ಮಂಗಳೂರು ದರೋಡೆ ಪ್ರಕರಣದಲ್ಲಿ ಸ್ಥಳೀಯರ ಬೆಂಬಲ ಇದ್ರೆ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದು ಗೃಹಸಚಿವ ಪರಮೇಶ್ವರ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಆರು ಜನ ದರೋಡೆಕೋರರು ಇದ್ರು ಅದರಲ್ಲಿ ಮೂರು ಜನರನ್ನು ಹಿಡಿದಿದ್ದೇವೆ. ರಿಕವರಿ ಕೂಡ ಮಾಡಿದ್ದೇವೆ. ಸ್ಥಳೀಯರ ಬೆಂಬಲ ಇದ್ರೆ ತನಿಖೆಯಲ್ಲಿ ಗೊತ್ತಾಗುತ್ತದೆ ಎಂದಿದ್ದಾರೆ.
ಶಾಸಕರಿಗೆ ಮೊದಲೇ ಮಾಹಿತಿ ಇದ್ದರೆ ಹೇಳಬಹುದಿತ್ತಲ್ವಾ? ಸ್ಥಳೀಯರ ಸಹಕಾರ ಇದ್ದರೆ ತನಿಖೆಯಲ್ಲಿ ಗೊತ್ತಾಗುತ್ತದೆ.ನಾವು ಯಾರನ್ನೂ ರಕ್ಷಣೆ ಮಾಡುವುದಿಲ್ಲ. ಬೀದರ್ ಪ್ರಕರಣದಲ್ಲೂ ಬಹಳ ಹತ್ತಿರಕ್ಕೆ ಬಂದಿದ್ದೇವೆ. ಉತ್ತರ ಪ್ರದೇಶ ಭಾಗದಿಂದ ಅವರು ಬೈಕಿನಲ್ಲೇ ದರೋಡೆ ಬಂದಿದ್ದರು ಎಂಬ ಮಾಹಿತಿ ಇದೆ. ಪೊಲೀಸರು ಮುಂದುವರಿದು ಹಿಡಿಯುವ ಹಂತಕ್ಕೆ ಬಂದಿದ್ದೇವೆ ಎಂದರು.
ಸಿದ್ದರಾಮಯ್ಯ ಗೆ ಮುಡಾ ದಲ್ಲಿ ಕ್ಲಿನ್ ಚಿಟ್ ವಿಚಾರದ ಬಗ್ಗೆ ಮಾತನಾಡಿದ ಪರಮೇಶ್ವರ್ ಈ ಬಗ್ಗೆ ನನಗೆ ಗೊತ್ತಿಲ್ಲ, ವರದಿಯನ್ನೂ ನಾನು ನೋಡಿಲ್ಲ. ನೋಡದೇ ಇರುವ ಬಗ್ಗೆ ನಾನು ಮಾತನಾಡುವುದು ಇಲ್ಲ.ಯಾವುದೇ ರಾಜಕೀಯ ಪ್ರಶ್ನೆಗಳಿಗೆ ನಾನು ಉತ್ತರಿಸುವುದಿಲ್ಲ ಎಂದ ಅವರು ಬಿಜೆಪಿಯ ಆಂತರಿಕ ಕಿತ್ತಾಟ ವಿಚಾರದ ಬಗ್ಗೆ ಮಾತನಾಡಿ ಅದು ಅವರ ಪಕ್ಷಕ್ಕೆ ಬಿಟ್ಟ ವಿಚಾರ. ಆದರೂ ಅವರ ನಮ್ಮ ಮೇಲೆ ಆರೋಪ ಮಾಡ್ತಿದ್ರಲ್ಲ ಈಗ ಏನು ಹೇಳ್ತಾರೆ. ನಮ್ಮದು ಮೂರು ಬಣ ನಾಲ್ಕು ಬಣ ಅಂತಿದ್ರಲ್ಲ .ಈಗ ಬಿಜೆಪಿಯದ್ದು ಬಿಜೆಪಿಯವರದ್ದು ಎಷ್ಟು ಬಣ? ಎಂದು ಲೇವಡಿ ಮಾಡಿದ್ದಾರೆ.
ದರೋಡೆ ರಾಜ್ಯ ಎಂಬ ವಿಪಕ್ಷಗಳ ಆರೋಪಕ್ಕೆ ತಿರುಗೇಟು ಕೊಟ್ಟ ಅವರು ಅವರ ಕಾಲದಲ್ಲಿ ಯಾವ ರಾಜ್ಯವಾಗಿತ್ತೋ? ಎಂದು ಪ್ರಶ್ನಿಸಿದ್ದಾರೆ.ಸಮಯ ಬಂದಾಗ ಅವರ ಕಾಲದಲ್ಲಿ ಯಾವ ರಾಜ್ಯ ಆಗಿತ್ತು ಎಂಬುದನ್ನು ಹೇಳುತ್ತೇನೆ.ಅಂಕಿ ಸಂಖ್ಯೆ ಮುಂದಿಟ್ಟು ಅವರ ಕಾಲದಲ್ಲಿ ಯಾವ ರಾಜ್ಯ ಆಗಿತ್ತು ಎಂಬುದನ್ನು ಹೇಳುತ್ತೇನೆ ಎಂದರು. ಹೆಬ್ಬಾಳ್ಕರ್ ಅಪಘಾತ ಗೊಂದಲ ಆರೋಪದ ಬಗ್ಗೆ ಮಾತನಾಡಿ ನಮಗೆ ಅವರ ಆರೋಪಗಳ ಬಗ್ಗೆ ಗೊತ್ತಿಲ್ಲ. ಅವರ ಪ್ರಾಣ ಉಳಿದಿದೆ. ವೆಹಿಕಲ್ ಗೆ ಡ್ಯಾಮೇಜ್ ಆಗಿದೆ. ಪೊಲೀಸರು ವೆರಿಫೈ ಮಾಡ್ತಿದ್ದಾರೆ. ಕಾರಿನಲ್ಲಿ ಹಣ ಇತ್ತು ಎಂಬ ಆರೋಪ ಮಾಡ್ತಿದ್ದಾರೆ. ಆರೋಪ ಮಾಡಿದವರೇನಾದ್ರೂ ನೋಡಿದ್ರಾ ಕೇಳಬೇಕು.ಪೊಲೀಸರು ಗಾಡಿ ಬಿಟ್ಟಿದ್ದೇಗೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಆಕ್ಸಿಡೆಂಟ್ ಆಗ್ತಿದ್ದಂತೆ ಗೊತ್ತಿದ್ರೆ ಪೊಲೀಸರು ಹೋಗ್ತಿದ್ರು. ಘಟನೆಯಾಗುತ್ತಲೇ ಅವರನ್ನ ಆಸ್ಪತ್ರೆಗೆ ಹೋಗಿದ್ದಾರೆ.ಸಾಮಾನ್ಯವಾಗಿ ಆಕ್ಸಿಡೆಂಟ್ ಆಗುತ್ತವೆ.ಪೋಲೀಸರು ಯಾಕೆ ಏನು ವೆರಿಫೈ ಮಾಡ್ತಾರೆ.ಸಚಿವರು,ಶಾಸಕರು ಇದ್ರು ಅನ್ನೋ ಕಾರಣ ಇಂಪಾರ್ಟೆಂಟ್.ಬಿಜೆಪಿಯವರು ಆರೋಪ ಮಾಡ್ತಾನೇ ಇರ್ತಾರೆ.ಅವರ ಆರೋಪಕ್ಕೆ ಉತ್ತರ ಕೊಡೋಕೆ ಆಗುತ್ತಾ?.ಕಾನೂನು ಪ್ರಕಾರ ಏನು ಮಾಡಬೇಕು ಮಾಡ್ತೇವೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ,











