ಮನೆ Latest News ಚಿಕ್ಕಮಗಳೂರಿನಲ್ಲೊಬ್ಬ ಪಾಪಿ ವೈದ್ಯ; ಪತ್ನಿಯನ್ನು ಗೃಹಬಂಧನದಲ್ಲಿಟ್ಟು ನಾಲ್ಕು ವರ್ಷದಿಂದ ಚಿತ್ರಹಿಂಸೆ ಕೊಡುತ್ತಿದ್ದ ಕ್ರೂರಿ

ಚಿಕ್ಕಮಗಳೂರಿನಲ್ಲೊಬ್ಬ ಪಾಪಿ ವೈದ್ಯ; ಪತ್ನಿಯನ್ನು ಗೃಹಬಂಧನದಲ್ಲಿಟ್ಟು ನಾಲ್ಕು ವರ್ಷದಿಂದ ಚಿತ್ರಹಿಂಸೆ ಕೊಡುತ್ತಿದ್ದ ಕ್ರೂರಿ

0

ಚಿಕ್ಕಮಗಳೂರಿನಲ್ಲೊಬ್ಬ ಪಾಪಿ ವೈದ್ಯ ಅಸಲೀಮುಖ ಕೊನೆಗೂ ಬಯಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಆಕೆಗೆ ಚಿತ್ರಹಿಂಸೆ ಕೊಡುತ್ತಿದ್ದ ವೈದ್ಯ ವಿರುದ್ಧ ಕೊನೆಗೂ ದೂರು ದಾಖಲಾಗಿದೆ.

ಅಂದ್ಹಾಗೆ ಏನಿದು ಕಥೆ ಅಂತೀರಾ.. ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿಯಾಗ ವೈದ್ಯ ಡಾ ರವಿಕುಮಾರ್ ವೃತ್ತಿಯಲ್ಲಿ ವೈದ್ಯ. ಆದರೆ ಈತ ಮಾಡಿದ್ದು ದೇವರು ಮೆಚ್ಚದ ಕೆಲಸ. ಇದೇ ಪಾಪಿ ರವಿಕುಮಾರ್ 22 ವರ್ಷಗಳ ಹಿಂದೆ ಚಿಕ್ಕಮಗಳೂರು ನಗರದ ದೋಣಿಕಣ ನಿವಾಸಿಯಾದ 45 ವರ್ಷದ ವಿನುತಾರಾಣಿಯನ್ನ 22 ವರ್ಷದ ಹಿಂದೆ ಡಾ.ರವಿಕುಮಾರ್ ಜೊತೆ ಮದುವೆ ಮಾಡಿಕೊಡಲಾಗಿತ್ತು. ದಂಪತಿಗೆ ಎಂ.ಬಿ.ಬಿ.ಎಸ್. ಓದುತ್ತಿರೋ ಮಗನಿದ್ದಾನೆ. ಇದ್ದಾನೆ. ಆದ್ರೆ, ಕಳೆದ ನಾಲ್ಕು ವರ್ಷದಿಂದ ವೈದ್ಯ ಪಾಪಿ ಡಾ. ರವಿಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ನೀಡ್ತಿರೋದು ಅಲ್ಲದೇ ಜನ ಸಂಪರ್ಕವೇ ಇಲ್ಲದಂತೆ ಆಕೆಯನ್ನು  ಗೃಹಬಂಧನಲ್ಲಿಟ್ಟಿದ್ದಾನೆ.

ಹೆಸರಿಗೆ ಮನೆಯಾದ್ರೂ ಅಕ್ಷರಶಃ ಈ ಮನೆಯಲ್ಲಿ ವಿನುತಾ ರಾಣಿ ಕೈದಿಯಂತೆ ಬದುಕುತ್ತಿದ್ದರು. ಮನೆಯ ಮೇಲಿನ ಮಹಡಿಯ ರೂಮಿನಲ್ಲೇ ಅವರನ್ನು ಇರಿಸಲಾಗಿತ್ತು. ಯುದೇ ಕಾರಣಕ್ಕೂ ಅವರು ಕೇಳಗೆ ಬರುವಂತಿಲ್ಲ. ಒಂದು ವೇಳೆ ಬಂದರೂ ಮನೆ ಕೆಲಸ ಮಾಡಿ ಮತ್ತೆ ಮೇಲೆ ಹೋಗಬೇಕು ಅಲ್ಲೇ ಇರಬೇಕು ಅನ್ನೋದು ವೈದ್ಯ ರವಿಕುಮಾರ್ ಕಟ್ಟಪ್ಪಣೆ. ಇನ್ನು ರುಂನಲ್ಲಿ ವಿನುತಾಗೆ ಕೂರೋಕೆ ಒಂದು ಚೇರ್ ಕೊಟ್ಟಿದ್ದಾರೆ . ಊಟ ಅವರು ಕೊಟ್ಟಾಗ ಅವರು ಎಷ್ಟು ಕೊಡುತ್ತಾರೋ ಅಷ್ಟು ತಿನ್ನಬೇಕು. ಒಂದು ವೇಳೆ ಗಂಡ ಹಾಗೂ ಅತ್ತೆ  ಹೋದರೆ ಅವರು ಬರುವವರೆಗೂ ವಿನುತಾಗೆ ಅಕ್ಷರಶಃ ನರಕಯಾತನೆ. ಅವರು ಬರುವವರೆಗೂ ರೂಂನಲ್ಲೇ ಇರಬೇಕಿತ್ತು. ಮನೆಯಿಂದ ಆಚೆ ಬರುವಂತಿಲ್ಲ.ಅಲ್ಲದೇ ಹೋದರೇ 20 ರೂಪಾಯಿ ಕೊಟ್ಟು ಹೋಗುತ್ತಿದ್ದರಂತೆ ಅದರಲ್ಲೇ ಆಕೆ ದಿನ ಕಳೆಯಬೇಕು.

ಇನ್ನು ತನಕೆ ಕಿರುಕುಳ ನೀಡೋದನ್ನು ಪ್ರಶ್ನಿಸಿದ್ರೆ ರವಿಕುಮಾರ್ ಹೊಡೆಯೋದು, ತಲೆಯನ್ನ ಗೋಡೆಗೆ ಗುದ್ದೋದು, ಎದೆಗೆ ಕಾಲಲ್ಲಿ ಓದೆಯೋದು ಮಾಡ್ತಾನಂತೆ. ಜಾಸ್ತಿ ಕೇಳಿದರೆ ಕುತ್ತಿಗೆ ಹಿಸುಕಿ ಸಾಯಿ-ಸಾಯಿ ರವಿಕುಮಾರ್  ಹಾಗೂ ಆತನ ತಾಯಿ ಹೊಡೆಯುತ್ತಾರಂತೆ. ಇಷ್ಟೇ ಅಲ್ಲದೇ ಊಟದಲ್ಲಿ ಸ್ಲೋ ಪಾಯಿಸನ್ ಹಾಕಿ ಮಾನಸಿಕವಾಗಿ ವಿನುತಾ ಕುಗ್ಗುವಂತೆ ಮಾಡಿದ್ದಾರೆ ಎಂದು ವಿನುತರಾಣಿ ಸಹೋದರ ವಾಗೀಶ್ ಆರೋಪಿಸಿದ್ದಾರೆ.

ಗಂಡ, ಅತ್ತೆ ಹೊಡೆಯುತ್ತಾರೆ ಮಗನ ಮುಖ ನೋಡಿಯಾದಾರೂ ಖುಶಿಯಾಗಿರೋಣ ಅಂದ್ರೆ ಅಲ್ಲೂ ವಿನುತಾಗೆ ನಿರಾಸೆ . ವಿನುತಾ ಅವರಿಗೆ ಎಂ.ಬಿ.ಬಿ.ಎಸ್. ಓದುತ್ತಿರೋ ಮಗನಿದ್ದು ಆತನನ್ನೂ ತಾಯಿಯ ಬಳಿ ಬಿಡೋದಿಲ್ಲ. ಆತ ಕೂಡ ಅಮ್ಮನಿಗೆ ನೀನು ಇನ್ನೂ ಸತ್ತಿಲ್ವಾ, ಯಾವಾಗ ಸಾಯ್ತೀಯಾ. ಅಪ್ಪ ನನಗೆ ಓದಿಸುತ್ತಾರೆ. ಅಪ್ಪ ಹೇಳಿದ ಹಾಗೆ ಮಾಡು. ಅಪ್ಪ ಕೊಡೋ ಊಟ ತಿನ್ನು ಅಂತಾ ತಾಯಿ ಅಂತಾನೂ ನೋಡದೇ ಮಾತನಾಡುತ್ತಾನಂತೆ. ಇನ್ನು ನಾಲ್ಕು ವರ್ಷದಿಂದ ಅನ್ನ-ಆಹಾರವಿಲ್ಲದೆ ಗೃಹಬಂಧನದಲ್ಲಿದ್ದ ವಿನುತಾ  ಪಕ್ಕದ ಮನೆಯವರಿಂದ ಫೋಟೋ ತೆಗೆಸಿ ತಮ್ಮನಿಗೆ ಕಳಿಸಿ ಇದೀಗ ತಮ್ಮ ಬಂದು ವಿನುತಾ ಅವರನ್ನು ಆಸ್ಪತ್ರೆ ಸೇರಿದ್ದಾರೆ. ಆಕೆಯ ತಮ್ಮ ವಾಗೀಶ್ ಪೊಲೀಸರನ್ನ ಕರೆದುಕೊಂಡು ಹೋಗಿ ಅಕ್ಕನನ್ನ ಆಸ್ಪತ್ರೆ ಸೇರಿಸಿ ದ್ದಾರೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸ್ತಿದ್ದಾರೆ.