ಮನೆ Latest News ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ; ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆ..

ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ; ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆ..

0

ಬೆಂಗಳೂರು; ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ ಎಂದು  ಗೃಹ ಸಚಿವ ಡಾ. ಪರಮೇಶ್ವರ್ ಹೇಳಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ಸಂಪುಟ ಪುನಾರಚನೆ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಡಿಸಿಎಂ ಅವರು ದೆಹಲಿಗೆ ಹೋಗಿದ್ದಾರೆ. ಯಾಕೆ ಅಂತ ಗೊತ್ತಿಲ್ಲ, ಇಲಾಖೆ ವಿಚಾರನಾ, ಪಕ್ಷದ ವಿಚಾರನಾ ಅಂತ ಗೊತ್ತಿಲ್ಲ ಎಂದಿದ್ದಾರೆ.

ಇವತ್ತು ಸಿಎಂ ದೆಹಲಿಗೆ ಹೋಗ್ತಿದ್ದಾರೆ. ವರ್ಕಿಂಗ್ ಕಮಿಟಿಗಳ ಸಭೆ ನಾಳೆ ಇದೆ, ಸಾಮಾನ್ಯವಾಗಿ ಈ ಸಭೆಗೆ ಸಿಎಂ, ಕೆಪಿಸಿಸಿ ಅಧ್ಯಕ್ಷರನ್ನು ಕರೀತಾರೆ.ಇದಾದ ನಂತರ ಹೈಕಮಾಂಡ್ ನವ್ರ ಜತೆ ಸಂಪುಟ ಪುನಾರಚನೆ ಬಗ್ಗೆ ಅವರಿಬ್ರೂ ಚರ್ಚೆ ಮಾಡಬಹುದೇನೋ..? ಇದರ ಜತೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕೂಗೂ ಇದೆ, ಅಲ್ಲಲ್ಲೇ ಮಾತುಗಳು ಈ ಬಗ್ಗೆ ಕೇಳಿ ಬರ್ತಿವೆ ಎಂದಿದ್ದಾರೆ.

ಈ ಎರಡೂ ವಿಚಾರಗಳ ಬಗ್ಗೆನೂ ಸಿಎಂ, ಡಿಸಿಎಂ ಚರ್ಚೆ ಮಾಡಿ ಏನು ತೀರ್ಮಾನ ಮಾಡ್ಕೊಂಡು ಬರ್ತಾರೆ ಅಂತ ಗೊತ್ತಿಲ್ಲ. ಖಾತೆ ಬದಲಾವಣೆ ಬಗ್ಗೆಯೂ ಏನು ತೀರ್ಮಾನ ಮಾಡ್ತಾರೋ ಗೊತ್ತಿಲ್ಲ. ಇಷ್ಟು ಕಾಲ ವರುಷ್ಠರು ಏನಹ ಜವಾಬ್ದಾರಿ ಕೊಟ್ಟೊದ್ದಾರೋ ಮಾಡಿಕೊಂಡು ಬಂದಿದ್ದೇನೆ. ಈಗಲೂ ಅವರು ಏನೇ ಜವಾಬ್ದಾರಿ ಕೊಟ್ರೂ ಮಾಡೋದಿಕ್ಕೆ ನಾನು ತಯಾರಾಗಿರ್ತೇನೆ. ಪಕ್ಷದ ಸೂಚನೆ 35 ವರ್ಷಗಳಿಂದ ಪಾಲಿಸಿಕೊಂಡೇ‌ ಬಂದಿದ್ದೇನೆ, ಸರಕಾರ, ಪಕ್ಷದಲ್ಲಿ ಕೊಟ್ಟ ಜವಾಬ್ದಾರಿ ಮಾಡ್ತಾ ಬಂದಿದ್ದೇನೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆಯೂ ಕೇಳಿದ್ದೇನೆ. ಒಂದೊಮ್ಮೆ ಆ ವಿಚಾರ ವರಿಷ್ಠರ ಮುಂದೆ ಇದ್ರೆ ಬದಲಾವಣೆ ಮಾಡ್ತಾರೆ ಎಂದಿದ್ದಾರೆ.

ಇನ್ನು ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯಿಸಿರುವ ಸಚಿವ  ಆರ್ ಬಿ ತಿಮ್ಮಾಪುರ ಯಾಕೆ ನನ್ನ ಕೈ ಬಿಡ್ತಾರೆ? ಏನು ತಪ್ಪು ಮಾಡಿದ್ದೇನೆ. ಎಲ್ಲವೂ ವರಿಷ್ಠ ರಿಗೆ ಬಿಟ್ಟಿದ್ದು, ಸಿಎಂಗೆ ಬಿಟ್ಟಿದ್ದು. ಎಐಸಿಸಿ ನಾಯಕರಿಗೆ ಬಿಟ್ಟಿರುವ ವಿಚಾರ. ನಾನು ಕುರ್ಚಿಗೆ ಅಂಟಿಕೊಂಡು ಕೂತವನಲ್ಲ. ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ನನ್ನ ಮೇಲೆ ಬಂದ ಆರೋಪಗಳೆಲ್ಲ ನಿರಾಧಾರ ಸುಳ್ಳು. ನನಗಂತೂ ಯಾರೂ ಸಚಿವ ಸ್ಥಾನ ತ್ಯಾಗ ಮಾಡಿ ಅಂತ ಹೇಳಿಲ್ಲ. ಅಂಥ ಸೂಚನೆ ಬಂದಾಗ ನೋಡೋಣ. ಅಬಕಾರಿ ಅಧಿಕಾರಿಗಳ ವರ್ಗಾವಣೆಗೆ ಕೌನ್ಸೆಲಿಂಗ್ ತರುತ್ತಿದ್ದೇವೆ ಎಂದಿದ್ದಾರೆ.

 

ಸಚಿವ ಎಚ್ ಕೆ ಪಾಟೀಲ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು  ಮಾಧ್ಯಮದಲ್ಲಿ ಹೆಚ್ಚು ಚರ್ಚೆಯಾಗ್ತಿದೆ. ನಮ್ಮ ಹಿರಿಯ ಸಚಿವರು ಈ ವಿಚಾರದಲ್ಲಿ ಸೂಕ್ಷ್ಮವಾಗಿ ಹೇಳಿದ್ದಾರೆ. ಇದು ಸಮ್ ಥಿಂಗ್ ಇಸ್ ಆಫಿಂಗ್ ಅಂತ ಅನ್ನಿಸುತ್ತಿದೆ. ಕ್ರಿಯಾಶೀಲರಾಗಿದ್ರೆ,ಅವರ ಪರ್ಮಾಮೆನ್ಸ್ ಬಗ್ಗೆ ರಿವಿವ್ಯೂ ಮಾಡೋದು ಸಹಜ. ಅದು ನಮ್ಮ ಪಕ್ಷದಲ್ಲಿ ನಡೆಯುತ್ತದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಟ್ರೆ ಸಚಿವ ಸ್ಥಾನ ಬಿಡೊದಾಗಿ ಕೆಲವರು ಹೇಳಿರೋ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಅದರ ಬಗ್ಗೆ ನನಗೇನು ಮಾಹಿತಿ ಇಲ್ಲ ಎಂದಿದ್ದಾರೆ. ಇದೇ ಕಲಬುರಗಿ ಯಲ್ಲಿ ಜೈಲು ಅಧೀಕ್ಷಿಗೆ ಬೆದರಿಕೆ ವಿಚಾರದ ಬಗ್ಗೆ ಗೃಹ ಇಲಾಖೆಯವರು ಇದರ ಗಮನ ಹರಿಸ್ತಾರೆ ಎಂದಿದ್ದಾರೆ.