ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆ- 2024 ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್ , ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾಗಿದ್ದರು.
ವಿಕಲಚೇತನರ ಮತ್ತು ಹಿರಿಯ ಸಬಲೀಕರಣ ನಿರ್ದೇಶನಾಲಯ ಬೆಂಗಳೂರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ ಮತ್ತು ಹಿರಿಯ ನಾಗರೀಕ ಸಬಲೀಕರಣ ಇಲಾಖೆ ವತಿಯಿಂದ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.ಕಾರ್ಯಕ್ರಮದಲ್ಲಿ ವಿಶೇಷಚೇತನ ಮಕ್ಕಳು ತಯಾರಿಸಿದ ಚಿತ್ರಕಲೆ ಪ್ರದರ್ಶನ ಮಾಡಲಾಯಿತು.ವಿಶೇಷಚೇತನ ಮಕ್ಕಳಿಂದ ತಯಾರಾದ ಚಿತ್ರಕಲೆಯನ್ನು ಸಿಎಂ ಸಿದ್ದರಾಮಯ್ಯ ವೀಕ್ಷಿಸಿದರು.
ಕಾರ್ಯಕ್ರಮವನ್ನು ಸಿಎಂ ಸಿದ್ದರಾಮಯ್ಯ ವಿಕಲಚೇತನ ಮಕ್ಕಳನ್ನ ವೇದಿಕೆ ಆಹ್ವಾನಿಸಿ ಉದ್ಘಾಟನೆ ಮಾಡಿದ್ರು. ಡಿಸಿಎಂ ಡಿ.ಕೆ. ಶಿವಕುಮಾರ್, ಲಕ್ಷ್ಮೀ ಹೆಬ್ಬಾಳ್ಕರ್, ಇಲಾಖೆಯ ಹಿರಿಯ ಅಧಿಕಾರಿಗಳು ಉಪಸ್ಥಿತಿದ್ದರು. ಈ ವೇಳೆ ಸಿಎಂ ಸಿದ್ದರಾಮಯ್ಯ ಕಂಡು ವಿಕಲಚೇತನ ಬಾಲಕಿಯೊಬ್ಬಳು ಫುಲ್ ಖುಷ್ ಆಗಿ ನೀವು ಸೂಪರ್ ಅಂತ ಸಿಎಂಗೆ ಕೈ ಗಿಂಡಿದ್ದಾಳೆ. ಸಿಎಂ ಕೈಗೆ ಮುತ್ತು ಕೊಟ್ಟು, ಅಪ್ಪಿಕೊಂಡಿದ್ದಾಳೆ ಬಾಲಕಿ.
ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿಶೇಷಚೇತನರ ಮೂಲಭೂತ ಹಕ್ಕು, ಸಮಾನವಾದ ಅವಕಾಶ ಎಲ್ಲರಿಗೂ ಸಿಗಬೇಕು. ನಮ್ಮ ಸರ್ಕಾರ ಹಾಗೂ ಸಿಎಂ ಹೃದಯವಂತರು. ಹೃದಯ ಇರುವ ಸರ್ಕಾರ ನಮ್ಮದು. ವಿಕಲಚೇತನರ ಆರೈಕೆದಾರರಿಗೆ 1 ಸಾವಿರ ಕೊಡುವ ಕೆಲಸ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿದೆ. ಸಮಾಜಕ್ಕೆ ಹೊರೆ, ಮನೆಗೆ ಭಾರ ಆಗಿದ್ದಾರೆಂಬ ಮನೋಭಾವನೆ ಇತ್ತು. ನಮ್ಮ ಜಿಲ್ಲೆಯ ಬೈಲಗೊಂಗಲ ಜಿಲ್ಲೆಗೆ ಹೋಗಿದ್ದೆ. ಅವರು ಸರ್ಕಾರಕ್ಕೆ ಬೇಡಿಕೆ ಇಡದೆ ಸಂಘ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿದೆ. ನಿಸ್ವಾರ್ಥವಾಗಿ ಕೆಲಸ ಮಾಡುವ ಇವರು ನಿಜವಾದ ಕೆಲಸ ಮಾಡುವವರು. ನಮ್ಮ ಸರ್ಕಾರ ಐದು ಗ್ಯಾರೆಂಟಿಗಳನ್ನ ಜಾರಿ ಮಾಡಿದೆ.ವಿಶೇಶಚೇತನರ ವಿಶೇಷ ಕಾಳಜಿಯನ್ನ ನಮ್ಮ ಸರ್ಕಾರ ಮಾಡುತ್ತಿದೆ. ಮಕ್ಕಳೇ ಆದರ್ಶ ಎಷ್ಟು ಹೊಗಳಿದರೂ ಸಾಲದು. ಆರೈಕೆದಾರರು, ಪೋಷಕರೇ ನಿಜವಾದ ದೇವರುಗಳು ಎಂದರು.
ಡಿಸಿಎಂ ಡಿ.ಕೆ. ಶಿವಕುಮಾರ್ ಮಾತನಾಡಿ ಅಂಗವಿಕಲತೆ ವರವೂ ಅಲ್ಲ ಶಾಪವೂ ಅಲ್ಲ. ದೇವರು ಜೀವನದ ಪರೀಕ್ಷೆ ಕೊಟ್ಟಿದ್ದಾರೆ. ದೇವರ ಮಕ್ಕಳು ಅಂತ ಲಕ್ಷ್ಮಿ ಹೆಬ್ಬಾಳ್ಕರ್ ಕರೆದಿದ್ದಾರೆ. ನಿಮಗೆಲ್ಲ ವಿಘ್ನ ನಿವಾರಕ ಗಣೇಶನೇ ಸ್ಪೂರ್ತಿ. ನಿಮ್ಮ ಮನೋಬಲ ಹೆಚ್ಚಾಗಿರಬೇಕು ಅಂತ ಅನೇಕ ಕಾರ್ಯಕ್ರಮಗಳನ್ನ ಬದಿಗೊತ್ತಿ ಬಂದಿದ್ದೇನೆ. ಪುಟ್ಟರಾಜ ಗವಾಯಿ, ಪಂಚಾಕ್ಷರಿ ಗವಾಯಿ ಎಲ್ಲರಿಗೂ ಸ್ಪೂರ್ತಿ.ಇತಿಹಾಸ ಮರೆತವನು, ಇತಿಹಾಸ ಸೃಷ್ಟಿಸಲಾರ ಅಂತ ಅಂಬೇಡ್ಕರ್ ಹೇಳಿದ್ದಾರೆ. ನಿಮ್ಮ ಬದುಕಿನಲ್ಲಿ ಬೆಳಕು ತರಲು ಯೋಜನೆಗಳನ್ನ ತರುತ್ತೇವೆ. ನಿಮ್ಮ ಕೈಯಿಂದಲೇ ಜ್ಯೋತಿ ಬೆಳಗಿಸಿ ನಿಮ್ಮ ಜೀವನ ಬೆಳಗಿಸುವ ಕೆಲಸ ಮಾಡಿದ್ದೀವಿ. ನಿಮ್ಮ ಭಾವನೆಗಳಿಗೆ ಸರ್ಕಾರ ಸ್ಪಂದಿಸುತ್ತೆ. ಸಮಾಜದಲ್ಲಿ ನಿಮ್ಮಿಂದಲೂ ಸಾಧಿಸುವ ಶಕ್ತಿ ಇದೆ ಅಂತ ಭಗವಂತ ಕೊಡಲಿ. ಮಕ್ಕಳ ಕಲ್ಯಾಣ, ವಿಕಲಚೇತನ ಜವಾಬ್ದಾರಿ ಲಕ್ಷ್ಮಿ ಹೆಬ್ಬಾಳ್ಕರ್ ತೆಗೆದುಕೊಂಡ ಹೊಸ ರೂಪ ನೀಡಿದ್ದಾರೆ ಎಂದರು.











