ಮನೆ Latest News ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು; ಮಾಜಿ ಸಿಎಂ ಡಿ ವಿ ಸದಾನಂದಗೌಡಗೆ ಯತ್ನಾಳ್ ವಾರ್ನಿಂಗ್

ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು; ಮಾಜಿ ಸಿಎಂ ಡಿ ವಿ ಸದಾನಂದಗೌಡಗೆ ಯತ್ನಾಳ್ ವಾರ್ನಿಂಗ್

0

ಬೆಂಗಳೂರು; ಯತ್ನಾಳ್ ವಿರುದ್ಧ  ಮಾಜಿ ಸಿಎಂ ಸದಾನಂದಗೌಡ ವಾಗ್ದಾಳಿ ವಿಚಾರಕ್ಕೆ ಸಂಬಂಧಪಟ್ಟಂತೆ ವಿಜಯಪುರ ‌ನಗರ ಶಾಸಕ ಬಸನಗೌಡ ಪಾಟೀಲ್ ಮಾಜಿ ಸಿಎಂ ಡಿ ವಿ ಸದಾನಂದಗೌಡಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಅವರ ಬಂಡವಾಳ ಬಯಲು ಮಾಡುತ್ತೇನೆ. ಯಡಿಯೂರಪ್ಪ ಕುಟುಂಬದ ವಿರುದ್ಧ ಸದಾನಂದಗೌಡರು ಮಾತನಾಡಿರೋದನ್ನೆಲ್ಲ ಬಿಚ್ಚಿಡುವೆ. ನನಗಿಂತ ಕೆಟ್ಟದಾಗಿ ಸದಾನಂದಗೌಡ ಮಾತನಾಡಿದ್ದಾರೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ ಸದಾನಂದಗೌಡ ಯಾಕೆ ಗಾಬರಿಯಾಗಬೇಕು. ಸದಾನಂದಗೌಡರೇ ಗಾಬರಿಯಾಗಬೇಡಿ ಎಂದಿದ್ದಾರೆ.

ದೀಪ ಆರುವವರ ಬಗ್ಗೆ ನಾನು ಮಾತನಾಡಲ್ಲ. ಸದಾನಂದಗೌಡ ದೀಪ ಆರುತ್ತಿದೆ ಎಂದಿದ್ದಾರೆ.ಅವರ ದೀಪ ಈಗಾಗಲೆ ಆರಿ ಹೋಗಿದೆ. ನಾನು ಯಾರು ಜೊತೆನೂ ಎಡ್ಜಸ್ಟಮೆಂಟ್ ಮಾಡಿಕೊಂಡಿಲ್ಲ. ನನಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ.ಇದು ಹೊಸ ವಚನ ಇದೆ ಎಂದು ಡಿವಿಎಸ್ ವಿರುದ್ಧ ವಚನದ ಮೂಲಕ ಯತ್ನಾಳ‌ ವಾಗ್ದಾಳಿ ನಡೆಸಿದ್ದಾರೆ.ಇದು ಬಸವ ವಚನ ಎಂದು ಯತ್ನಾಳ್ ಹೇಳಿದ್ದಾರೆ .ಸದಾನಂದಗೌಡರ ಬಗ್ಗೆ ವಚನ ಹೇಳಿ ವ್ಯಂಗ್ಯವಾಡಿದ್ದಾರೆ. ಡಿವಿಎಸ್ ಬಣ್ಣ ಬಯಲು‌ ಮಾಡುತ್ತೇನೆ.ನನ್ನ ವಿರುದ್ಧ ಮಾತನಾಡಿದವರ ಬಣ್ಣ ಬಯಲು ಮಾಡುತ್ತೇನೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಿಎಂ ಸದಾನಂದಗೌಡಗೆ ಪಂಥಾಹ್ವಾನ ನೀಡಿದ್ದಾರೆ ಯತ್ನಾಳ್. ಯಡಿಯೂರಪ್ಪ ವಿರುದ್ಧ ಇದೇ‌ ಸದಾನಂದಗೌಡ ಕೆಟ್ಟದಾಗಿ ಮಾತನಾಡಿದ್ದಾರೆ.ಇಲ್ಲ ಎನ್ನೋದಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ ಎಂದು ಯತ್ನಾಳ್ ಆಣೆ ಪ್ರಮಾಣಕ್ಕೆ ಆಹ್ವಾನಿಸಿದ್ದಾರೆ.

ಪಕ್ಷದ ಭಿನ್ನಮತದ ಬಗ್ಗೆ ಎರಡು ಬಾರಿ ವರಿಷ್ಠರಿಗೆ ಪತ್ರ ಬರೆದಿದ್ದೆ, ಆದರೆ ಅದಕ್ಕೆ ಅವರು ಸ್ಪಂದಿಸದಿರುವುದು ಮನಸ್ಸಿಗೆ ನೋವು ತಂದಿದೆ; ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೆ

ಬೆಂಗಳೂರು;ಪಕ್ಷದ ಭಿನ್ನಮತದ ಬಗ್ಗೆ ಎರಡು ಬಾರಿ ವರಿಷ್ಠರಿಗೆ ಪತ್ರ ಬರೆದಿದ್ದೆ.ಆದರೆ ಅದಕ್ಕೆ ಅವರು ಸ್ಪಂದಿಸದಿರುವುದು ಮನಸ್ಸಿಗೆ ನೋವು ತಂದಿದೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಡಿ.ವಿ. ಸದಾನಂದ ಗೌಡ ಹೇಳಿಕೆ ನೀಡಿದ್ದಾರೆ.

ಈಗ ಪಕ್ಷದಲ್ಲಿ ನಡೆಯುತ್ತಿರುವ ಗುಂಪುಗಾರಿಕೆ ದುರದೃಷ್ಟಕರ.ನಾನು ಅಧ್ಯಕ್ಷನಾಗಿದ್ಸಾಗ ಇದಕ್ಕಿಂತಲೂ ಪ್ರಬಲ ಗುಂಪುಗಳು ಇದ್ದವು. ಆದರೆ ಆಗ ಯಾವ ಗುಂಪುಗಳೂ ಬೀದಿಗೆ ಇಳಿದಿರಲಿಲ್ಲ. ಆದರೆ ಪಕ್ಷದಲ್ಲೇ ಪ್ರಥಮವಾಗಿ ಬೀದಿಗೆ ಬಂದಿರುವುದು ನೋವಿನ ಸಂಗತಿ.ಕೆಲವರು ಈ ರೀತಿ ಆದರೆ ಒಳ್ಳೆಯದು, ನಮಗೆ ಅನುಕೂಲ ಆಗಬಹುದು ಎಂದು ಬಿಜೆಪಿಯಲ್ಲಿ ಕೆಲವರು ಇದ್ದಾರೆ. ದೇಶದಲ್ಲಿ ಸಿಗದಿರುವ ವಿಷಯಗಳನ್ನು ಕಾಂಗ್ರೆಸ್ ರಾಜ್ಯದಲ್ಲಿ ಕೊಟ್ಟಿದೆ.ಇಂತಹ ವಿಷಯಗಳ ಮೂಲಕ ಒಗ್ಗಟ್ಟಿನ ಹೋರಾಟ ಮಾಡದೇ ಬೀದಿಗಿಳಿದಿದ್ದಾರೆ. ನಾನು ಇವತ್ತು ಯಾವುದೇ ಹುದ್ದೆಯಲ್ಲಿ ಇಲ್ಲದೇ ಇರಬಹುದು. ಕರ್ನಾಟಕದ ಬಗ್ಗೆ ಹೈಕಮಾಂಡ್ ಗಂಭೀರವಾಗಿ ತೆಗೆದುಕೊಳ್ಳಬೇಕು.ಶಿಸ್ತಿನ ವಿಷಯದಲ್ಲಿ ಯಾರೂ ಕೂಡ ನಿರ್ಲಕ್ಷ್ಯ ತೋರಬಾರದು.ಬಿಜೆಪಿ-ಜೆಡಿಎಸ್ ಒಟ್ಟಾಗಿ ಹೋದರೂ ಇದರ ಅನುಕೂಲ ತೆಗೆದುಕೊಳ್ಳದೇ ಇರುವುದು ದೊಡ್ಡ ದುರಂತ ಎಂದಿದ್ದಾರೆ.

ಕಾಂಗ್ರೆಸ್ ಜನ ವಿರೋಧಿಗಳ ನಿಲುವಿನ ಬಗ್ಗೆ ಜನರಿಗೆ ತಲುಪಿಸಿಲ್ಲ. ಜನರು ಸರ್ಕಾರದ ದುರಾಡಳಿತದ ಬಗ್ಗೆ ಮಾತಾಡುತ್ತಿಲ್ಲ. ಆದರೆ ಬಿಜೆಪಿಯ ಗುಂಪುಗಾರಿಕೆ, ವಿಭಜನೆ ಬಗ್ಗೆ ಮಾತಾಡುತ್ತಿದ್ದಾರೆ.ಕಳೆದ ಚುನಾವಣೆ ಸೋಲಿನ ಬಳಿಕ ಒಂದು ಆತ್ಮಾವಲೋಕನ ಸಭೆಯನ್ನೂ ಮಾಡಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಿದ್ದು ಹೈಕಮಾಂಡ್. ಅವರನ್ನು ವಿರೋಧ ಮಾಡುವರು ದೆಹಲಿಗೆ ಹೋಗಿ ಮಾತಾಡಬೇಕು. ಅದು ಬಿಟ್ಟು ಬೀದರ್ ನಲ್ಲಿ ನಿಂತು ತಮಟೆ ಬಾರಿಸುತ್ತಿದ್ದಾರೆ. ಅವರು ಎಲ್ಲರೂ ಹೈಕಮಾಂಡ್ ಗೆ ಹತ್ತಿರ ಇರುವವರೇ. ಈಗ ಬೀದಿಯಲ್ಲಿ ಮಾತಾಡುತ್ತಿದ್ದಾರೆ ಅಂದರೆ ಅವರು ಪಕ್ಷದಲ್ಲಿರಲು ಯೋಗ್ಯರಲ್ಲ. ಉಪ ಚುನಾವಣೆಯಲ್ಲಿ ಮಾಜಿ ಸಿಎಂ ಪುತ್ರರು ಸೋತಿದ್ದಾರೆ. ಜೆಡಿಎಸ್‌ ಮತ್ತು ಬಿಜೆಪಿ ಒಟ್ಟಾಗಿ ಹೋರಾಟ ಮಾಡಿದರೂ ಲಾಭ ಪಡೆಯಲು ಆಗಿಲ್ಲ. ಕಾಂಗ್ರೆಸ್ ಸರ್ಕಾರದ ಅಕ್ರಮಗಳ ಬಗ್ಗೆ ಜನರಿಗೆ ತಲುಪಿಸುವಲ್ಲಿ ವಿಫಲರಾಗಿದ್ದೇವೆ. ವಿಧಾನಸಭೆ ಸೋಲಿನ ನಂತರ ಆತ್ಮಾವಲೋಕನ ಸಭೆ ನಾವು ಮಾಡಲೇ ಇಲ್ಲ. ಕಾಂಗ್ರೆಸ್ ನಲ್ಲೂ ಗುಂಪುಗಾರಿಕೆ ಇದೆ, ಅದನ್ನು ಹೇಳಲು ನಮಗೆ ಆಗುತ್ತಿಲ್ಲ. ಆದರೆ ಬಿಜೆಪಿಯಲ್ಲಿರುವ ಗುಂಪುಗಾರಿಕೆಯನ್ನು ಎತ್ತಿ ತೋರಿಸುತ್ತಿದ್ದಾರೆ. ಹೊಂದಾಣಿಕೆ ರಾಜಕೀಯ ನ್ಯಾಷನಲ್ ಹೈವೇಯಾಗಿದೆ. ಬಿಜೆಪಿಗೆ ಬಂದು ಬಿಜೆಪಿಯ ವಿರುದ್ಧವೇ ಮಾತನಾಡುತ್ತಾರೆ,  ಅದರ ವಿರುದ್ಧ ಕ್ರಮ ಆಗಿಲ್ಲ.ಡಿ. 3ರಂದು ಕೇಂದ್ರದಿಂದ ಪ್ರಧಾನ ಕಾರ್ಯದರ್ಶಿಗಳು ಬರುತ್ತಾರೆ. ಅಲ್ಲಿ ಆದರೂ ಕ್ರಮ ಆಗುತ್ತಾ ನೋಡೋಣ ಎಂದಿದ್ದಾರೆ.

ಪಕ್ಷದ ಆಂತರಿಕ ವಿಷಯದ ಬಗ್ಗೆ ಯಾರು ಮಾತಾಡಿದರೂ ಅದು ಅಶಿಸ್ತೇ. ನಾನು ಶಸ್ತ್ರ ತ್ಯಾಗ ಮಾಡುವ ಪ್ರಶ್ನೆಯೇ ಇಲ್ಲ, ಪಕ್ಷದಲ್ಲಿ ಶುದ್ದೀಕರಣವಾಗಬೇಕು. ಎರಡು ಬಣಗಳು ಬೀದಿಗೆ ಹೋಗುವ ಬದಲು ಫ್ಲೈಟ್ ಹತ್ತಿ ದೆಹಲಿಗೆ ಹೋಗಿ. ಬೀದಿಗೆ ಹೋಗಿ ಕೈ ಕೈ ಮಿಲಾಯಿಸಿಕೊಳ್ಳುವ ಬದಲು ವರಿಷ್ಠರ ಬಳಿ ಹೋಗಿ ಮಾತಾಡಿ. ಪಕ್ಷದ ಮೇಲೆ ನಿಮಗೆ ನಿಜವಾಗಿಯೂ ಗೌರವ ಇದ್ದರೆ ಹೋಗಿ, ಇಲ್ಲ ಅಂದರೆ ನೀವೇ ಸ್ವಾರ್ಥಿಗಳು. ಇಲ್ಲ ಅಂದರೆ ಪಕ್ಷದ ನಿಷ್ಠಾವಂತ ಕಾರ್ಯಕರ್ತ ಅನ್ನಿಸಿಕೊಳ್ಳಲೂ ನೀವು ನಾಲಾಯಕ್ ಎಂದಿದ್ದಾರೆ.

ಹೈಕಮಾಂಡ್ ನವರ ಗಮನಕ್ಕೆ ಎಲ್ಲವೂ ಇದೆ. ಆದರೂ ಯಾಕೋ ವರಿಷ್ಠರಿಗೆ ನಮ್ಮ ಬಗ್ಗೆ ಗಮನ ಇಲ್ಲ. ನಾನು ಅಧ್ಯಕ್ಷ ಇದ್ದಾಗಲೂ ಇದಕ್ಕಿಂತ ದೊಡ್ಡ ಗುಂಪುಗಳಿದ್ದವು. ಪಕ್ಷದ ಕಟ್ಟಿದ್ದು ನಾವು ಅಂತ ಅನಂತ್‌ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಪ್ರಬಲವಾಗಿ ಸೆಣಸಾಡುತ್ತಿತ್ತು. ಆದರೆ ಅನಂತ್ ಕುಮಾರ್ ಹಾಗೂ ಯಡಿಯೂರಪ್ಪ ಗುಂಪು ಯಾವತ್ತೂ ಬೀದಿಗೆ ಇಳಿದಿರಲಿಲ್ಲ. ನಮ್ಮೊಳಗಿನ ಆಂತರಿಕ ಭಿನ್ನಮತದಿಂದ ಕಾರ್ಯಕರ್ತರಿಗೆ ಬಹಳ ನೋವಿದೆ. ನನ್ನ ಮಾನಸಿಕ ನೋವನ್ನು ನಾನು ಯಾರಲ್ಲೂ ಹೇಳುವುದಕ್ಕಾಗುತ್ತಿಲ್ಲ. ಪಕ್ಷದ ಈಗಿನ ಸನ್ನಿವೇಶ ದೊಡ್ಡ ದುರಂತ. ಮಹಾರಾಷ್ಟ್ರ ಸರ್ಕಾರ ರಚನೆ ಬಳಿಕವಾದರೂ ಹೈಕಮಾಂಡ್ ಕರ್ನಾಟಕದತ್ತ ಗಮನ ಕೊಡಬೇಕು. ಯಾರೇ ತಪ್ಪು ಮಾಡಿದರೂ ಹೈಕಮಾಂಡ್ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಿ. ನಮ್ಮ ದೌರ್ಬಲ್ಯಗಳನ್ನು ಪತ್ತೆ ಹಚ್ಚುವ ಕೆಲಸವನ್ನೂ ನಾವು ಮಾಡಲಿಲ್ಲ. ಬಿಜೆಪಿಯ ಗುಂಪುಗಾರಿಕೆ ನಮಗೆ ದೌರ್ಬಲ್ಯ, ಕಾಂಗ್ರೆಸ್ ಗೆ ನಮ್ಮ ದೌರ್ಬಲ್ಯವೇ ಶಕ್ತಿ, ಅಸ್ತ್ರ. ರಾಜ್ಯ ಬಿಜೆಪಿಗೆ ಈ ದಯನೀಯ ಪರಿಸ್ಥಿತಿ ಬರಬಾರದಿತ್ತು. ರಾಜ್ಯ ಬಿಜೆಪಿಯ ಯಾವುದೇ ಹಿರಿಯ ನಾಯಕ ಈಗಿನ ಪರಿಸ್ಥಿತಿ ಸರಿ ಮಾಡಲು ಆಗಲ್ಲ. ವಿಧಾನಸಭೆಯಲ್ಲಿ ನಮ್ಮವರು ಎಷ್ಟೇ ಖಡಕ್‌ ಹೋರಾಟ ಮಾಡಿದರೂ ಕವಡೆ ಕಾಸಿನ ಕಿಮ್ಮತ್ತಿಲ್ಲ. ಬಿಜೆಪಿಯಲ್ಲಿ ಪ್ರತಿಷ್ಠೆ ಬದಿಗೊತ್ತಿ ಕೆಲಸ ಮಾಡುವ ನಾಯಕರು ಬರಬೇಕು. ಕೇಂದ್ರದ ಸಚಿವರಾಗಿರುವ ರಾಜ್ಯದ ನಾಯಕರೂ ಪಕ್ಷದ ಸಂಘಟನೆ ಬಗ್ಗೆ ಗಮನ ಹರಿಸಬೇಕು. ರಾಜ್ಯದಿಂದ ಕೇಂದ್ರ ಸಚಿವರು ಆಗಿರುವರು ಪಕ್ಷದ ವಿಚಾರಗಳತ್ತ ಗಮನ ಕೊಡಬೇಕು. ಮುಂದಿನ ಕೋರ್ ಕಮಿಟಿ ಸಭೆಯಲ್ಲಿ ಎಲ್ಲವನ್ನೂ ಚರ್ಚೆ ಮಾಡುತ್ತೇವೆ ಎಂದಿದ್ದಾರೆ.

ನಂತರ ಹೈಕಮಾಂಡ್ ಗೆ ವರದಿ ಕಳಿಸುವ ಯೋಚನೆ ಇದೆ. ರಾಜ್ಯಾಧ್ಯಕ್ಷರ ಬದಲಾವಣೆಗೆ ಆಗ್ರಹ ಯಾರು ಬೇಕಾದರೂ ಮಾಡಬಹುದು.ಆದರೆ ಏನು ಮಾಡಬೇಕು ಅಂತ ಹೈಕಮಾಂಡ್ ನವರು ತೀರ್ಮಾನ ಮಾಡುತ್ತಾರೆ.ವರಿಷ್ಠರು ಇದರ ಬಗ್ಗೆ ಆಲೋಚನೆ ಮಾಡುತ್ತಾರೆ.ನನಗೆ ಪಕ್ಷದ ಪರಿಸ್ಥಿತಿ ಸರಿಯಾಗಬೇಕು ಅಷ್ಟೇ. ಉಪಚುನಾವಣಾ ಸೋಲಿಗೆ ಆಂತರಿಕ ಕಚ್ಚಾಟ ಕಾರಣ ಅಂತ ನಾನು ಒಪ್ಪಿಕೊಳ್ಳಲ್ಲ. ಈ‌ ಒಂದೂವರೆ ವರ್ಷದಲ್ಲಿ ನಾವು ಪವರ್ ಫುಲ್ ವಿಪಕ್ಷ ಅಂತ ನಾವು ಜನರಿಗೆ ತೋರಿಸಿಕೊಂಡಿಲ್ಲ.ಕಾಂಗ್ರೆಸ್ ನವರು ಚಿನ್ನದ ಬಟ್ಟಲಿನಲ್ಲಿ ವಿಷಯಗಳನ್ನು ಇಟ್ಟು ಕೊಡುತ್ತಿದ್ದರೂ ನಾವು ಅದನ್ನು ತೆಗೆದುಕೊಳ್ಳಲು ಆಗುತ್ತಿಲ್ಲ. ಸೆಲ್ಫ್ ಸ್ಟೈಲ್ ಲೀಡರ್ ಗಳು ಅಂತ ಕರೆಸಿಕೊಂಡವರು ನಮ್ಮಲ್ಲಿ ಬಹಳ ಇದ್ದಾರೆ. ಒಬ್ಬಿಬ್ಬರ ವಿರುದ್ಧ ನಿಜವಾದ ಶಿಸ್ತು ಕ್ರಮ ಕೈಗೊಂಡರೆ ಉಳಿದವರು‌ ಸರಿಯಾಗುತ್ತಾರೆ. ನಾನು ಯಾವುದೇ ಗುಂಪಿನ ಬಗ್ಗೆಯೂ ಹೆಸರು ಹಿಡಿದು ಮಾತಾಡಲ್ಲ. ರಾಜ್ಯ ಬಿಜೆಪಿಗೆ ಇವತ್ತು ಈ ಪರಿಸ್ಥಿತಿ ಬಂತಲ್ಲಾ ಅಂತ ನೋವಾಗಿದೆ .ಹೈಕಮಾಂಡ್ ಕೂಡಲೇ ಮಧ್ಯ ಪ್ರವೇಶ ಮಾಡಬೇಕು. ಅಶಿಸ್ತು ತೋರಿದ ಯಾರೇ ಆಗಲಿ ಶಿಸ್ತು ಕ್ರಮ ತೆಗೆದುಕೊಳ್ಳಬೇಕು.ನಾವು ಹಿರಿಯರು ಸೇರಿಕೊಂಡು ಒಂದು ಸಭೆ ಕರೆಯಬೇಕು, ಎರಡೂ ಗುಂಪುಗಳನ್ನು ಕರೆದು ಮಾತಾಡಬೇಕು ಅಂತ ನಮ್ಮ‌ ಮನಸ್ಸಿನಲ್ಲಿತ್ತು.ಆದರೆ ಅವರು ಯಾವಾಗ ಬೀದಿಗೆ ಇಳಿದರೋ‌ ಆಗ ಇದು ನಮ್ಮ ಕೈಯಲ್ಲಿ ಆಗದ ಕೆಲಸ ಅಂತ ಗೊತ್ತಾಯಿತು. ಬಿಜೆಪಿ ಭಿನ್ನಮತ ರಾಜ್ಯದ ಹಿರಿಯರ ಕೈ‌ ಮೀರಿ ಹೋಗಿದೆ ಎಂದಿದ್ದಾರೆ,