ಮನೆ Latest News ಕಾಲಭೈರವೇಶ್ವರ ಬಳಿ ಹೋಗ್ತಿದ್ದೇವೆ‌, ನೀನು ಬಾ; ಮುನಿರತ್ನಗೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಸವಾಲು

ಕಾಲಭೈರವೇಶ್ವರ ಬಳಿ ಹೋಗ್ತಿದ್ದೇವೆ‌, ನೀನು ಬಾ; ಮುನಿರತ್ನಗೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಸವಾಲು

0

ಬೆಂಗಳೂರು; ಶಾಸಕ  ಮುನಿರತ್ನ ಪ್ರಮಾಣ ಮಾಡಲು ಕರೆದಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಜಿ ಕಾರ್ಪೊರೇಟರ್ ವೇಲು ನಾಯ್ಕರ್ ಶಾಸಕ ಮುನಿರತ್ನ ಅವರಿಗೆ ಸವಾಲು ಹಾಕಿದ್ದಾರೆ.

ಮುನಿರತ್ನ ಪ್ರಮಾಣ ಮಾಡಲು ಕರೆದಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮುನಿರತ್ನ ತಪ್ಪು ಮಾಡಿಲ್ಲ ಎಂದು ಹೇಳಿದ್ರು. ನಾನು ಅತ್ಯಾಚಾರ ಮಾಡಿಲ್ಲ. ಕುಸುಮಾ ,ಹನುಂತರಾಯಪ್ಪ ಕೇಸ್ ಹಾಕಿಸಿದ್ದಾರೆ ಎಂದಿದ್ರು. ಮಾಡಿಲ್ಲ ಎಂದು ಆಣೆ ಮಾಡಲಿ ಅಂತಾ ಹೇಳಿದ್ರು. ಎಲ್ಲಾ‌ ಕೃತ್ಯ ಅವರೆ ಎಸಗಿ, ತಿರುಚೊ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.

ಜೈಲಿಗೆ ಹೋಗಿ ಬಂದ ಮೇಲೆ ಪ್ರಮಾಣ ಮಾಡಲು ಕರೆದಿದ್ದಾರೆ. ಎಫ್ಎಸ್ಎಲ್ ರಿಪೋರ್ಟ್ ಬಂದ ಮೇಲೆ ರಾಜೀನಾಮೆ ಕೊಡ್ತಿನಿ ಅಂದರು. ಆದರೆ ಆ ಕೆಲಸವನ್ನು ಮುನಿರತ್ನ ಮಾಡಿಲ್ಲ. ಮುನಿರತ್ನ ದೌರ್ಜನ್ಯ ಮರೆಮಾಚಲು ಈ ಕೆಲಸ ಮಾಡ್ತಿದ್ದಾರೆ. ಅವರೆ ಮೊಟ್ಟೆ ಹೊಡೆಸಿಕೊಂಡು ನಾಟಕ ಮಾಡ್ತಿದ್ದಾರೆ. ಅವರೇ ಸಂಚು ರೂಪಿಸಿ ಈ ರೀತಿ ಮಾಡ್ತಿದ್ದಾರೆ. ಮುನಿರತ್ನ ನಾಟಕ ನಂಬಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ರು. ಹನುಂತರಾಯಪ್ಪ, ಕುಸುಮ ಆಣೆ ಮಾಡಿ ಅಂತಾ ಹೇಳಿದ್ರು. ಅವರು ಯಾಕೆ ಬಂದು ಆಣೆ ಮಾಡಬೇಕು. ನೀವು ಹೇಳಿರೋದು ನಿಜ ಎಂದು ಆಣೆ ಮಾಡಲು ನಾನು ಹೊರಟಿದ್ದೇನೆ. ನನ್ನ ಜಾತಿ ನಿಂದನೆ ಮಾಡಿರೋದು ನಿಜ‌ ಅನ್ನೋದಕ್ಕ ಆಣೆ ಮಾಡಲು ಹೊರಡ್ತಿದ್ದೇನೆ. ಕಾಲಭೈರವೇಶ್ವರ ಬಳಿ ಹೋಗ್ತಿದ್ದೇವೆ‌. ನೀನು ಬಾ ಎಂದು ವೇಲು ನಾಯ್ಕರ್ ಸವಾಲು ಹಾಕಿದ್ದಾರೆ. ಆದಿ ಚುಂಚನಗಿರಿ ದೇವಸ್ಥಾನಕ್ಕೆ ನಾವು ಹೊರಟಿದ್ದೇವೆ ಎಂದಿದ್ದಾರೆ.