ಬೆಂಗಳೂರು; ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯ ಆರಂಭದಲ್ಲೇ ಏರು ಧ್ವನಿಯಲ್ಲಿ ಅಧಿಕಾರಿಯೊಬ್ಬರಿಗೆ ಸಿಎಂ ಪ್ರಶ್ನೆ ಮಾಡಿದ್ದಾರೆ. ಏನಪ್ಪಾ ಕೆಲಸ ಮಾಡಲು ಆಗಲ್ವಾ ಎಂದು ಗರಂ ಆಗಿಯೇ ಪ್ರಶ್ನೆ ಮಾಡಿದ ಸಿಎಂ ಪ್ರಶ್ನಿಸಿದ್ದಾರೆ.
ಸಿಎಂ ನೇತೃತ್ವದ ಸಭೆಗೂ ಮುನ್ನ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇಲಾಖೆ ಸಭೆ ನಡೆಸಿದ್ದಾರೆ. ಸಭೆ ಬಳಿಕ ಸಿಎಂ ಸಿದ್ದರಾಮಯ್ಯ ಮಾತನಾಡಿ ಸಿಜೆರಿಯೇನ್ ಆಪರೇಷನ್ ಮಾಡುವಾಗ ನಾಲ್ವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ ಸಿಜೆರಿಯೇನ್ ಆಪರೇಷನ್ ವೇಳೆ ಸಾವನ್ನಪ್ಪಿದ ಉದಾಹರಣೆ ಇಲ್ಲ. ಲಿಂಗರ್ ಲ್ಯಾಕ್ಟೇಟ್ ಸರಬರಾಜು ಮಾಡಿರೋದು ಪಶ್ಚಿಮ ಬಂಗಾಳದ ಫರ್ಮಾಸಿಟಿಕಲ್‌ನವರು. ಬಳ್ಳಾರಿ ಜಿಲ್ಲಾ ಔಷಧಿ ನಿಯಂತ್ರಕನನ್ನು ಸಸ್ಪೆಂಡ್ ಮಾಡಲಾಗಿದೆ. ಪಶ್ಚಿಮ ಬಂಗಾಳದ ಕಂಪನಿ ಬ್ಲಾಕ್‌ಲಿಸ್ಟ್‌ಗೆ ಹಾಕಿದ್ದೇವೆ. ಮೃತ ಕುಟುಂಬಗಳಿಗೆ ಸರ್ಕಾರದಿಂದ ಎರಡು ಲಕ್ಷ ಪರಿಹಾರ ಹಾಗೂ ಕಂಪನಿಯಿಂದಲೂ ಪರಿಹಾರ ನೀಡಲಾಗುವುದು. ಆಸ್ಪತ್ರೆ ಎಂಡಿಗೆ ನೋಟೀಸ್ ಕೊಡಲು ಸೂಚನೆ ಕೊಟ್ಟಿದ್ದೇನೆ ಎಂದ್ರು.
ಈಗ ಸರಬರಾಜಾಗಿರುವ ಔಷಧಿಗಳನ್ನು ವಿತ್‌ಡ್ರಾ ಮಾಡುತ್ತೇವೆ. ಚೆನ್ನೈ ಮಾದರಿಯಲ್ಲಿ ಮೆಡಿಕಲ್ ಸ್ಟ್ರಕ್ಚರ್ ಜಾರಿಗೆ ಸೂಚನೆ ನೀಡಿದ್ದೇವೆ. ಬಳ್ಳಾರಿಯಲ್ಲಿರುವ ಸರ್ಜನ್‌ಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ಆಪರೇಷನ್ ಮಾಡಿರುವ ವೈದ್ಯರ ತಪ್ಪಿಲ್ಲ ಅಂತ ಪ್ರಾಥಮಿಕ ಮಾಹಿತಿ ವರದಿ ಇದೆ. ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲು ಸೂಚನೆ ನೀಡಿದ್ದೇನೆ. ನಾಲ್ಕು ಮಂದಿ ಬಾಣಂತಿಯರು ಸಾವನ್ನಪ್ಪಿದ್ದರು. ನಾವು ಎಕ್ಸ್ ಫರ್ಟ್ ಕಮಿಟಿ ಮಾಡಿದ್ದೆವು. ರಾಜೀವ್,ವಾಣಿವಿಲಾಸ ಆಸ್ಪತ್ರೆ ವೈದ್ಯಾಧಿಕಾರಿ ಕಮಿಟಿ ಮಾಡಿದ್ದೆವು.
ವಿಂಗರ್ ಲ್ಯಾಕ್ಟೇಟ್ ದ್ರಾವಣ ಬಳಕೆ ಮಾಡಲಾಗಿದೆ. ಅದನ್ನ ಸಪ್ಲೈ ಮಾಡಿದ್ದವರು ಪಶ್ಚಿಮಬಂಗ ಫಾರ್ಮಾಸುಟಿಕಲ್ಸ್ ನವರು. ಡ್ರಗ್ ಕಂಟ್ರೋಲರ್ ಸಪ್ಲೈ ಮಾಡ್ತಾರೆ. ಕೂಡಲೇ ಡ್ರಗ್ಸ್ ಕಂಟ್ರೋಲರ್ ಸಸ್ಪೆಂಡ್ ಗೆ ಸೂಚನೆ ಕೊಡಲಾಗಿದೆ. ಸಾವನ್ನಪ್ಪಿದ್ದವರಿಗೆ ಪರಿಹಾರ ಕೊಡ್ತೇವೆ. ತಲಾ ೨ ಲಕ್ಷ ಪರಿಹಾರ ಕೊಡ್ತೇವೆ. ಆ ಕಂಪನಿಗಳಿಂದಲೂ ಪರಿಹಾರ ಕೊಡಿಸ್ತೇವೆ. ಕರ್ನಾಟಕ ಮೆಡಿಕಲ್‌ಸಪ್ಲೈಗೆ ನವರಿಗೆ ನೊಟೀಸ್ ಕೊಡೋಕೆ ಹೇಳಿದ್ದೇನೆ. ೧೯೨ ಕಂಪನಿಗಳು ಸಪ್ಲೈ ಮಾಡುತ್ತೇವೆ. ಡ್ರಗ್ಸ್ ಕಂಟ್ರೋಲ್ ಬೋರ್ಡ್ ಸ್ಟ್ರಕ್ಚರ್ ಮಾಡುವಂತೆ ಹೇಳಿದ್ದೇನೆ. ಒಂದು ಕಮಿಟಿಯನ್ನ ರಚನೆ ಮಾಡ್ತೇವೆ. ಬಳ್ಳಾರಿ ಜಿಲ್ಲಾ ಸರ್ಜನ್ ಗೆ ಎಚ್ಚರಿಕೆ ಕೊಟ್ಟಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಎಚ್ಚರಿಕೆ ರವಾನಿಸಿದ್ದೇವೆ. ಸರ್ಜರಿ ಮಾಡಿದ್ದ ವೈದ್ಯರ ತಪ್ಪಿಲ್ಲ ಅಂತ ಬಂದಿದೆ.ಅವರಿಗೂ ಈ ರೀತಿ ಆಗದಂತೆ ಎಚ್ಚರಿಕೆ ಕೊಟ್ಟಿದ್ದೇವೆ ಎಂದ್ರು.











