ಬೆಳಗಾವಿ; ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸ್ವತಃ ಬಿಜೆಪಿಯೇ ತಿರಸ್ಕಾರ ಮಾಡಿದೆ ಎಂದು ಬೆಳಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.
ಬೆಳಗಾವಿಯಲ್ಲಿ ಮಾತನಾಡಿದ ಅವರು ಯಡಿಯೂರಪ್ಪ, ಸದಾನಂದಗೌಡ, ಜಗದೀಶ್ ಶೆಟ್ಟರ್, ಮಾಣಿಪ್ಪಾಡಿ ಅವರ ವರದಿಯನ್ನು ಮಂಡನೆ ಮಾಡಿಲ್ಲ. ಇದಕ್ಕೆ ಉತ್ತರವನ್ನು ಬಿಜೆಪಿಯವರು ತಮ್ಮ ಸ್ವಂತ ಕಚೇರಿಯಲ್ಲಿ ಹುಡುಕಾಡಲಿ. ಈ ಗೊಂದಲವನ್ನು ಕಾಂಗ್ರೆಸ್ ಸೃಷ್ಟಿ ಮಾಡಿಲ್ಲ.ಈ ಆರೋಪ ಮಾಡಿದ್ದು ಬಿಜೆಪಿಯವರು ಎಂದಿದ್ದಾರೆ.
ಈಗ ಅವರೇ ಇದಕ್ಕೆ ಸ್ಪಷ್ಟನೆ ನೀಡಲಿ.ಮಾಣಿಪ್ಪಾಡಿ ಅವರು ಇವಾಗ ನಿಜ ಹೇಳುತ್ತಿದ್ದಾರಾ? ಇವಾಗ ನಿಜ ಹೇಳುತ್ತಿದ್ದಿದ್ದಾರಾ?. ಅವರ ನಾಯಕರ ವಿರುದ್ಧ ಮಾಣಿಪ್ಪಾಡಿ ಆರೋಪ ಮಾಡಿದರು .ಅವರನ್ನು ಯಾಕೆ ಉಚ್ಚಾಟನೆ ಮಾಡಿಲ್ಲ?.ಯಾಕೆ ಅವರ ಮೇಲೆ ಕ್ರಮ ಯಾಕೆ ಆಗಿಲ್ಲ.ನಮ್ಮ ಹತ್ತಿರ ಕೂಗಾಡಿದ್ರ ಹಾಗಲ್ಲ ಅವರ ಪಕ್ಷ ಕಚೇರಿಯಲ್ಲಿ ಉತ್ತರ ಹುಡುಕಲಿ.ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ 1,500 ಆರೋಪ ಹೇಳಿಕೆ ನಿಜ ಇರಬಹುದು.ಇದರಲ್ಲಿ ಒಟ್ಟು 4 ಲಕ್ಷ ಕೋಟಿ ಆರೋಪ ಕೇಳಿ ಬಂದಿದೆ. 1500 ಕೋಟಿ ಆರೋಪ ನಿಜ ಇರಬಹುದು ಎಂದಿದ್ದಾರೆ.
ಜೋಶಿ ಅವರಿಗೆ ಕೇಂದ್ರದಿಂದ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯ ಬಗ್ಗೆ ಮಾತನಾಡಲು ಸಮಯ ಇಲ್ಲ.ಇಂತಹ ತಪ್ಪು ವಿಚಾರ ಮಾತನಾಡುತ್ತಾರೆ. ಇಂತಹ ವಿಚಾರಕ್ಕೆ ಇಂದ್ರ ಚಂದ್ರ ಅಂತ ಕಥೆ ಕಟ್ತಾರೆ.ಅವರು ಕೇಂದ್ರ ಸಚಿವರು ಅವರ ಹೇಳಿಕೆ ನೀಜ ಇರಬಹುದು ಎಂದಿದ್ದಾರೆ.
ಮನೆ Latest News ಅನ್ವರ್ ಮಾಣಿಪ್ಪಾಡಿ ವರದಿಯನ್ನು ಸ್ವತಃ ಬಿಜೆಪಿಯೇ ತಿರಸ್ಕಾರ ಮಾಡಿದೆ: ಬೆಳಗಾವಿಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ











