ಮನೆ Latest News ನಂದಿನಿ ಉತ್ಪನ್ನಗಳ ಮಾರಾಟ ದೆಹಲಿಗೆ ವಿಸ್ತರಣೆ; ಇಂದಿನಿಂದ ರಾಷ್ಟ್ರರಾಜಧಾನಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ

ನಂದಿನಿ ಉತ್ಪನ್ನಗಳ ಮಾರಾಟ ದೆಹಲಿಗೆ ವಿಸ್ತರಣೆ; ಇಂದಿನಿಂದ ರಾಷ್ಟ್ರರಾಜಧಾನಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ

0

ನವದೆಹಲಿ: ನಂದಿನಿ ಉತ್ಪನ್ನಗಳ ಮಾರಾಟ ದೆಹಲಿಗೆ ವಿಸ್ತರಣೆಯಾಗಿದ್ದು, ಇಂದಿನಿಂದ ರಾಷ್ಟ್ರರಾಜಧಾನಿಯಲ್ಲಿ ನಂದಿನಿ ಉತ್ಪನ್ನಗಳ ಮಾರಾಟ ಆರಂಭವಾಗಿದೆ. ದೆಹಲಿಯಲ್ಲಿ ನಂದಿನಿ ಉತ್ಪನ್ನಗಳನ್ನು ಸಿಎಂ ಸಿದ್ದರಾಮಯ್ಯ ಬಿಡುಗಡೆ ಮಾಡಿದ್ರು. ದೆಹಲಿಯ ಅಶೋಕ ಹೊಟೇಲ್ ನಲ್ಲಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ  ಸಚಿವ ಭೈರತಿ ಸುರೇಶ್, ಸಚಿವ ವೆಂಕಟೇಶ್, ಚಲುವರಾಯಸ್ವಾಮಿ ಭಾಗಿಯಾಗಿದ್ದರು.

ಇನ್ನು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೆಎಂಎಫ್ ಅಧ್ಯಕ್ಷ ಭೀಮಾ ನಾಯಕ್ ದೆಹಲಿಯಲ್ಲಿ 3ರಿಂದ 4ಲಕ್ಷ ಲೀಟರ್ ಹಾಲನ್ನು ಮಾರಾಟ ಮಾಡಬೇಕು ಎಂದುಕೊಂಡಿದ್ದೇವೆ. ದೆಹಲಿಯಲ್ಲಿ 100% ಶುದ್ದ ಹಾಲು ಸಿಗಲಿದೆ. ಶುದ್ಧ ಹಸುವಿನ ಹಾಲನ್ನು ದೆಹಲಿ ಜನರಿಗೆ ನೀಡುತ್ತೇವೆ ಎಂದರು.

ಬಳಿಕ ನಂದಿನಿಯ ವಿವಿಧ  ಹಾಲಿನ ಉತ್ಪನ್ನಗಳನ್ನು ಬಿಡುಗಡೆ ಮಾಡಿ ಮಹಿಳೆಯರಿಗೆ ಸಿಎಂ ಸಿದ್ದರಾಮಯ್ಯ ಹಾಲು ವಿತರಣೆ ಮಾಡಿದರು.  ಬಳಿಕ ಜೈ ಕರ್ನಾಟಕ, ಜೈ ಜೈ ಕರ್ನಾಟಕ ಘೋಷಣೆ ಮೂಲಕ ಸಿಎಂ ಸಿದ್ದರಾಮಯ್ಯ ಭಾಷಣ ಆರಂಭಿಸಿದರು. ರೈತರ ಉಪ ಕಸುಬು ಪಶು ಸಂಗೋಪನೆ ಆಗಿದೆ. ಗುಜರಾತ್ ನಲ್ಲಿ ಕುರಿಯನ್ ಹಾಲು ಉತ್ಪಾದಕರ ಸಂಘಟನೆ ಮಾಡಿದ್ರು. ಹಾಗಾಗಿ, ಇಡೀ ದೇಶಾದ್ಯಂತ ಮೊದಲ ಸ್ಥಾನ ಗುಜರಾತ್ ಇದೆ. ಎರಡನೇ ಸ್ಥಾನದಲ್ಲಿ ಕರ್ನಾಟಕ ಇದೆ. ನಾನು ಕೂಡ ಪಶು ಸಂಗೋಪನೆ ಸಚಿವನಾಗಿ ಕೆಲಸ ಮಾಡಿದ್ದೆ. ಒಂದು ವರ್ಷ ಕಾಲ KMF ಅಧ್ಯಕ್ಷನಾಗಿದ್ದೆ. ಒಂದು ಕೋಟಿ ಕೆಜಿಯಷ್ಟು ಹಾಲು ಉತ್ಪಾದನೆ ಆಗ್ತಿದೆ. ಪ್ರತಿ ದಿನ 31 ಕೋಟಿ ರೂಪಾಯಿಗಳು ಪಟ್ಟಣದಿಂದ ಹಳ್ಳಿಗೆ ಹೋಗ್ತಿದೆ. ಸರ್ಕಾರದಿಂದ ಐದು ರೂಪಾಯಿ ಹೋಗುತ್ತದೆ. ಯಾವುದೇ ಮಧ್ಯವರ್ತಿಗಳಿಲ್ಲದೇ ನೇರವಾಗಿ ರೈತರಿಗೆ ಹಣ ಪಾವತಿಯಾಗುತ್ತದೆ. ಈ ನಿರ್ಧಾರವನ್ನು ಕಳೆದ ಬಾರಿ ರಾಮನಗರದಲ್ಲಿ ತೆಗೆದುಕೊಂಡಿದ್ದೆ. ದೇವೆತೆಗಳೇ ಸರಾಯಿ ಕುಡಿತಿದ್ರು. ಸುರಪಾನ ಅಂತಾ ಕರಿತಿದ್ರು. ಸುರ ಅಂದ್ರೆ ಏನು.. ದೇವತೆಗಳು. ಹಾಗಂತ ಸಾರಾಯಿ ಕುಡಿಯಿರಿ ಅಂತಾ ಹೇಳಲ್ಲ. ಹಾಲನ್ನು ಕುಡಿಯಿರಿ.. ಹಾಲು ಕಂಪ್ಲೀಟ್ ಫುಡ್. ಹಾಲನ್ನು ಹೆಚ್ಚು ಹೆಚ್ಚು ಉಪಯೋಗಿಸಬೇಕು. ಹಾಲನ್ನು ಮಾರುವುದು ಬಹುಮುಖ್ಯ ಎಂದರು.