ಮನೆ Latest News ಎಲ್ಲಾ ಸಿದ್ದತೆಗಳನ್ನ ನಮ್ಮವರು ಮಾಡಿದ್ದಾರೆ, ನಾಳೆ ಸಮಾವೇಶ ಚೆನ್ನಾಗಿ ಆಗುತ್ತೆ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್...

ಎಲ್ಲಾ ಸಿದ್ದತೆಗಳನ್ನ ನಮ್ಮವರು ಮಾಡಿದ್ದಾರೆ, ನಾಳೆ ಸಮಾವೇಶ ಚೆನ್ನಾಗಿ ಆಗುತ್ತೆ: ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ

0

ಬೆಂಗಳೂರು; ಎಲ್ಲಾ ಸಿದ್ದತೆಗಳನ್ನ ನಮ್ಮವರು ಮಾಡಿದ್ದಾರೆ, ನಾಳೆ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶ ಚೆನ್ನಾಗಿ ಆಗುತ್ತೆ ಎಂದು ಬೆಂಗಳೂರಿನಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.

ನಾಳೆ ಹಾಸನದಲ್ಲಿ ಕಾಂಗ್ರೆಸ್ ಸಮಾವೇಶಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಮಳೆ ಬರೋದು ಬೇಡ ಅನ್ನೋಕೆ ಆಗೊಲ್ಲ. ಮಳೆ ಬರಲಿ ಅದು ಪ್ರಕೃತಿ .ಎಲ್ಲ‌ ಸಿದ್ದತೆಗಳನ್ನ ನಮ್ಮವರು ಮಾಡಿದ್ದಾರೆ ಬಹಳ ಚೆನ್ನಾಗಿ ಆಗುತ್ತೆ. ಬಿಜೆಪಿಯವರು ಇಲ್ಲದ ಸಲ್ಲದ ಆರೋಪಗಳನ್ನ ಮುಂಚಿತವಾಗಿಯೇ ಮಾಧ್ಯಮಕ್ಕೆ ಬಿಡ್ತಾ ಇದ್ದಾರೆ ಎಂದರು.

ಇನ್ನು ಲೋಕಾಯುಕ್ತಕ್ಕೆ ಇಡಿ ಪತ್ರ ಬರೆದ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು  ಯಾವುದೇ ವಿಚಾರಣೆ ಗುಪ್ತವಾಗಿ ನಡೆಯುವಂತದ್ದು. ಏನಾದ್ರೂ ಇದ್ದರೆ ಕೋರ್ಟ್ ಗೆ ಸಲ್ಲಿಸಬೇಕು. ಕೋರ್ಟ್ ಗೆ ಸಲ್ಲಿಸದೆ ಮಾಧ್ಯಮಕ್ಕೆ ಬಿಡುಗಡೆ ಮಾಡ್ತೀವಿ ಅಂದರೆ ಹೇಗೆ?. ಎಷ್ಟು ಡಿಪ್ರೆಷನ್, ಡಿಸ್ಟರ್ಬ್ ಆಗಿದ್ದಾರೆ ಅಂತ‌ ಇದರಲ್ಲೇ ಅರ್ಥ ಆಗುತ್ತೆ. ಏನೂ ಇಲ್ಲ ಅನ್ನೋದು ಅರ್ಥ ಆಗ್ತಿದೆ. ಆದರೂ ಚಿಂತೆ ಇಲ್ಲ ನಮ್ಮ ಹೋರಾಟ ಮುಂದುವರೆಯುತ್ತೆ. ನ್ಯಾಯಾಲಯದಲ್ಲಿ ನಮಗೆ ನಂಬಿಕೆ ಇದೆ. ನಮ್ಮ ಪಕ್ಷ ಮತ್ತು ಸರ್ಕಾರ ಒಟ್ಟಿಗೆ ಹೋರಾಟ ಮಾಡ್ತೀವಿ ಎಂದರು.

ನನ್ನ ಮೇಲೂ ಇಡಿಯವರು ವಿಚಾರಣೆ ಮಾಡಿದ್ದಾರೆ. ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಾರ್ಜ್ ಶೀಟ್ ಆದರಿಸಿ ಕೋರ್ಟ್ ಏನೋ ಒಂದು ತೀರ್ಪನ್ನ ಕೊಟ್ಟಿದೆ. ಅಲ್ಲಿ ದುಡ್ಡು ತೆಗೆದುಕೊಳ್ಳೋದು, ಕೊಡೋದು ಅಲ್ಲ. ಆ ರೀತಿ‌ ಏನೂ ನಡೆದಿಲ್ಲ. ರೇಡ್ ಮಾಡಿದಾಗ ದುಡ್ಡು ತೆಗಲಾಕಿಕೊಂಡಿಲ್ಲ. ಮನಿ ಎಲ್ಲಿ ಲಾಂಡರಿಂಗ್ ಆಯ್ತು?. ಆಡಳಿತ ವಿಚಾರ ಇದೆ, ಆಡಳಿತ ವಿಭಾಗವನ್ನ ಅವರು ಕೇಳಿಕೊಳ್ಳಬೇಕು.ಪೇಪರ್ ನಲ್ಲಿ ನೀವೆ ಬರೆದುಬಿಟ್ಟು ಲೀಕ್ ಮಾಡಿದ್ರೆ ಹೇಗೆ?. ನೀವೆ ಹೀಗೆ ಮಾಡಿ ಅಂತ ಇನ್ನೊಂದು ಸಂಸ್ಥೆಗೆ ಹೇಳೋದನ್ನ ಹೊಸದಾಗಿ ನೋಡ್ತಾ ಇದ್ದೀನಿ. ನನ್ನ ಅನುಭವದಲ್ಲಿ ಇದೆನ್ನೆಲ್ಲ ಹೊಸದಾಗಿ ನೋಡ್ತಾ ಇದ್ದೀನಿ. ಇದಕ್ಕೆ ಜನ ಉತ್ತರ ಕೊಡ್ತಾರೆ, ನಾವೂ ಉತ್ತರ ಕೊಡ್ತೀವಿ ಎಂದಿದ್ದಾರೆ.

ಹಾಸನ ಸಮಾವೇಶದ ಹೆಸರು  ವಿಚಾರ ಬದಲಾವಣೆ ವಿಚಾರಕ್ಕೆ  ಬೆಂಗಳೂರಿನಲ್ಲಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ದು  ಲೀಡರ್, ವಿಚಾರ, ಐಡಿಯಾಲಜಿ  ಎಲ್ಲಾ ಒಂದೇ, ಬ್ಯಾನರ್ ಚೇಂಜ್ ಆಗಿದೆ. ಅಹಿಂದ ಅಂದ್ರೆ ಕಾಂಗ್ರೆಸ್, ಅಹಿಂದದವರು ಕಾಂಗ್ರೆಸ್ ಬಿಟ್ಟಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್ ನಲ್ಲೇ ಇದ್ದಾರೆ, ಲಾಭ ಕಾಂಗ್ರೆಸ್ ಗೆ ಆಗುತ್ತದೆ. ಅಹಿಂದದವರು ಬಿಜೆಪಿ- ಜೆಡಿಎಸ್ ಗೆ ವೋಟು ಹಾಕಲ್ಲ. ಕಾರ್ಯಕ್ರಮ ಮಾಡಿದ್ರೆ, ಹೆಸರು ಯಾರಿಗೆ ಬರಬೇಕೋ ಬರುತ್ತದೆ. ಕೆಲಸ ಮಾಡುವವರು ಆವರೇ, ಮುಂದೆ ಬರುವವರೂ ಅವರೇ. ಸಮಾವೇಶದ ಹೆಸರು ಬದಲಾವಣೆ ಬಗ್ಗೆ ಯಾರನ್ನ ಕೇಳಬೇಕೋ ಅವರನ್ನ ಕೇಳಿ. ಸಮಾವೇಶವನ್ನು ಡಿಕೆ ಮಾಡಿದ್ರೂ ಕಾಂಗ್ರೆಸ್ ಗೆ ಮಾಡೋದು. ನಾವು ಅಹಿಂದ ಮಾಡಿದ್ರೂ ಕಾಂಗ್ರೆಸ್ ಗೆ ಮಾಡೋದು .ಹೈಕಮಾಂಡ್ ಜೊತೆಗಿನ ಒಪ್ಪಂದ ವಿಚಾರವಾಗಿ ನಾನೂ ಮೊದಲೇ 6 ತಿಂಗಳಲ್ಲೇ ಹೇಳಿದ್ದೆ, ಆಗಿರಬಹುದು ಎಂದು . ದೆಹಲಿಯಲ್ಲಿ ಆಗಿರಬಹುದು, ಗೊತ್ತಿಲ್ಲ . ಕೆಪಿಸಿಸಿ ಹುದ್ದೆ ಇಷ್ಟ ಅಂತ ನಾನು ಎಲ್ಲೂ ಹೇಳಿಲ್ಲ. ಡಿಕೆ ಸುರೇಶ್ ಕೂಡ ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಹೇಳಿದ್ದಾರೆ. ಸಿದ್ದರಾಮಯ್ಯ 5 ವರ್ಷ ಸಿಎಂ ಎಂದು ಅಧ್ಯಕ್ಷರ ಬಾಯಲ್ಲಿ ಬರದ ಬಗ್ಗೆ ನೀವು ಅವರನ್ನೇ(ಡಿಕೆಶಿ) ಕೇಳಿ ಎಂದಿದ್ದಾರೆ.

ಸಚಿವ ಎಂ.ಸಿ‌.‌ಸುಧಾಕರ್ ಮಾತನಾಡಿ ಊಹಾಪೋಹ ಬೇಡ, ಇದು ಪಕ್ಷದ ಕಾರ್ಯಕ್ರಮ. ಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ನಿರ್ದೇಶನದಲ್ಲಿ ನಡೆಯುತ್ತಿದೆ. ಕಾಲೇಜು ಅಭಿವೃದ್ಧಿಗೆ ಹಣ ಎಲ್ಲಿಂದ ಬಂತು. ಸರ್ಕಾರ ದಿವಾಳಿಯಾಗಿದೆ ಅಂದ್ರೆ ಅಭಿವೃದ್ಧಿಗೆ ಹಣ ಎಲ್ಲಿಂದ ಬರುತ್ತದೆ. ಅವರು ನಾನಾ ರೀತಿ ಹೇಳಬಹುದು. ಇದು ಜನ ಕೊಟ್ಟಿರುವ ಸ್ಥಾನ. ನಾವು ಜನರಿಗೆ ಕಾರ್ಯಕ್ರಮ ಕೊಡುತ್ತೇವೆ ಎಂದರು.