ಮನೆ Latest News ನಟ ಶಿವರಾಜ್ ಕುಮಾರ್ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯು ಟಿ...

ನಟ ಶಿವರಾಜ್ ಕುಮಾರ್ ಶೀಘ್ರ ಚೇತರಿಕೆಗೆ ಶುಭ ಹಾರೈಸಿದ ಸಿಎಂ ಸಿದ್ದರಾಮಯ್ಯ, ಸ್ಪೀಕರ್ ಯು ಟಿ ಖಾದರ್

0

ಬೆಂಗಳೂರು: ಅನಾರೋಗ್ಯದ ನಿಮಿತ್ತ ಅಮೇರಿಕಾಗೆ ಚಿಕಿತ್ಸೆಗಾಗಿ ತೆರಳಲಿರುವ ನಟ ಶಿವರಾಜ್ ಕುಮಾರ್ ಶೀಘ್ರ ಚೇತರಿಕೆಗೆ ಸಿಎಂ ಸಿದ್ದರಾಮಯ್ಯ ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಸಿಎಂ ಸಿದ್ದರಾಮಯ್ಯ ಇಂದು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವ ಕನ್ನಡ ಚಿತ್ರರಂಗದ ಖ್ಯಾತ ನಟ ಶಿವರಾಜ್ ಕುಮಾರ್ ಅವರಿಗೆ ಕರೆಮಾಡಿ ಮಾತನಾಡಿ, ಶೀಘ್ರ ಗುಣಮುಖರಾಗುವಂತೆ ಹಾರೈಸಿದ್ದೇನೆ. ನನಗೆ ತಿಳಿದಂತೆ ಶಿವರಾಜ್ ಕುಮಾರ್ ಅವರ ಆತ್ಮವಿಶ್ವಾಸ, ಧೈರ್ಯ ಮತ್ತು ಸಹೃದಯತೆ ಅವರನ್ನು ಈ ಹೋರಾಟದಲ್ಲಿ ಗೆಲ್ಲಿಸಿಕೊಂಡು ಬರಲಿದೆ ಎಂಬ ವಿಶ್ವಾಸವಿದೆ. ಬದುಕಿನ ದಾರಿಯಲ್ಲಿ ಎದುರಾಗಿರುವ ಈ ಸಣ್ಣ ಸಂಕಷ್ಟವನ್ನು ನಿವಾರಿಸಿಕೊಂಡು ಆರೋಗ್ಯವಂತರಾಗಿ ಬರಲಿರುವ ಶಿವರಾಜಕುಮಾರ್ ಅವರ ಆಗಮನವನ್ನು ಎದುರು ನೋಡುತ್ತಿರುವ ಅವರ ಹಿತೈಷಿಗಳಲ್ಲಿ ನಾನೂ ಒಬ್ಬ. ನಾಡಿನ ಹಿರಿಯರ ಆಶೀರ್ವಾದ ಮತ್ತು ಕಿರಿಯರ ಶುಭಹಾರೈಕೆ ಶಿವರಾಜಕುಮಾರ್ ಅವರ ಜೊತೆಗಿದ್ದು ಅವರನ್ನು‌ ಕಾಪಾಡಲಿದೆ ಎಂದಿದ್ದಾರೆ.

ಇನ್ನು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದು ನಮ್ಮೆಲ್ಲರ ನೆಚ್ಚಿನ ನಟ ಡಾ. ಶಿವರಾಜ್‌ ಕುಮಾರ್‌ ಅವರು ಇಂದು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದು, ಅತೀ ಶೀಘ್ರದಲ್ಲಿ ಗುಣಮುಖರಾಗಲಿ ಎಂದು ಪ್ರಾರ್ಥಿಸುತ್ತೇನೆ. ಕೋಟ್ಯಂತರ ಕನ್ನಡಿಗರ ಆಶೀರ್ವಾದ ಹಾಗೂ ಹಿತೈಷಿಗಳ ಪ್ರಾರ್ಥನೆ ಅವರ ಜೊತೆಗಿದ್ದು ಆರೋಗ್ಯವಂತರಾಗಿ ಮರಳಲಿದ್ದಾರೆ ಎನ್ನುವ ವಿಶ್ವಾಸ ನಮ್ಮೆಲ್ಲರದ್ದಾಗಿದೆ ಎಂದಿದ್ದಾರೆ.

ಕ್ಯಾನ್ಸರ್ ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ ನಟ ಶಿವರಾಜ್ ಕುಮಾರ್ ; ಕುಟುಂಬದವರನ್ನು ನೋಡಿ ಭಾವುಕರಾದ ಶಿವಣ್ಣ

ಬೆಂಗಳೂರು: ಕಾನ್ಯರ್ ನಿಂದ ಬಳಲುತ್ತಿರುವ ನಟ ಶಿವರಾಜ್ ಕುಮಾರ್ ಅವರು ಇಂದು ಚಿಕಿತ್ಸೆಗಾಗಿ ಅಮೇರಿಕಾಗೆ ತೆರಳಿದ್ರು. ಈ ವೇಳೆ ಅವರನ್ನು ಬೀಳ್ಕೊಡಲು ಬಂದ ಕುಟುಂಬದವರನ್ನು ನೋಡಿ ಭಾವುಕರಾದ್ರು.

ಇನ್ನು ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶಿವರಾಜ್ ಎಲ್ಲಾ ಚೆಕ್ ಅಪ್ ಮಾಡಿಸಲಾಗಿದೆ. ಎಲ್ಲವೂ ಸರಿಯಾಗಿದೆ. ಒಂದಷ್ಟು ಆತಂಕ ಅನ್ನೋದು ಇರುತ್ತೆ. ಹೀಗಾಗಿ ಫ್ಯಾಮಿಲಿಯವರು, ಫ್ರೆಂಡ್ಸ್ ಬಂದು ಧೈರ್ಯ ಹೇಳ್ತಿದ್ದಾರೆ. 24ನೇ ತಾರೀಖು ಸರ್ಜರಿ ಆಗುತ್ತೆ. ಇಷ್ಟು ದಿನಗಳಾಗಿರೋದ್ರಿಂದ ಒಂದಷ್ಟು ಆತಂಕ ಇರುತ್ತೆ ಎಂದಿದ್ದಾರೆ.

ಮುರುಗೇಶ್ ಎಂಬ ಡಾಕ್ಟರ್ ಚಿಕಿತ್ಸೆ ನೀಡ್ತಾರೆ. ಆರಾಮಾಗಿ ಬನ್ನಿ ಸಾರ್.. ಭಯ ಪಡಬೇಕಿಲ್ಲ ಅಂತಾ ಹೇಳಿದ್ರು. 25ಗೆ ಫ್ಲೈಟ್ ಹತ್ತಿ 26ಗೆ ನಾನು ಇಲ್ಲಿರ್ತೀನಿ. ಜನವರಿ ಫಸ್ಟ್ ಅನ್ನು ಮಿಸ್ ಮಾಡ್ಕೋತಿನಿ. ಎಲ್ಲರಿಗೂ 2025 ಒಳ್ಳೆಯದನ್ನು ಮಾಡಲಿ. ಸುದೀಪ್ ಮ್ಯಾಕ್ಸ್ ಸಿನಿಮಾಗೆ ಒಳ್ಳೆಯದಾಗಲಿ. ಇಯರ್ ಎಂಡ್ ಅಲ್ಲಿ ರಿಲೀಸ್ ಆಗ್ತಿರುವ ಎಲ್ಲಾ ಸಿನಿಮಾಗಳಿಗೂ ಒಳ್ಳೆಯದಾಗಲಿ. ಯಾರೂ ಆತಂಕ ಪಡಬೇಕಿಲ್ಲ.. ಎಲ್ಲಾ ವೈದ್ಯರೂ ಧೈರ್ಯ ತುಂಬಿದ್ದಾರೆ. ಅಪರೇಷನ್ ಮಾಡುವ ಡಾ.ಮುರುಗೇಶ್ ಜೊತೆ ಮಾತನಾಡಿದ್ದೀನಿ. ಅಮೇರಿಕಾದ MSK ಕ್ಯಾನ್ಸರ್ ಆಸ್ಪತ್ರೆಯಲ್ಲಿ ಅಪರೇಷನ್ ಆಗುತ್ತೆ. ನ್ಯೂರಾಲಜಿಸ್ಟ್ ಕೂಡ ಒಂದಷ್ಟು ಸಲಹೆ ನೀಡಿದ್ದಾರೆ. ಬ್ಲಡ್ ರಿಪೋರ್ಟ್ ಸೇರಿ ಎಲ್ಲಾ ರಿಪೋರ್ಟ್ ಗಳು ಪಾಸಿಟಿವ್ ಆಗಿಯೇ ಬಂದಿವೆ. ಅಭಿಮಾನಿಗಳು ಬಂದಿದಾರೆ.. ಇಂತಹ ಟೈಮಲ್ಲಿ ನಮಗೆ ಧೈರ್ಯ ಹೇಳ್ತಿದ್ದಾರೆ ಎಲ್ಲರಿಗೂ ಧನ್ಯವಾದಗಳು ಎಂದಿದ್ದಾರೆ.

ಇನ್ನು ಅಮೇರಿಕಾ ತೆರಳುವ ಮುನ್ನ ನಟ ಕಿಚ್ಚ ಸುದೀಪ್ ಅವರು ಶಿವರಾಜ್ ಕುಮಾರ್ ಅವರನ್ನು ಅವರ ಮನೆಯಲ್ಲಿ ಭೇಟಿ ಮಾಡಿ ಮಾತುಕತೆ ನಡೆಸಿದ್ರು. ಶಿವಣ್ಣನಿಗೆ ಧೈರ್ಯ ಕೂಡ ಹೇಳಿದ್ರು.