ಚಿಕ್ಕಮಗಳೂರು: ಸಿ ಟಿ ರವಿ ಹಾಗೂ ಅವರ ಪುತ್ರನಿಗೆ ಅನಾಮಧೇಯ ಬೆದರಿಕೆ ಪತ್ರ ಬಂದಿದೆ ಎನ್ನಲಾಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ಗೆ ಕ್ಷಮೆ ಕೇಳಿ ಇಲ್ಲ ಅಂದ್ರೆ ನಿಮ್ಮನ್ನು ಹತ್ಯೆ ಮಾಡುವುದಾಗಿ ಪತ್ರ ಬರೆದಿದ್ದಾರೆ. ಚಿಕ್ಕಮಗಳೂರಿನ ಬಸವನಹಳ್ಳಿ ಸಿ.ಟಿ ರವಿ ನಿವಾಸಕ್ಕೆ ಬೆದರಿಕೆ ಪತ್ರ ಬಂದಿದೆ.
ಪತ್ರ ಬಂದ ಬೆನ್ನಲ್ಲೇ ಸಿ.ಟಿ ರವಿ ಅವರ ಪಿ.ಎ ಚೇತನ್ ಅವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.15 ದಿನದೊಳಗೆ ಕ್ಷಮೆ ಇಲ್ಲವೇ ಹತ್ಯೆ ಎಂದು ಉಲ್ಲೇಖ ಮಾಡಲಾಗಿದೆ. ರವಿ ಪುತ್ರ ಸೂರ್ಯನಿಗೂ ಬೆದರಿಕೆ ಹಾಕಲಾಗಿದೆ.ಬೆದರಿಕೆ ಪತ್ರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ಗೆ ಕ್ಷಮೆ ಕೇಳಿ ಎಂದು ಅನಾಮಧೇಯ ವ್ಯಕ್ತಿ ಕೊಲೆ ಬೆದರಿಕೆ ಹಾಕಿದ್ದಾರೆ.15ದಿನದಲ್ಲಿ ಕ್ಷಮೆ ಕೇಳಬೇಕು ಇಲ್ಲವಾದರೆ ನಿನ್ನ ಕೊಲೆ ಮಾಡುತ್ತೇವೆಂದು ಅನಾಮಧೇಯ ವ್ಯಕ್ತಿ ಬೆದರಿಕೆ ಹಾಕಿದ್ದಾನೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಕರ್ನಾಟಕ ರಾಜ್ಯ ಬೆದರಿಕೆಗೆ ಹೆದರಿಕೆಗೆ, ಸರಣಿ ಸಾವುಗಳಿಗೆ, ಗೂಂಡಾಗಿರಿಗೆ, ಭಯೋತ್ಪಾದನೆಗೆ ಹೆಸರಾಗುತ್ತಿದೆ.ಇದಕ್ಕೆ ಉದಾಹರಣೆ ಎಂಬಂತೆ ಸಿ.ಟಿ. ರವಿಗೆ ಅನಾಮಧೇಯ ಬೆದರಿಕೆ ಪತ್ರ ಬರೆದಿದ್ದಾರೆ.ಈಗಾಗಲೇ ಸಿ.ಟಿ. ರವಿ ಮೇಲೆ ಹಲ್ಲೆ ನಡೆಸಲಾಗಿದೆ. ಈಗ ಬೆದರಿಕೆ ಹಾಕಿದ್ದು ಹೊಸದೇನಲ್ಲ.ಸರ್ಕಾರ ಇನ್ನೂ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಟಕರ ಸಂಗತಿ. ಕೂಡಲೇ ಸಿ.ಟಿ. ರವಿಗೆ ಭದ್ರತೆ ಕೊಡಬೇಕು.ಆಕಸ್ಮಾತ್ ಸಿ.ಟಿ. ರವಿಗೆ ಏನೇ ಆದರೂ ಸರ್ಕಾರ ಹೊಣೆ ಆಗಲಿದೆ. ಬೆಳಗಾವಿ ಘಟನೆ ನಡೆದ ಮೇಲೂ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುತ್ತಿಲ್ಲ.ಈ ಸರ್ಕಾರ ಭಯೋತ್ಪಾದಕರಿಗೆ, ಬೆದರಿಕೆ ಹಾಕುವವರಿಗೆ ಬೆಂಬಲವಾಗಿ ನಿಂತಿದೆ.ನಾವು ರಾಜ್ಯಾಧ್ಯಕ್ಷರು ಹಾಗೂ ವಿಪಕ್ಷ ನಾಯಕರ ಜೊತೆಗೆ ಮುಂದಿನ ಹೋರಾಟದ ಬಗ್ಗೆ ಚರ್ಚೆ ಮಾಡುತ್ತೇವೆ.ಬೆದರಿಕೆ ಪತ್ರ ಬರೆದವರನ್ನು ಕೂಡಲೇ ಬಂಧಿಸಬೇಕು ಎಂದಿದ್ದಾರೆ.











