ಮನೆ Latest News ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಹೊರಗೆಳೆಯುತ್ತೇವೆ; ಹೊನ್ನಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಹೊರಗೆಳೆಯುತ್ತೇವೆ; ಹೊನ್ನಾಳಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ

0

ದಾವಣಗೆರೆ; ಅಧಿವೇಶದಲ್ಲಿ ಕಾಂಗ್ರೆಸ್ ಸರ್ಕಾರದ ಹಗರಣ ಹೊರಗೆಳೆಯುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹೇಳಿಕೆ ನೀಡಿದ್ದಾರೆ.

ದಾವಣಗೆರೆಯ ಹೊನ್ನಾಳಿಯಲ್ಲಿ ಮಾತನಾಡಿದ ಅವರು ಚಳಿಗಾಲದ ಅಧಿವೇಶದಲ್ಲಿ ಕಾಂಗ್ರೇಸ್ ಸರ್ಕಾರದ ಹಗರಣ ಹೊರಗೆಳೆಯುವ ಕೆಲಸ ಮಾಡುತ್ತೇವೆ. ಅಭಿವೃದ್ಧಿಗಾಗಿ ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತೇವೆ. ಯಾವುದೇ ಅಭಿವೃದ್ಧಿ ಇಲ್ಲದೆ ರಾಜ್ಯದ ಜನತೆ ತತ್ತರಿಸುವಂತಾಗಿದೆ. ಅವರ ಧ್ವನಿಯಾಗಿ ನಾಳೆಯಿಂದ ಅಧಿವೇಶನದಲ್ಲಿ ಎಚ್ಚರಿಸುವ ಕೆಲಸಮಾಡಲಿದ್ದೇವೆ.  ವಿರುದ್ದ ನಮ್ಮ ಪ್ರವಾಸ ನಿಲ್ಲಲ್ಲ. ಅಧಿವೇಶದ ನಂತರ ಪ್ರವಾಸ ಮಾಡಿ  ಮತ್ತಷ್ಟು ಮಾಹಿತಿ ಕಲೆ ಹಾಕುತ್ತೇವೆ.‌ ನಂತರ ಕೇಂದ್ರದ ಪಾರ್ಲಿಮೆಂಟರಿ ಮುಂದೆ ಧರಣಿ ಮಾಡುತ್ತೇವೆ ಎಂದಿದ್ದಾರೆ.

ಗ್ಯಾರಂಟಿಗೆ ಹಣ ಹೊಂದಿಸದೇ ಸರ್ಕಾರ ಪರದಾಡುತ್ತಿದೆ. ಲೋಕ ಹಾಗು ಉಪ ಚುನಾವಣೆ ಮೂರು ದಿನ ಇದ್ದಾಗ ಗ್ಯಾರಂಟಿ ಹಣ ಬಿಡುಗಡೆ ಮಾಡ್ತಾರೆ. ಬಡವರಿಗೆ ಅವಮಾನ ಮಾಡುವಂತಹ ಕೆಲಸ ಸರ್ಕಾರ ಮಾಡ್ತಿದೆ. ಗ್ಯಾರಂಟಿನ ಯಾರು ಕೇಳಿರಲಿಲ್ಲ. ಅಭಿವೃದ್ದಿಗೆ ಹಣ ಇಲ್ಲದೇನೆ ಕಾಂಗ್ರೆಸ್ ಶಾಸಕರೇ ತಲೆ ಎತ್ತಿ ಹೋಗದ ಸ್ಥಿತಿ ಎದುರಾಗಿದೆ. ಯಾವ ಕಾಲದಲ್ಲೂ ಇಂತಹ ಕೆಟ್ಟ ಸ್ಥಿತಿ ಬಂದಿರಲಿಲ್ಲ ಎಂದಿದ್ದಾರೆ.

ಗರ್ಭಿಣಿಯರ ಸಾವು ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮುನ್ನೂರಕ್ಕೂ ಹೆಚ್ಚು ಗರ್ಭಿಣಿಯರ ಸಾವಾಗಿದೆ. ನಿನ್ನೆ ನಮ್ಮ ಪಕ್ಷದ ಮಹಿಳಾ ಮೋರ್ಚಾ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ ಎಂದಿದ್ದಾರೆ. ಇದೇ ವೇಳೆ ಯತ್ನಾಳ್ ಮತ್ತೆ ರೆಬೆಲ್ ವಿಚಾರಕ್ಕೆ ರಿಯಾಕ್ಟ್ ಮಾಡಿದ ಅವರು ಯತ್ನಾಳ್ ಅವರಿಗೆ ಲಾಂಗ್ ಟರ್ಮ್ ಸ್ಟ್ರಾಟರ್ಜಿ ಇದ್ದಂತೆ ಕಾಣುತ್ತೆ ಎಂದು ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಯಾವ ಹೋರಾಟ ಮಾಡಬೇಡಿ ಎಂದು ಹೇಳಿಲ್ಲ. ಎಲ್ಲವನ್ನೂ ರಾಷ್ಟ್ರೀಯ ನಾಯಕರು ಗಮನಿಸುತ್ತಿದ್ದಾರೆ. ಅವರ ಅನುಮಾನಗಳಿಗೆ, ಆಸೆಗಳಿಗೆ ಕಾಲವೇ ಉತ್ತರ ಕೊಡಲಿದೆ, ಅವರಿಗೆ ಒಳ್ಳೆಯದಾಗಲಿ. ಮುಂದಿನ ಮುಖ್ಯಮಂತ್ರಿ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯಾಧ್ಯಕ್ಷ ಸ್ಥಾನ ಪಡೆದಿರೋದು ಸಿಎಂ ಆಗಲಿಕ್ಕೆ ಅಲ್ಲ. ಈ ಸ್ಥಾನವನ್ನ ಜವಾಬ್ದಾರಿಯಿಂದ ನಿರ್ವಹಣೆ ಮಾಡುತ್ತೇವೆ ಎಂದಿದ್ದಾರೆ.

ಹಾದಿ ಬೀದಿಯಲ್ಲಿ ಮಾತಾಡುವವರು ಯಾರೇ ಇರಲಿ ಅವರ ಮೇಲೆ ಕ್ರಮ ಆಗಬೇಕು: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿಕೆ

ಬೆಂಗಳೂರು : ರಾಜ್ಯ ಬಿಜೆಪಿ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ನೇತೃತ್ವದಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ನಡೆಯಿತು. ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾದಿ ಬೀದಿಯಲ್ಲಿ ಮಾತಾಡುವವರು ಯಾರೇ ಇರಲಿ ಅವರ ಮೇಲೆ ಕ್ರಮ ಆಗಬೇಕು ಎಂದು ಯತ್ನಾಳ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು.

ಚೆಂಡು ಹೈಕಮಾಂಡ್ ಅಂಗಳದಲ್ಲಿದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ನೋಡೋಣ. ಉಪ ಚುನಾವಣೆಯ ಸೋಲಿನ ಬಗ್ಗೆ ಚರ್ಚೆಯಾಗಿದೆ. ಸಂಡೂರು, ಶಿಗ್ಗಾಂವಿ ಸೋಲಿನ ಕುರಿತು ಸತ್ಯ ಶೋಧನೆಗೆ ತೀರ್ಮಾನ ಆಗಿದೆ

ಸದಾನಂದ ಗೌಡ ಹಾಗೂ ಎನ್. ಮಹೇಶ್ ನೇತೃತ್ವದ ಸಮಿತಿ ರಚನೆ ಮಾಡಿದ್ದೇವೆ. ಇವರಿಬ್ಬರು ಕ್ಷೇತ್ರಕ್ಕೆ ಭೇಟಿ ಕೊಟ್ಟು ಸತ್ಯ ಶೋಧನೆ ಮಾಡಲಿದ್ದಾರೆ. ಶಿವರಾಮ್ ಹೆಬ್ಬಾರ್ ಮತ್ತು ಎಸ್.ಟಿ. ಸೋಮಶೇಖರ್ ವಿಚಾರವೂ ಚರ್ಚೆ ಯಾಗಿದೆ.ಕಾಂಗ್ರೆಸ್ ಜೊತೆ ಅವರಿಬ್ಬರು ಸಕ್ರೀಯ ವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕೆ ಇತಿಶ್ರೀ ಹಾಕಬೇಕೆಂದು ತೀರ್ಮಾನವಾಗಿದೆ. ಪಕ್ಷ ವಿರೋದಿ ಹೇಳಿಕೆಗಳ ಬಗ್ಗೆಯೂ ಚರ್ಚೆಯಾಗಿದೆ. ಇದೆಲ್ಲದಕ್ಕೂ ತಾರ್ಕಿಕ ಅಂತ್ಯ ಹಾಡುವ ಸಂಬಂಧ ಚರ್ಚೆಯಾಗಿದೆ. ಸೋಮಶೇಖರ್ ಮತ್ತು ಹೆಬ್ಬಾರ್ ವಿಚಾರವಾಗಿ ಅಮಾನತು ಮಾಡಬೇಕೋ ಅನರ್ಹತೆ ಮಾಡಬೇಕೋ ಎನ್ನುವುದನ್ನು ತೀರ್ಮಾನ ತೆಗೆದು ಕೊಳ್ಳುತ್ತಾರೆ ಎಂದ್ರು.