ಮನೆ Latest News ವಿಧಾನಪರಿಷತ್ ಸದಸ್ಯರ ವರ್ತನೆಗೆ ಬಸವರಾಜ್ ಹೊರಟ್ಟಿ ಬೇಸರ

ವಿಧಾನಪರಿಷತ್ ಸದಸ್ಯರ ವರ್ತನೆಗೆ ಬಸವರಾಜ್ ಹೊರಟ್ಟಿ ಬೇಸರ

0

ಬೆಳಗಾವಿ; ಇಂದು ವಿಧಾನಪರಿಷತ್ ಕಲಾಪ ತಡವಾಗಿ ಆರಂಭವಾಗಿದ್ದಕ್ಕೆ ಸದಸ್ಯರು ಸಭಾಪತಿಬಸವರಾಜ ಹೊರಟ್ಟಿ ವಿರುದ್ಧ ಅಸಾಮಾಧಾನ ಹೊರ ಹಾಕಿದ್ರು. ಡಾಕ್ಯುಮೆಂಟರಿ ರಿಲೀಸ್ ಕಾರ್ಯಕ್ರಮವೊಂದನ್ನು ಅಟೆಂಡ್ ಮಾಡಿದ ಬಸವರಾಜ ಹೊರಟ್ಟಿ ತಡವಾಗಿ ಆಗಮಿಸಿದ್ದರಿಂದ ಕಲಾಪ ತಡವಾಗಿ ಆರಂಭವಾಯಿತು. ಕಲಾಪ ತಡವಾಗುವ ಬಗ್ಗೆ ಯಾಕೆ ಮಾಹಿತಿ ನೀಡಿಲ್ಲ ಎಂದು ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ರು.

ಬೇರೆಯವರು ಏರ್ಪಡಿಸಿದ್ದ ಕಾರ್ಯಕ್ರಮ ಹೀಗಾಗಿ ಆಹ್ವಾನ ನೀಡಿಲ್ಲ ಎಂದು ಹೊರಟ್ಟಿ ಸಮಾಜಯಿಷಿ ನೀಡಿದ್ರು. ತಡವಾಗಿದ್ದು ಪರವಾಗಿಲ್ಲ, ಇನ್ನೊಂದು ವಾರ ಸದನ ನಡೆಸಿ ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ರು. ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಚರ್ಚೆಯೇ ಶುರುವಾಗಿಲ್ಲ ಸದನ ಹೆಚ್ಚು ಮಾಡಿ ಎಂದು ಗದ್ದಲ ಮಾಡಿದ್ರು. ಮತ್ತೆ ಟೈಂ ಹಾಳು ಮಾಡುವುದು ಬೇಡ ಈಗ ಚರ್ಚೆ ಶುರು ಮಾಡೋಣ ಎಂದು ಎಚ್ ಕೆ ಪಾಟೀಲ್, ಕೃಷ್ಣ ಭೈರೇಗೌಡ ಹೇಳಿದ್ದಾರೆ.

ಇದೇ ವೇಳೆ ಕಾಫಿ ಟೀ ಬಿಟ್ಟರೆ ಏನೂ ಸಿಗಲ್ಲ ಸಭಾಪತಿ ಗಳೇ ಎಂದು ಡಿ ಎಸ್ ಅರುಣ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.ಬೆಳಗ್ಗೆಯಿಂದ ರಾತ್ರಿ ತನಕ ಇಲ್ಲಿಯೇ ಇರ್ತೇವೆ.ವಿಧಾನಸಭೆ ಲೌಂಜ್ ನಲ್ಲಿ ಪಾನಿಪೂರಿ ಆಮ್ಲೆಟ್ ಎಲ್ಲ ಇರುತ್ತದೆ ನಮಗೆ ಮಾತ್ರ ಯಾಕಿಲ್ಲ ಎಂದು ಅರುಣ್  ಪ್ರಶ್ನಿಸಿದ್ದಾರೆ.ಮುಂದಿನ ಸಲ ನಿಮಗೂ ಅರೇಂಜ್ ಮಾಡೋಣ ಎಂದು ಹೊರಟ್ಟಿ ಹೇಳಿದ್ದಾರೆ.

ವಿನಾಕಾರಣ ಪರಿಷತ್ ನಲ್ಲಿ ಗಲಾಟೆ ಹಿನ್ನಲೆ ಪರಿಷತ್  ಸದಸ್ಯರ ವರ್ತನೆಗೆ ಸಭಾಪತಿ ಹೊರಟ್ಟಿ ಬೇಸರಗೊಂಡಿದ್ದಾರೆ. ತಮ್ಮ ಕಚೇರಿಯಲ್ಲಿ ಕುಳಿತ್ರು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಬಸವರಾಜ ಹೊರಟ್ಟಿ ನಮ್ಮ ಪರಿಷತ್ ನಲ್ಲಿ ನಾನು 45 ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. 1 ತಾಸು ಪ್ರಶ್ನೋತ್ತರ ವೇಳೆ ಇರುತ್ತೆ. ಒಂದೊಂದೇ ಪ್ರಶ್ನೆಗೆ ಎಲ್ರೂ ಎದ್ದು ಗಲಾಟೆ ಮಾಡ್ತಾರೆ. ಬೆಲ್ ಹೊಡೆದರೂ ಕೇಳಲ್ಲ, ಎದ್ದು ಎದ್ದು ಮಾತಾಡ್ತಾರೆ. ಸದನ ನಡೆಸೋದೇ ಕಷ್ಟ ಆಗ್ತಾ ಇದೆ. ತಾಳ್ಮೆ ಕಳೆದುಕೊಂಡರೆ ನಾವೇನು ಆಗ್ತೀವೋ ಗೊತ್ತಿಲ್ಲ. ಸಭಾಪತಿ ಮಾತು ಕೇಳದಿದ್ದರೆ ಸದನ ನಡೆಸೋದು ಕಷ್ಟ .ಒಬ್ಬೊಬ್ರು 20 ನಿಮಿಷ ತಗೊಳ್ತಾರೆ. ಸಭಾಪತಿ ಅನುಮತಿ ಇಲ್ಲದೇ ಮಾತಾಡಬಾರದು ಎಂದು ನಿಯಮ ಇದ್ದರೂ ಅದನ್ನ ಮೀರ್ತಾರೆ. ಸಹಜವಾಗೇ ಬೇಸರ ಆಗಿ ನಿನ್ನೆ ಸದನದಿಂದ ಎದ್ದು ಬಂದೆ. ಹಿಂದೆ ಮೂರು ವರ್ಷಗಳ ಹಿಂದೆ ಈ ತರ ಆಗಿತ್ತು. ಯಾರೇ ಪ್ರಶ್ನೆ ಕೇಳಿದರೂ ಉಪ ಪ್ರಶ್ನೆ ಕೇಳಲು ಅವಕಾಶ ಇರುತ್ತೆ . ಆದರೆ ಎಲ್ಲರೂ ಎದ್ದು ಪ್ರಶ್ನೆ ಕೇಳಿದರೆ ಹೇಗೆ?. ನಮಗೂ ಸ್ಪೀಕರ್ ಗೂ ಭಿನ್ನಾಭಿಪ್ರಾಯ ಇಲ್ಲ. ಇಂದು ಬೆಳಿಗ್ಗೆ ತಾನೇ ಮಾತಾಡಿದಿನಿ. ಅವರ ತಂದೆ ಕಾಲದಲ್ಲಿ ಬಂದವನು ನಾನು. ಚುಕ್ಕೆ ಗುರುತಿಲ್ಲದ ಸುಮಾರು 300 ಕ್ಕೂ ಹೆಚ್ಚು ಪ್ರಶ್ನೆಗೆ ಉತ್ತರ ಬರಬೇಕಿದೆ. ನಾವು ಮಾದರಿಯಾಗಿರಬೇಕು. ಇದು ಚಿಂತಕರ ಚಾವಡಿಯಾಗೇ ಇರಬೇಕು. ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚಿಸಲು ಮುಂದಿನವಾರವೂ ಅಧಿವೇಶನ ಮುಂದುವರೆಸೋ ಬಗ್ಗೆ  ಸರ್ಕಾರ ತೀರ್ಮಾನ ಮಾಡಬೇಕು. ಸದನ ನಡೆಸೋದಷ್ಟೆ ನಮ್ಮ ಜವಾಬ್ದಾರಿ. ಸರ್ಕಾರ ಬೇಕಾದರೆ ತೀರ್ಮಾನ ಮಾಡಲಿ ಎಂದಿದ್ದಾರೆ.