬಹುಶಃ ದುಡ್ಡು ಬರಬಹುದು. ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ಯೋಜನೆ 2019 ರಾಲ್ಲಿ ಆರಂಭ ಮಾಡಿದ್ರು.ರೈತರಿಗೆ ಹಣ ನೇರವಾಗಿ  DBT ಮಾಡಿದ್ರು .ಪ್ರಧಾನಿ ಮೋದಿ ಕೊಟ್ಟಂತಹ ಮಾತು ಉಳಿಸಿ ಕೊಂಡಿದ್ದಾರೆ. ಆದ್ರೆ ನಮ್ಮ ಸರ್ಕಾರ ಮಾತ್ರ ಉಳಿಸಿ ಕೊಂಡಿಲ್ಲ. ಕ್ಯಾಲೆಂಡರ್ ಡೇಟ್ ಅಲ್ಲಿ  ಯಾವಾಗ  ಹಣ ಕೊಡ್ತೀರಿ? . ನಿಖರವಾದ ಸಮಯ ದಿನಾಂಕ ನಿಗದಿ ಮಾಡಿ ಹಣ ಹಾಕಿ.ಕಾಂಗ್ರೆಸ್ X ಖಾತೆಯಲ್ಲಿ ಇಷ್ಟಿಷ್ಟಿದ್ದ ಬರೆದುಕೊಂಡರು. ಹೆಣ್ಣು ಮಕ್ಕಳ ಜೀವನ ಸಾಗಿಸ್ತಾ ಇರೋದೇ ಈ ಹಣದಿಂದ ಅಂದ್ರು. ಆದ್ರೆ ಯಾಕೆ ಈಗ  ಹಣ ಪಾವತಿ ಮಾಡ್ತಿಲ್ಲ  ಅಂತ ಆಕ್ರೋಶ ಹೊರ ಹಾಕಿದ್ದಾರೆ.

ಗುತ್ತಿಗೆದಾರರಿಗೆ ಇವತ್ತಿಗೂ ಹಣ ಪಾವತಿ ಮಾಡಿಲ್ಲ . ಗಾಂಧಿ ಕುಟುಂಬದ ಕುಡಿ ರಾಹುಲ್ ಗಾಂಧಿ ಭಾರತ್ ಜೋಡೋ ಮಾಡಿದ್ರು. 40 ಪರ್ಸೆಂಟ್ ಕಮಿಷನ್ ಸರ್ಕಾರ ಅಂತಲ್ಲ ಅಂದ್ರು .ಕಮಿಷನ್ ತೆಗೆಯುತ್ತೇವೆ.. ನಾವು ಬರ್ತಾ ಇದ್ದ ಹಾಗೇ  ಗುತ್ತಿಗೆದಾರರಿಗೆ ಅನೂಕೂಲ ಅಂದ್ರು. ಆದ್ರೆ ಇವತ್ತು ಗುತ್ತಿಗೆದಾರರು ಬೀದಿಗೆ ಬಿದ್ದಿದ್ದಾರೆ .ಚೀಲದ ತುಂಬಾ ತುಂಬಿ ನಮ್ಮ ಹಣ ರಾಹುಲ್ ಗಾಂಧಿ ಸೋನಿಯಾ ಗಾಂಧಿ ಅರ್ಪಿಸುತ್ತಾ ಇದ್ದಾರೆ.ನಾಚಿಕೆ ಆಗಬೇಕು ಇಂತಹ ಸರ್ಕಾರಕ್ಕೆ .ಕಾನೂನು ಸುವ್ಯವಸ್ಥೆ ಎಲ್ಲಿಗೆ ಬಂದಿದೆ? ಮೈಸೂರು ಉದಯಗಿರಿ ಘಟನೆ ಉದಾಹರಣೆ ಕೊಡ್ತೀನಿ. ಕಾನೂನು ರಕ್ಷಣೆ ಮಾಡುವ ಪ್ರಮುಖ ಪೊಲೀಸ್ ಅಧಿಕಾರಿ ಕಾರಿನ ಮೇಲೆ ಗೂಂಡಾಗಳು ಕಲ್ಲು ಎಸೆಯುತ್ತಾರೆ. ಕಾಂಗ್ರೆಸ್ ಶಾಸಕರ ಪುತ್ರರ ದಬ್ಬಾಳಿಕೆ ದೌರ್ಜನ್ಯ ನೋಡಿ. ಭದ್ರಾವತಿ ಹೋಗಿದ್ದೆ ನಾನು.ಈ ಪ್ರಕರಣ ಮಾಧ್ಯಮದವರು ಇಡೀ ರಾಜ್ಯಕ್ಕೆ ತೋರಿಸಿದ್ರು .ಮಾಧ್ಯಮದವರಿಗೆ ನಾನು ಧನ್ಯವಾದ ಹೇಳ್ತೀನಿ ಎಂದಿದ್ದಾರೆ.

ಅಧಿಕಾರಿಗಳೇ.. ಇವತ್ತು ಸ್ನೇಹಿತರಿಗೆ ಆಗಿದೆ.. ನಾಳೆ ನಿಮಗೆ ಆಗುತ್ತೆ .ಇಳಿರಿ ರಸ್ತೆಗೆ.. ನಿಮ್ಮ ಜೊತೆ ಜನತಾ ದಳ ಇದೆ ಅಂತ  ನಿಖಿಲ್ ಭರವಸೆ ನೀಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡ್ತೀನಿ. ರಾಜ್ಯದ ಮುಖ್ಯಮಂತ್ರಿ ನಾವು ಭೇಟಿ ಮಾಡ್ತೀವಿ. ನಾವು ಕ್ಯಾಲೆಂಡರ್ ತಂದಿದ್ದೇವೆ, ದಿನಾಂಕ ಅವರು ಕೊಡ್ಲಿ. ಯಾವಾಗ ಹಣ ಬರುತ್ತೆ ಅಂತ ಹೇಳಲಿ ಅಂತ ಆಕ್ರೋಶ ಹೊರ ಹಾಕಿದ್ದಾರೆ.