ಮನೆ Latest News ಬೆಂಗಳೂರು; ಚಿತ್ರಕಲಾ ಪರಿಷತ್ ನಲ್ಲಿ 22ನೇ ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

ಬೆಂಗಳೂರು; ಚಿತ್ರಕಲಾ ಪರಿಷತ್ ನಲ್ಲಿ 22ನೇ ಚಿತ್ರಸಂತೆಗೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು;  ಚಿತ್ರಕಲಾ ಪರಿಷತ್ ನಲ್ಲಿ 22ನೇ ಚಿತ್ರಸಂತೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ಕೊಟ್ಟರು. ಉದ್ಘಾಟನೆಗೂ ಮುನ್ನ ಕುಮಾರಕೃಪಾ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಕಲಾಕೃತಿ ವೀಕ್ಷಣೆ ಮಾಡಿದರು.  ಸಿಎಂ ಸಿದ್ದರಾಮಯ್ಯಗೆ ಉನ್ನತ ಶಿಕ್ಷಣ ಸಚಿವ ಎಂ.ಸಿ ಸುಧಾಕರ್, ಸಚಿವ ಬೈರತಿ ಬಸವರಾಜ್ ಸಾಥ್ ನೀಡಿದರು. ಸಿಎಂ ಸಿದ್ದರಾಮಯ್ಯ ಅವರು  7ನೇ ಬಾರಿಗೆ ಚಿತ್ರಸಂತೆ ಉದ್ಘಾಟಿಸಿದ್ದಾರೆ. ಈ ಬಾರಿಗೆ ಹೆಣ್ಣು ಮಕ್ಕಳಿಗೆ ಸಮರ್ಪಣೆ ಮಾಡಲಾಗಿದೆ.

ಇನ್ನು ಚಿತ್ರಸಂತೆ ಉದ್ಘಾಟಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಬೆಂಗಳೂರಿಗೆ ಇದೊಂದು ಸುವರ್ಣ ಅವಕಾಶ.ಹೆಣ್ಮಕ್ಕಳಿಗೆ ಸಮರ್ಪಣೆ ಮಾಡಿದ್ದು ಒಳ್ಳೆಯ ಕಾರ್ಯ. ಹೆಣ್ಮಕ್ಕಳಿಗಾಗಿ ಹೋರಾಡಿದವರಿಗೆ ಇದು ಸಮರ್ಪಣೆ ಮಾಡಬೇಕು.ಸಮಾಜಕ್ಕಾಗಿ, ಹೆಣ್ಮಕ್ಕಳಿಗಾಗಿ ಏನ್ ಕೆಲಸ‌ ಮಾಡಿದ್ದಾರೆ ಅದು ದೊಡ್ಡದು. ಹೆಣ್ಮಕ್ಕಳಿಗೆ ಶಿಕ್ಷಣ ಕೊಡಿಸಿದ್ರೆ ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತಾಗ್ತಿದೆ. ಹೆಣ್ಮಕ್ಕಳಿಗೆ ಶಕ್ತಿ ತುಂಬಬೇಕು. ಅದಕ್ಕಾಗಿ ನಾವು ಶಕ್ತಿ ಮತ್ತು ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಿದ್ದೇವೆ. ಅವರು ಹಣ ಉಳಿತಾಯ ಮಾಡಿದ್ಮೇಲೆ ಸಾಮಾಜಿಕ ಅವರಿಗೆ ಶಕ್ತಿ ಬಂದಂತಾಗುತ್ತದೆ. ಅದಕ್ಕಾಗಿ ಈ‌ ಕಾರ್ಯಕ್ರಮ ಮಾಡಿದ್ದೇವೆ ಎಂದರು.

ಒಂದು ಚಿತ್ರ ಸಾವಿರ ಪದಗಳಿಗಿಂತ ಹಚ್ಚು ಶಕ್ತಿಶಾಲಿ ಸಂದೇಶ ನೀಡುತ್ತದೆ. ಇಡೀ ಸಂಪ್ರದಾಯ, ಪರಂಪರೆಯನ್ನ ತೋರಿಸುತ್ತದೆ. ಅಂತಹ ಒಳ್ಳೆಯ ಕೆಲಸ ಚಿತ್ರಕಲಾ ಪರಿಷತ್ ನವರು ಮಾಡಿದ್ದಾರೆ. ಅದಕ್ಕಾಗಿ ಚಿತ್ರ ಸಂತೆ ಉದ್ಘಾಟನೆ ಮಾಡಿದ್ದೇನೆ. ಅದಕ್ಕಾಗಿ ನಿವೆಲ್ಲಾ ನೋಡಿ, ಚಿತ್ರವನ್ನ ಖರೀದಿ ಮಾಡಬೇಕು. ಮನೆಗೊಂದು ಕಲಾಕೃತಿ ಇರಬೇಕು.ಆರ್ ಆರ್ ನಗರದ ಕಟ್ಟಡಕ್ಕೆ ೨೦ ಕೋಟಿ ಅನುದಾನ ನೀಡಿದ್ದಾರೆ. ಚಿತ್ರ ಸಂತೆಗೂ ಅನುದಾನ ನೀಡ್ತಲೇ‌ ಬಂದಿದ್ದಾರೆ. ಈ‌ ಬಾರಿ ೫೦ ಲಕ್ಷ ಅನುದಾನ ಕೊಡಿಸಿದ್ದಾರೆ. ಉನ್ನತ ಶಿಕ್ಷಣ ಇಲಾಖೆ ಹಾಗು ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಕೊಡಿಸಿದ್ದಾರೆ.ಈ ಚಿತ್ರ ಸಂತೆ ಇಡೀ ಪ್ರಪಂಚದಲ್ಲಿ ಫೇಮಸ್ ಆಗಿದೆ. ಇದಕ್ಕೆ ಸಿಎಂ ಕಾರಣ ಅಂದ್ರೂ ತಪ್ಪಿಲ್ಲ ಹೆಣ್ಣುಮಕ್ಕಳ‌ ಭ್ರೂಣ ಹತ್ಯೆ, ದೌರ್ಜನ್ಯ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳು ನಡೆಯುತ್ತಿದೆ. ಈ ಹಿನ್ನೆಲೆ ಹೆಣ್ಣುಮಕ್ಕಳಿಗೆ ಈ‌ ಬಾರಿಯ ಚಿತ್ರ ಸಂತೆ ಅರ್ಪಣೆ ಎಂದರು.

ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ ಎಲ್  ಶಂಕರ್ ಅವರು ಮಾತನಾಡಿ ಆರ್ ಆರ್ ನಗರದ ಕಟ್ಟಡಕ್ಕೆ ೨೦ ಕೋಟಿ ಅನುದಾನ ನೀಡಿದ್ದಾರೆ. ಚಿತ್ರ ಸಂತೆಗೂ ಅನುದಾನ ನೀಡುತ್ತಲೇ‌ ಬಂದಿದ್ದಾರೆ. ಈ‌ ಬಾರಿ 50 ಲಕ್ಷ ಅನುದಾನ ಕೊಡಿಸಿದ್ದಾರೆ.ಉನ್ನತ ಶಿಕ್ಷಣ ಇಲಾಖೆ ಹಾಗು ಪ್ರವಾಸೋದ್ಯಮ ಇಲಾಖೆಯಿಂದ ಅನುದಾನ ಕೊಡಿಸಿದ್ದಾರೆ.ಈ ಚಿತ್ರ ಸಂತೆ ಇಡೀ ಪ್ರಪಂಚದಲ್ಲಿ ಫೇಮಸ್ ಆಗಿದೆ. ಇದಕ್ಕೆ ಸಿಎಂ ಕಾರಣ ಅಂದ್ರೂ ತಪ್ಪಿಲ್ಲ. ಹೆಣ್ಣುಮಕ್ಕಳ‌ ಭ್ರೂಣ ಹತ್ಯೆ, ದೌರ್ಜನ್ಯ ಸೇರಿದಂತೆ ಅನೇಕ ರೀತಿಯ ಸಮಸ್ಯೆಗಳು ನಡೆಯುತ್ತಿದೆ. ಈ ಹಿನ್ನೆಲೆ ಹೆಣ್ಣುಮಕ್ಕಳಿಗೆ ಈ‌ ಬಾರಿಯ ಚಿತ್ರ ಸಂತೆ ಅರ್ಪಣೆ ಎಂದು ತಿಳಿಸಿದ್ರು.