ನವದೆಹಲಿ: ದೆಹಲಿಯ ಸಾಕೇತ್ ನಲ್ಲಿ ಶಿಸ್ತು ಸಮಿತಿಯ ಓಂ ಪಾಠಕ್ ಅವರನ್ನು ಯತ್ನಾಳ್ ಆಂಡ್ ಟೀಮ್ ಭೇಟಿ ಮಾಡಿತು. ಭೇಟಿ ವೇಳೆ ಶೋಕಾಸ್ ನೊಟೀಸ್ ಗೆ ಯತ್ನಾಳ್ ಉತ್ತರ ನೀಡಿದ್ರು. ಶಿಸ್ತು ಸಮಿತಿಯ ಸಮಿತಿಯ ಅಧ್ಯಕ್ಷರಾದ ಜಗದಂಬಿಕಾ ಪಾಲ್ ನಿರ್ದೇಶನದ ಮೇರೆಗೆ ಕೇಂದ್ರ ಜಂಟಿ ಸದನ ಅಧಿಕಾರಿಗಳನ್ನು ಯತ್ನಾಳ್ ಟೀಂ ಭೇಟಿಯಾಯಿತು. ಸಮಿತಿಯ ಕಾರ್ಯದರ್ಶಿಗಳಾದ ಸ್ವಾತಿ ಪರ್ವಾಲ್ ಹಾಗೂ ಅಧೀನ ಕಾರ್ಯದರ್ಶಿ ದೀಪಿಕಾ ರನ್ನು ಯತ್ನಾಳ್ ಭೇಟಿ ಮಾಡಿತು.
ಕುಮಾರ್ ಬಂಗಾರಪ್ಪ, ಪ್ರತಾಪ ಸಿಂಹ, ಭರತ್ ಮಗದೂರ್ ಭೇಟಿ ಮಾಡಿ ತಂಡದ ಅಧ್ಯಯನ ವರದಿಯನ್ನು ಸಲ್ಲಿಕೆ ಮಾಡಿತು. ನಿನ್ನೆ ಜಗದಾಂಭಿಕಾ ಪಾಲ್ ಭೇಟಿಯಾಗಿತ್ತು ಯತ್ನಾಳ್ ಟಿಂ. ಪಾರ್ಲಿಮೆಂಟ್ ಅನೆಕ್ಸ್ ಜೆಪಿಸಿ ಕಚೇರಿಯಲ್ಲಿ ಭೇಟಿಯಾಗಿ ದಾಖಲೆ ಸಲ್ಲಿಕೆ ಮಾಡಿತು.
ಓಂ ಪಾಠಕ್ ಭೇಟಿ ಬಳಿಕ ಯತ್ನಾಳ್ ಪ್ರತಿಕ್ರಿಯಿಸಿ ಒಂದು ಗಂಟೆ 15 ನಿಮಿಷಗಳ ಕಾಲ ವಿಸ್ತೃತವಾಗಿ ಮಾಹಿತಿ ನೀಡಿದ್ದೇನೆ. ಮಾಹಿತಿ ಅವರು ಕೇಳಿಸಿಕೊಂಡಿದ್ದಾರೆ. ಮುಂದಿನದು ತಿಳಿಸುತ್ತೆ ಎಂದು ಹೇಳಿದ್ದಾರೆ. ವಕ್ಫ್ ಹೋರಾಟ ಮುಂದುವರಿಸಲು ಸೂಚನೆ ನೀಡಿದ್ದಾರೆ. ಈಗೀನ ರೀತಿಯಲ್ಲಿ ಹೋರಾಟ ಮುಂದುವರಿಸಿ ಎಂದಿದ್ದಾರೆ.ನಮ್ಮ ಹೋರಾಟವನ್ನು ಶ್ಲಾಘಿಸಿದ್ದಾರೆ ಎಂದರು.
ಒಳ್ಳೆಯ ಭವಿಷ್ಯ ಇದೆ ಶಾಂತವಾಗಲೂ ಹೇಳಿದ್ದಾರೆ.ನಾನು ನಗುತ್ತಿದ್ದೇನೆ ಎಂದರೆ ಏನಾಗಿದೆ ಅರ್ಥ ಮಾಡ್ಕೊಳ್ಳಿ. ನಾಳೆ ಜೆಪಿಸಿ ಸಭೆಯಲ್ಲಿ ಭಾಗಿಯಾಗಿ ಬೆಂಗಳೂರಿಗೆ ಮರಳುತ್ತೇನೆ. ನಾನು ನೀಡಿದ ಮಾಹಿತಿಯನ್ನು ವರಿಷ್ಠರಿಗೆ ತಿಳಿಸುವುದಾಗಿ ಹೇಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷರು, ಗೃಹ ಮಂತ್ರಿಗಳು ಹಾಗೂ ಪ್ರಧಾನಿ ಮೋದಿ ಅವರಿಗೆ ತಿಳಿಸುವುದಾಗಿ ಹೇಳಿದ್ದಾರೆ. ಪಕ್ಷದ ವಿಚಾರವನ್ನು ಮಾಧ್ಯಮದ ಮುಂದೆ ಮಾತನಾಡಬೇಡಿ, ವರಿಷ್ಠರು ಮುಂದೆ ಹೇಳಿ ಎಂದು ಸಲಹೆ ನೀಡಿದ್ದಾರೆ ಎಂದರು.ಸದಾನಂದ ಗೌಡರು ಏನು ಹೇಳಿದ್ದಾರೆ ಗೊತ್ತಿಲ್ಲ. ಯಡಿಯೂರಪ್ಪ ಅವರ ಹೇಳಿಕೆ ಸ್ವಾಗತಿಸುತ್ತೇನೆ ಎಂದು ತಿಳಿಸಿದ್ರು.
ಕುಮಾರ ಬಂಗಾರಪ್ಪ ಪ್ರತಿಕ್ರಿಯೆ ನೀಡಿ ವಕ್ಫ್ ವಿಚಾರವಾಗಿ 7-10 ಜಿಲ್ಲೆ ಪ್ರವಾಸ ಮಾಡಿದ್ದೆವು. 65 ಸಾವಿರ ಆಸ್ತಿಗಳು ದುರುಪಯೋಗ ಆಗಿದೆ. ಅದರ ಆದಾಯ ಸರ್ಕಾರದ ಬದಲು ವಕ್ಫ್ ಗೆ ಬರುವ ಹಾಗೇ ಮಾಡಿದ್ದಾರೆ. ಹೀಗಾಗಿ ವಕ್ಫ್ ಆಕ್ಟ್ ತರಲು ನಿರ್ಧರಿಸಿದೆ. ಈಗ ಅದು ಜೆಪಿಸಿ ಮುಂದೆ ಇದೆ, ಅದು ಅಧ್ಯಯನ ಮಾಡಿದೆ. ಕರ್ನಾಟಕದಲ್ಲಿ ಯತ್ನಾಳ್ ಅವರ ನೇತೃತ್ವದಲ್ಲಿ ಅಧ್ಯಯನ ಮಾಡಿತ್ತು. ಅದರ ವರದಿಯನ್ನು ನಿನ್ನೆ ಜೆಪಿಸಿ ಅಧ್ಯಕ್ಷರಿಗೆ ನೀಡುವ ಕೆಲಸ ಮಾಡಿದೆ. ಇಂದು ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಮಾಹಿತಿ ನೀಡಿದ್ದೇವೆ ಎಂದರು.
ಇಂದು 2500 ದಾಖಲೆಯನ್ನು ನೀಡಿದ್ದೇವೆ. ಆಂಧ್ರ ಪ್ರದೇಶ ರೀತಿಯಲ್ಲಿ ಕರ್ನಾಟಕದಲ್ಲಿ ವಕ್ಫ್ ಅನ್ನು ತಾತ್ಕಲಿಕವಾಗಿ ನಿರ್ಬಂಧಿಸಬೇಕು. ವಕ್ಫ್ ಬಗ್ಗೆ ನಿರ್ಧಾರ ಆಗುವ ವರೆಗೂ ವಕ್ಫ್ ಕಚೇರಿ ಕೆಲಸ ಮಾಡಬಾರದು. ಕೇಂದ್ರ ಸರ್ಕಾರವು ಈ ಆದೇಶವನ್ನು ಮಾಡಬೇಕು ಎಂದು ನಾವು ಮನವಿ ಮಾಡಿದ್ದೇವೆ. ಅಲ್ಪ ಸಂಖ್ಯಾತರು, ರೈತರ ಹೆಸರಿನಲ್ಲಿ ಯಾರು ಲೂಟಿ ಮಾಡಿದವರ ವಿರುದ್ಧ ನಮ್ಮ ಹೋರಾಟ. ವಕ್ಫ್ ಇದು ರಾಜ್ಯದ ಸಮಸ್ಯೆ ಅಲ್ಲ, ದೇಶದ ಸಮಸ್ಯೆ. ಜೆಪಿಸಿ ಸದಸ್ಯರು ನಮ್ಮ ಹೋರಾಟಕ್ಕೆ ಖುಷಿ ವ್ಯಕ್ತಪಡಿಸಿದ್ದಾರೆ ಎಂದರು.











