ಮನೆ Latest News ಯತ್ನಾಳ್ ಉಚ್ಚಾಟನೆಗೆ ಬಿ.ವೈ. ವಿಜಯೇಂದ್ರ ಆಪ್ತರ ಪಟ್ಟು; ಆಪ್ತರ ಜೊತೆಗಿನ ಬಿಎಸ್ ವೈ ಸಭೆಯಲ್ಲಿ ವಿಜಯೇಂದ್ರ...

ಯತ್ನಾಳ್ ಉಚ್ಚಾಟನೆಗೆ ಬಿ.ವೈ. ವಿಜಯೇಂದ್ರ ಆಪ್ತರ ಪಟ್ಟು; ಆಪ್ತರ ಜೊತೆಗಿನ ಬಿಎಸ್ ವೈ ಸಭೆಯಲ್ಲಿ ವಿಜಯೇಂದ್ರ ಹಾಜರ್

0

ಬೆಂಗಳೂರು; ಯತ್ನಾಳ್ ಉಚ್ಚಾಟನೆಗೆ ಬಿ.ವೈ. ವಿಜಯೇಂದ್ರ ಆಪ್ತರು ಪಟ್ಟು ಹಿಡಿದಿದ್ದಾರೆ. ಅದರಂತೆ ಬೆಳ್ಳಂ ಬೆಳಗ್ಗೆ ಯಡಿಯೂರಪ್ಪ ಮನೆಗೆ ಮಾಜಿ ಶಾಸಕರ ದಂಡು ಆಗಮಿಸಿತು. ಎಂ.ಪಿ. ರೇಣುಕಾಚಾರ್ಯ, ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಸವರಾಜ್ ನಾಯಕ್, ಮಾಡಾಳ್ ವಿರೂಪಾಕ್ಷಪ್ಪ, ಎಂ.ಡಿ. ಲಕ್ಷ್ಮೀ ನಾರಾಯಣ್ ಸೇರಿ ಹಲವರು ಆಗಮಿಸಿದ್ರು. ಡಾಲರ್ಸ್ ಕಾಲೋನಿಯ ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿ, ಮಾಜಿ ಶಾಸಕರುಗಳು ಜೊತೆ ಯಡಿಯೂರಪ್ಪ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ರು.

ಈಗಗಾಲೇ  ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಗೆ ಕಾರ್ಯಕರ್ತರಿಂದ ಒತ್ತಾಯ ಕೇಳಿ ಬಂದಿದೆ.ಈ ಬಗ್ಗೆ ಬಿ.ಎಸ್. ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ ಮಾಜಿ ಶಾಸಕರುಗಳು.ಇನ್ನು ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭಾಗಿಯಾದಿದ್ದರು. ನಿನ್ನೆ ದೆಹಲಿಗೆ ತೆರಳಿ, ಯತ್ನಾಳ್ ವಿರುದ್ಧ ಕ್ರಮಕ್ಕೆ ಹೈಕಮಾಂಡ್ ಗೆ ವಿಜಯೇಂದ್ರ ಆಗ್ರಹಿಸಿದ್ದರು. ಈ ಬೆನ್ನೆಲ್ಲೆ ಇಂದು ಆಪ್ತರ ಜೊತೆಗಿನ ಬಿಎಸ್ ವೈ ಸಭೆಯಲ್ಲಿ ಭಾಗಿಯಾಗಿದ್ರು. ಬಿ.ಸಿ. ಪಾಟೀಲ್, ಬಸವರಾಜ್ ದಡೆಸಗೂರ್, ರಾಮಚಂದ್ರಪ್ಪ ಕೂಡ ಸಭೆಯಲ್ಲಿ ಉಪಸ್ಥಿತರಿದ್ದರು.

ಸಭೆ ಬಳಿಕ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ‌ ರಾಜ್ಯದಲ್ಲಿ ಸಂಘಟನಾ ಪರ್ವ‌ ನಡೀತ್ತಿದೆ.ಪಕ್ಷದ ವರಿಷ್ಠರ ಭೇಟಿ ಮಾಡಿದ್ದೇನೆ.ಮೂರು ಕ್ಷೇತ್ರಗಳ ಹಿನ್ನಡೆ ಬಗ್ಗೆ ಚರ್ಚೆ ಮಾಡಿದ್ದೇನೆ. ರಾಜ್ಯದ ರಾಜಕೀಯ ಪರಿಸ್ಥಿತಿ ಬಗ್ಗೆಯೂ ತಿಳಿಸಿದ್ದೇನೆ. ಆದರೆ ಯಾರ ವಿರುದ್ದವೂ ಚಾಡಿ ಹೇಳೋದು, ಅವರನ್ನು ಉಚ್ಚಾಟನೆ ಮಾಡಿಸೋ ಬಗ್ಗೆ ಹೇಳಿಲ್ಲ, ಅದರ‌ ಅವಶ್ಯಕತೆಯೂ‌ ನನಗಿಲ್ಲ.ಆದರೆ ಕಾರ್ಯಕರ್ತರ ಅಭಿಪ್ರಾಯ ಇದೆ. ಆದರೆ ಕೆಲವರು ತಮ್ಮ ವ್ಯಯಕ್ತಿಕ ಹಿತಾಸಕ್ತಿಗೆ ಪ್ರತ್ಯೇಕವಾಗಿ ಹೋಗ್ತಿದ್ದಾರೆ. ಕೆಲವರು ಯತ್ನಾಳ್ ಹೆಗಲ ಮೇಲೆ ಗನ್ ಇಟ್ಟುಕೊಂಡು ಕೆಲವರು ಗುಂಡು ಹಾರಿಸುವ ಕೆಲಸ ಮಾಡ್ತಿದ್ದಾರೆ.ಆದರೆ ಅವರ ಏನೇ ಉದ್ದೇಶ ಸಫಲ ಆಗಲ್ಲ.ಭ್ರಷ್ಟ ಕಾಂಗ್ರೆಸ್ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ಮಾಡಬೇಕು, ಆದರೆ ಅವರಿಗೆ ಅರ್ಥ ಆಗುತ್ತಿಲ್ಲ ಎಂದರು.

ಯಡಿಯೂರಪ್ಪ ಮತ್ತೆ ವಿಜಯೇಂದ್ರ‌ಗೆ ಬೈಯ್ಯೋದೆ ಒಂದು ಪದವಿ ಅಂದ್ಕೊಂಡಿದ್ದಾರೆ.ಇವತ್ತು ಮಾಜಿ ಶಾಸಕರು ಗಳು ಇದರ‌ ಬಗ್ಗೆ ಹೇಳಿದ್ದಾರೆ.ನಾನು ಅವರಿಗೆ ಇದನ್ನು ಬದಿಗೊತ್ತಿ  ಪಕ್ಷ ಸಂಘಟನೆ ಮಾಡಿ ಅಂತಷ್ಟೇ ಹೇಳಿದ್ದೇನೆ.ವಿಜಯೇಂದ್ರ ವಿರುದ್ಧ ಹೊಂದಾಣಿಕೆ ದಾಖಲೆ ಕುರಿತು ಯತ್ನಾಳ್ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಒಂದು ಕ್ಷಣವೂ ತಡಮಾಟದೇ ಮಾನ್ಯ ಯತ್ನಾಳ್ ಗೌಡ ಪಾಟೀಲ್ ಅವರು ಬಿಡುಗಡೆ ಮಾಡಲಿ.ಶುಭ ಮುಹೂರ್ತ ಕಾಯದೆ ವೀಡಿಯೋ ದಾಖಲೆ ಇದ್ದರೆ ತತಕ್ಷಣ‌ ಬಿಡುಗಡೆ ಮಾಡಿ. ಹೊಂದಾಣಿಕೆ ನನಗೆ ಅವಶ್ಯಕತೆ ಇಲ್ಲ.ಆದರೆ ಹೊಂದಾಣಿಕೆ ರಾಜಕಾರಣ ಅಂತ ಪಕ್ಷ ಸಂಘಟನೆಗೆ ಪೆಟ್ಟು ಕೊಡ್ತಿದ್ದಾರೆ ಎಂದಿದ್ದಾರೆ.

ಅವರಿಗೆ ಯಾವುದೇ ರೀತಿಯಲ್ಲಿ ಒಳ್ಳೆಯದು ಆಗಲ್ಲ.ಆದರೆ ಕಾರ್ಯಕರ್ತರ ಅಪೇಕ್ಷೇ ಇದೆ,‌ ಬಿಗಿ ಕ್ರಮ ಆಗಬೇಕು ಎಂದು.ಇದರ‌ ಬಗ್ಗೆ ವರಿಷ್ಠರು ತೀರ್ಮಾನ ಮಾಡ್ತಾರೆ.ವಿಜಯೇಂದ್ರ ಬದಲಾವಣೆ ಮಾಡುವ ವಿಚಾರಕ್ಕೆ ಮಾತನಾಡಿದ ಅವರು ವಿಜಯೇಂದ್ರ‌ ಬದಲಾವಣೆ ಮಾಡೋಕೆ ಅವರ ಜೊತೆ ಇನ್ನೂ ಹತ್ತು ಜನರನ್ನು ಸೇರಿಸಿಕೊಳ್ಳಲಿ ನನಗೇನು ತೊಂದರೆ ಇಲ್ಲ.ಇವಾಗ್ಲೂ ಮನವಿ ಮಾಡುತ್ತೇನೆ ಪಕ್ಷದ ಕಾರ್ಯಕರ್ತರಿಗೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬಾರದು.ನಮ್ಮ ನಡವಳಿಕೆ ಸಂಘಟನೆ ಗೆ ಪೂರಕವಾಗಿ ಇರಬೇಕು.ಅದು ಬಿಟ್ಟು ತೊಂದರೆ ಕೊಡುವ ಕೆಲಸ ಮಾಡಬಾರದು.ನನ್ನ ವಿರುದ್ಧ ಏನೇ ದಾಖಲೆ ಇದ್ದರೂ ತಡ ಮಾಡದೇ ಬಿಡುಗಡೆ ಮಾಡಿ ಎಂದಿದ್ದಾರೆ.