ಬೆಂಗಳೂರು; ನಾಳೆ ಹುಟ್ಟೂರಿನಲ್ಲಿ ಎಸ್ ಎಂ ಕೃಷ್ಣ ಅಂತ್ಯಕ್ರಿಯೆ ನಡೆಯಲಿದೆ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ಅವರಿಗೆ ಆಸೆ ಇತ್ತು ಅವರದ್ದೇ ಜಾಗದಲ್ಲಿ ಮಾಡಬೇಕು ಅಂತಾ. ಅವರ ಸಂಸ್ಥೆ ಇತ್ತು. ಅಲ್ಲೇ ಮಾಡಬೇಕು ಅಂತ ಆಸೆ ಇತ್ತು. ಕಾಫಿ ಡೇ ಪಕ್ಕದಲ್ಲೇ ಒಂದು ಜಾಗ ಇದೆ. ಹೀಗಾಗಿ ಆ ಜಾಗದಲ್ಲಿ ಅಂತ್ಯಕ್ರಿಯೆ ಮಾಡಬೇಕು ಅಂತ ಇದೆ. ನಾಳೆ 8 ಗಂಟೆಗೆ ಹೋಗೋಕೆ ಶುರುವಾಗುತ್ತೆ. ನಾಳೆ 2 ಗಂಟೆ ಆಗುತ್ತೆ ಅಲ್ಲಿಗೆ ತಲುಪುವಾಗ. ಇಲ್ಲಿಂದ ಹೋಗಬೇಕು. ಅದಕ್ಕಾಗಿ ಅಲ್ಲಿಗೆ ಹೋಗಿ ನೋಡಿಕೊಂಡು ಬಂದೆ ಎಂದರು.
ರಾಮನಗರ, ಚನ್ನಪಟ್ಟಣ, ಬಿಡಿದಿಯಲ್ಲಿ ಐದೌದು ನಿಮಿಷಗಳ ಕಾಲ ನಿಲ್ಲಿಸುತ್ತೇವೆ. ಇವತ್ತು ಪೂರ್ವ ಸಿದ್ದತೆ ನೋಡಿಕೊಂಡು ಬಂದೆ. ಭಾರತ ಜೋಡೋ ಭವನ ಸಂಜೆ ಸಭೆ ಇದೆ. ಅಲ್ಲೇ ಅಂತಿಮ ನಮನ ಸಲ್ಲಿಸುತ್ತೇವೆ. ಪಕ್ಷದಿಂದ ಅಂತಿಮ ಶ್ರದ್ಧಾಂಜಲಿ ಮಾಡುತ್ತೇವೆ. ಭಾರತ್ ಜೋಡೋ ಭವನ ಅವರದ್ದೇ ಕಾಲದಲ್ಲಿ ಮಂಜೂರು ಆಗಿದೆ. ಸಿಎಂ, ನಾನು ಸಚಿವರು ಮತ್ತು ಶಾಸಕರು ಎಲ್ಲರು ಇರ್ತಾರೆ. ಅಂತಿಮ ಸಮನ ಸಲ್ಲಿಸುತ್ತೇವೆ ಎಂದಿದ್ದಾರೆ.
ಮಾಜಿ ಸಿಎಂ ಎಸ್ ಎಂ ಕೃಷ್ಣ ಅಸ್ತಂಗತ; ರಾಜ್ಯ ಕಂಡ ಅಪರೂಪದ ರಾಜಕಾರಣಿಯ ನಿಧನಕ್ಕೆ ಕನ್ನಡಿಗರ ಕಂಬನಿ
ಬೆಂಗಳೂರು: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಾಜಿ ವಿದೇಶಾಂಗ ಸಚಿವ, ಮಾಜಿ ಸಿಎಂ ಎಸ್ ಎಂ ಕೃಷ್ಣ(92) ನಿನ್ನೆ ತಡರಾತ್ರಿ ಅಸ್ತಂಗತರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ನಿನ್ನೆ ತಡರಾತ್ರಿ ವಿಧಿವಶರಾಗಿದ್ದಾರೆ.
ನಿನ್ನೆ ತಡರಾತ್ರಿ 2.45 ರ ಸುಮಾರಿಗೆ ಎಸ್ ಎಂ ಕೃಷ್ಣ ಅವರಿಗೆ ಹೃದಯಾಘಾತವಾಗಿ ನಿಧನರಾಗಿದ್ದಾರೆ. ಕೂಡಲೇ ಮನೆ ಮಂದಿ ವೈದ್ಯರಿಗೆ ಮಾಹಿತಿ ನೀಡಿದ್ದು 3 ಗಂಟೆ ವೇಳೆಗೆ ವೈದ್ಯರು ಆಗಮಿಸಿ ತಪಾಸಣೆ ನಡೆಸಿದ್ದಾರೆ. ಬಳಿಕ ಸಾವನ್ನಪ್ಪಿರುವುಗಿ ಘೋಷಿಸಿದ್ದಾರೆ.
ಇನ್ನು ಸದ್ಯ ಸದಾಶಿವನಗರದಲ್ಲಿರುವ ಎಸ್ ಎಂ ಕೃಷ್ಣ ಅವರ ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ನಾಳೆ ಮಂಡ್ಯ ಜಿಲ್ಲೆಯ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ. ವಿದೇಶದಲ್ಲಿರುವ ಎಸ್ ಎಂ ಕೃಷ್ಣ ಅವರ ಸಂಬಂಧಿಕರು ಆಗಮಿಸುವುದು ತಡವಾಗುವ ಹಿನ್ನೆಲೆಯಲ್ಲಿ ಎಸ್.ಕೃಷ್ಣ ಅವರ ಅಂತ್ಯಕ್ರಿಯೆಯನ್ನು ನಾಳೆ ಮದ್ದೂರಿನ ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಸಲು ತೀರ್ಮಾನಿಸಲಾಗಿದೆ.
ರಾಜ್ಯಕ್ಕೆ ತಮ್ಮ ಅಧಿಕಾರದ ಅವಧಿಯಲ್ಲಿ ಅಪರಿಮಿತ ಕೊಡುಗೆ ನೀಡಿದ ಎಸ್ ಎಂ ಕೃಷ್ಣ ನಿಧನಕ್ಕೆ ರಾಜಕೀಯ ಕ್ಷೇತ್ರದ ಗಣ್ಯರು, ಬೇರೆ ಬೇರೆ ಕ್ಷೇತ್ರದ ಗಣ್ಯರು ಸೇರಿದಂತೆ ರಾಜ್ಯದ ಜನ ಕಂಬನಿ ಮಿಡಿದಿದ್ದಾರೆ.
ಇನ್ನು ಎಸ್ ಎಂ ಕೃಷ್ಣ ನಿಧನದ ಹಿನ್ನೆಲೆ ರಾಜ್ಯದಲ್ಲಿ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ ಡಿಸಿಎಂ ಎಸ್ ಎಂ ಕೃಷ್ಣ ಆದೇಶ ನೀಡಿದ್ದಾರೆ. ಅಲ್ಲದೇ ನಾಳೆ ರಾಜ್ಯದ ಎಲ್ಲಾ ಶಾಲಾ ಕಾಲೇಜುಗಳಿಗೆ ಸರ್ಕಾರಿ ರಜೆ ಘೋಷಿಸಲಾಗಿದೆ.
ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ರಾಜ್ಯಪಾಲರ ಸಂತಾಪ
ಮಾಜಿ ಸಿಎಂ ಎಸ್.ಎಂ. ಕೃಷ್ಣ ನಿಧನಕ್ಕೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಸಂತಾಪ ಸೂಚಿಸಿದ್ದಾರೆ.ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು ಕೃಷ್ಣ ಅವರ ನಿಧನದಿಂದ ತೀವ್ರ ದುಃಖವಾಗಿದೆ.ಕರ್ನಾಟಕ ರಾಜ್ಯ ಹಾಗೂ ದೇಶದ ಅಭಿವೃದ್ಧಿಯಲ್ಲಿ ಮಹತ್ವಪೂರ್ಣ ಕಾರ್ಯಗಳನ್ನು ಕೈಗೊಂಡು, ಕೇಂದ್ರ ಸಚಿವರಾಗಿ, ರಾಜ್ಯದ ಮಂತ್ರಿಯಾಗಿ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ದೇಶಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬ ವರ್ಗಕ್ಕೆ ಅತೀವ ಸಂತಾಪಗಳು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ . ಕೃಷ್ಣ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.











