ಮನೆ Latest News ಹನಮಂತುಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಹಾಕಿದ ಮನೆ ಮಂದಿ: ಥ್ಯಾಂಕ್ಯೂ, ಧನ್ಯವಾದ ಎಂದ ಹಳ್ಳಿ...

ಹನಮಂತುಗೆ ಕಳಪೆ ಪಟ್ಟ ಕೊಟ್ಟು ಜೈಲಿಗೆ ಹಾಕಿದ ಮನೆ ಮಂದಿ: ಥ್ಯಾಂಕ್ಯೂ, ಧನ್ಯವಾದ ಎಂದ ಹಳ್ಳಿ ಹೈದ

0

ಬಿಗ್ ಬಾಸ್ ಮನೆಯ ಕಿಲಾಡಿ ಜಾಣ ಎಂದು ಗುರುತಿಸಿಕೊಂಡಿರುವ ಹನುಮಂತು ಇದೀಗ ಜೈಲು ಸೇರಿದ್ದಾರೆ. ಬಿಬಿ ರೆಸಾರ್ಟ್ ಟಾಸ್ಕ್ ನಲ್ಲಿ ಹನಮಂತು ಬೇರೆ ಟಾಸ್ಕ್ ಗಳಿಗೆ ಕಂಪೇರ್ ಮಾಡಿದ್ರೆ ಚೆನ್ನಾಗಿ ಆಟ ಆಡಿಲ್ಲ ಅನ್ನೋ ಕಾರಣವನ್ನು ಕೊಟ್ಟು ಅವರಿಗೆ ಕಳಪೆ ಕೊಟ್ಟು ಜೈಲಿಗೆ ಹಾಕಲಾಗಿದೆ. ಆ ಮೂಲಕ ವೀಕೆಂಡ್ ಬಂದ್ರೆ ಜೈಲು ಸೇರುತ್ತಿದ್ದ ಚೈತ್ರಕ್ಕ ಸೇಫ್ ಆಗಿದ್ದಾರೆ.

ಸದ್ಯ ಹೊರ ಬಿದ್ದಿರೋ ಪ್ರೋಮೋದಲ್ಲಿ ನೀವು ಗಮನಿಸಿರಬಹುದು ಹನುಮಂತು ಅವರಿಗೆ ಕಳಪೆ ಕೊಟ್ಟಾಗ ಅದನ್ನು ಅವರು ನಗುತ್ತಲೇ ಸ್ವೀಕರಿಸುತ್ತಾರೆ. ಖುಷಿಯಾಗಿಯೇ ಜೈಲು ಸೇರ್ತಾರೆ. ಎಲ್ಲದಕ್ಕಿಂತ ಅಚ್ಚರಿ ಅನ್ಸಿದ್ದು ಜೀವದ ಗೆಳೆಯ ಧನ್ ರಾಜ್ ಆಚಾರ್ ಅವರು ಹನುಮಂತು ಅವರಿಗೆ ಕಳಪೆ ಕೊಡ್ತಾರೆ. ತುಂಬಾ ತಪ್ಪು ಅನ್ನಿಸುವ ಹಾಗೇ ಕಾಣಿಸಿದ್ದು ಹನುಮಂತ ಅವರು ಹಾಗಾಗಿ ಅವರಿಗೆ ನಾನು ಕಳಪೆ ಕೊಡ್ತೇನೆ ಅಂತಾ ಕಳಪೆ ಕೊಡ್ತಾರೆ. ಹಾಗೇ ಗೌತಮಿ ಅವರು ಕೂಡ ಕಳಪೆ ಕೊಡ್ತಾರೆ. ನಾನು ಬಿಬಿ ರೆಸಾರ್ಟ್ ಟಾಸ್ಕ್ ನಲ್ಲಿ ಅತಿಥಿಗಳ  ಕೆಲಸ ಮಾಡುವ ಜೊತೆಗೆ ನಿಮ್ಮ ಕೆಲಸ ಕೂಡ ಮಾಡ್ಬೇಕಾಗಿತ್ತು. ಹಾಗಾಗಿ ಕಳಪೆ ಕೊಡ್ತೀನಿ ಅಂತಾರೆ. ಇನ್ನು ಉಗ್ರಂ ಮಂಜು ಅವರು ನಿಮ್ಮ ನಡವಳಿಕೆ ನಮಗೆ ಕಿರಿಕಿರಿ ಅನ್ನಿಸಿತು ಅಂತಾ ಕಳಪೆ ಕೊಡ್ತಾರೆ. ಚೈತ್ರಾ ಕುಂದಾಪುರ ಅವರು ಟಾಸ್ಕ್ ನಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಬೇಕು ಅನ್ನೋ ನಿಯಮ ಇತ್ತು. ಆದರೆ ನೀವು ಅದನ್ನು ಮಾಡಿಲ್ಲ ಎಂದು ಕಾರಣ ಕೊಟ್ಟು ಹನುಮಂತ ಅವರಿಗೆ ಕಳಪೆ ಕೊಡುತ್ತಾರೆ. ಇನ್ನು ಉಳಿದಂತೆ ಮೋಕ್ಷಿತಾ, ರಜತ್ ಕಿಶನ್ ಕೂಡ ಕಳಪೆ ಕೊಡುತ್ತಾರೆ. ಕೊನೆಗೆ ಅತೀ ಹೆಚ್ಚು ಕಳಪೆ ಪಟ್ಟ ಪಡೆದ ಹನುಮಂತು ಜೈಲು ಸೇರ್ತಾರೆ. ಈ ವೇಳೆ ಅವರು ಹೇಳುವ ಡೈಲಾಗ್ ಅವರಲ್ಲಿ ಗೇಮ್ ಸ್ಪಿರಿಟ್ ಹೇಗಿದೆ ಅನ್ನೋದನ್ನು ತೋರಿಸಿತು. ಥ್ಯಾಂಕ್ಯೂ ಧನ್ಯವಾದಗಳು ನೀವು ಕಳಪೆ ಕೊಟ್ಟಿದ್ದೀರಿ ಅಂತಾ ನಾನು ಕುಗ್ಗೋದು ಇಲ್ಲ ಬಗ್ಗೋದು ಇಲ್ಲ ಅಂತಾ ಖುಷಿಯಿಂದ ಜೈಲು ಸೇರ್ತಾರೆ.

ಇಲ್ಲಿ ಹಳ್ಳಿ ಹೈದ ಹನಮಂತು ಅವರು ಕಳಪೆ ಪಟ್ಟ ಸಿಕ್ಕಿ ಜೈಲು ಸೇರಿದ್ದು ಮ್ಯಾಟರ್ ಅಲ್ಲ. ಬದಲಾಗಿ  ಹನುಮಂತ ತನಗೆ ಕಳಪೆ ಸಿಕ್ಕಾಗ ಅದನ್ನು ಸ್ವೀಕರಿಸಿದ ರೀತಿ ಪ್ರತಿಯೊಬ್ಬರಿಗೂ ಸ್ಫೂರ್ತಿ. ವೀಕೆಂಡ್ ಎಪಿಸೋಡ್ ನಲ್ಲಿ ಕಿಚ್ಚ ಸುದೀಪ್ ಅವರು ರಜತ್ ಅವರ ಬಳಿ ಒಂದು ಮಾತನ್ನು ಕೇಳ್ತಾರ. ನಿಮಗೆ ಈ ಮನೆಯಲ್ಲಿ ಟಫೆಸ್ಟ್ ಕಾಂಪಿಟೀಟರ್ ಯಾರು ಅಂತಾ ಆಗ, ಹನುಮಂತ ಅವರ ಹೆಸರನ್ನು ರಜತ್ ತೆಗೆದುಕೊಳ್ಳುತ್ತಾರೆ. ಆಗ ಕಿಚ್ಚ ಹನುಮಂತ ನಿಮಗೆ ಕಾಂಪಿಟೀಟರಾ ಎಂದು ಮತ್ತೆ ಪ್ರಶ್ನೆ ಹಾಕಿದಾಗ ಹೌದು.. ಆತ ಮೆಂಟಲಿ ಸ್ಟ್ರಾಂಗ್ ಇದ್ದಾನೆ ಅನ್ನೋ ಉತ್ತರ ಕೊಡ್ತಾರೆ ರಜತ್. ಅದಕ್ಕೆ ಸುದೀಪ್ ಯೆಸ್… ಮೆಂಟಲಿ ಅವರಷ್ಟು ಸ್ಟ್ರಾಂಗ್ ಈ ಮನೇಲಿ ಯಾರೂ ಇಲ್ಲ ಎನ್ನುತ್ತಾರೆ.

ಹೌದು.. ಸುದೀಪ್ ಅವರು ಹೇಳಿದ ಮಾತು 100 ಪರ್ಸೆಂಟ್ ನಿಜ. ದೊಡ್ಮನೆಯಲ್ಲಿ ಹನುಮಂತ ರೀತಿ ಆಟವನ್ನು ಅರ್ಥ ಮಾಡಿಕೊಂಡ ಸ್ಪರ್ಧಿ ಇನ್ನೊಬ್ಬರಿಲ್ಲ. ಪ್ರತಿ ಬಾರಿ ನಾಮಿನೇಷನ್ ವಿಚಾರಕ್ಕೆ ಬಂದಾಗ ನಾಮಿನೇಟ್ ಆದ ಬಹುತೇಕ ಸ್ಪರ್ಧಿಗಳು ಸಿಕ್ಕಾಪಟ್ಟೆ ವಾದ ಮಾಡ್ತಾರೆ. ನೀವು ಕೊಡೋ ಕಾರಣ ಸರಿ ಇಲ್ಲ ಅಂತಾ ಆರ್ಗ್ಯು ಮಾಡ್ತಾರೆ. ಆದರೆ ಹನುಮಂತ ಅವರು ಯಾವತ್ತೂ ಅರ್ಥವಿಲ್ಲದ ವಾದ ಮಾಡಿದವರಲ್ಲ. ಆಟ ಅಂದರೆ ಸೋಲು ಗೆಲುವು ಇದ್ದಿದ್ದೇ ಅನ್ನೋದು ಹನುಮಂತು ಪ್ರತಿ ಬಾರಿ ಹೇಳೋ ಮಾತು. ಇದೇ ಕಾರಣಕ್ಕೆ ಇರಬೇಕು ಕಿಚ್ಚ ಸುದೀಪ್ ಹನುಮಂತ ಅವರು ಮಾತ್ರ ಆಟವನ್ನು ಸರಿಯಾಗಿ ಅರ್ಥ ಮಾಡಿಕೊಂಡಿರೋದು ಅನ್ನೋದು.

ಸದ್ಯಕ್ಕೆ ಹನುಮಂತು ಅವರ ಆಟ ನೋಡಿದ ಬಹುತೇಕರು ಹನುಮಂತು ಅವರು ಚೆನ್ನಾಗಿ ಆಟ ಆಡುತ್ತಿದ್ದಾರೆ. ಅವರು ಬಿಗ್ ಬಾಸ್ ವಿನ್ನರ್ ಆಗ್ತಾರೆ ಎಂದು ಹೇಳ್ತಿದ್ದಾರೆ. ಬಿಗ್ ಬಾಸ್ ವಿನ್ನರ್ ಆಗೋದಕ್ಕೆ ಹನುಮಂತು ಅವರಲ್ಲಿ ಎಲ್ಲಾ ಸಾಮರ್ಥ್ಯ ಇದೆ. ಹಾಗಾಗಿ ಅವರು ಗೆಲ್ಲೋದು ಖಚಿತ ಅಂತಿದ್ದಾರೆ.