ಮನೆ Latest News ಸ್ಯಾಂಡಲ್ ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿದ ನಟ; ಸಿನಿಮಾ ಹೀರೋನನ್ನು ಬಂಧಿಸಿದ ಪೊಲೀಸರು

ಸ್ಯಾಂಡಲ್ ವುಡ್ ನಿರ್ದೇಶಕನ ಮೇಲೆ ಗುಂಡು ಹಾರಿಸಿದ ನಟ; ಸಿನಿಮಾ ಹೀರೋನನ್ನು ಬಂಧಿಸಿದ ಪೊಲೀಸರು

0

ಬೆಂಗಳೂರು; ಸ್ಯಾಂಡಲ್ ವುಡ್  ನಿರ್ದೇಶಕನ ಮೇಲೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ  ಸಿನಿಮಾ ಹೀರೋನನ್ನು ಪೊಲೀಸರು ಬಂಧಿಸಿದ್ದಾರೆ. ತಾಂಡವ್ ರಾಮ್ ಬಂಧಿತ ನಟ. ಸಿನಿಮಾದ ನಿರ್ದೇಶಕ ಭರತ್ ಮೇಲೆ ತಾಂಡವ್ ರಾಮ್ ಗುಂಡು ಹಾರಿಸಿದ್ದಾರೆ. ನಿನ್ನೆ ಅಂದರೆ ನವೆಂಬರ್ 18 ರಂದು ಸೋಮವಾರ  ಸಂಜೆ 6.30ರ ಸುಮಾರಿಗೆ ಘಟನೆ ನಡೆದಿದೆ..

ದೇವನಾಂಪ್ರಿಯ ಎಂಬ ಸಿನಿಮಾ‌ ವಿಚಾರವಾಗಿ ಘಟನೆ  ನಡೆದಿದೆ. ದೇವನಾಂಪ್ರಿಯ ಎಂಬ ಸಿನಿಮಾ ಎರಡು ವರ್ಷಗಳಿಂದ ನಡಿತಿತ್ತು. ಸಿನಿಮಾಗೆ ನಿರ್ಮಾಪಕರು ಸಿಗದ ಹಿನ್ನೆಲೆ ಸಿನಿಮಾದ ನಾಯಕರಾಗಿದ್ದ ತಾಂಡವೇಶ್ವರ್ ಹಂತ ಹಂತವಾಗಿ ಸಿನಿಮಾಗಾಗಿ 6 ಲಕ್ಷ ಹೂಡಿಕೆ ಮಾಡಿದ್ದರು.  ಈಗ ಹಾಸನದ ಕುಮಾರಸ್ವಾಮಿ ಎಂಬವರು ಹಣ ಹೂಡಿಕೆ ಮಾಡಿದ್ದರು. ಇಷ್ಟಾಗಿಯೂ ನಿರ್ದೇಶಕ ಭರತ್ ಸಿನಿಮಾದ ಕೆಲಸ ನಿಲ್ಲಿಸಿದ್ದರು. ಸಿನಿಮಾ‌ ಶೂಟಿಂಗ್ ನಿಲ್ಲಿಸಿದ್ದರು.  ಸಿನಿಮಾ ಶೂಟಿಂಗ್ ಬೇಗ ಮುಗಿಸ್ತಿಲ್ಲ ಅಂತಾ ಆರೋಪ ಅವರ ವಿರುದ್ಧ ಕೇಳಿ ಬಂದಿತ್ತು.

ಇನ್ನು ಹಣ ಹೂಡಿಕೆ ಮಾಡಿದ್ರೂ  ಸಿನಿಮಾ ಪೂರ್ಣಗೊಳಿಸದ ಹಿನ್ನೆಲೆ ತಾನು ನೀಡಿದ್ದ ಆರು ಲಕ್ಷ ರೂಪಾಯಿ ಹಣವನ್ನು ವಾಪಸ್ ಕೊಡಿ ಎಂದು ತಾಂಡವೇಶ್ವರ್ ಕೇಳಿದ್ದಾರೆ. ಇದೇ ವಿಚಾರವಾಗಿ ನಿನ್ನೆ ಸಂಜೆ  6.30 ರ ವೇಳೆಗೆ ಮೂವರು ಮಾತುಕತೆ ಕೂತಿದ್ದರು. ಹೀರೋ ತಾಂಡವೇಶ್ವರ, ನಿರ್ದೇಶಕ ಭರತ್ ಸೇರಿ ಹಲವರು ಮಾತುಕತೆಗೆ ಕೂತಿದ್ರು. ಈ ವೇಳೆ ಹಣ ಕಾಸಿನ‌ ವಿಚಾರ ಮಾತನಾಡ್ತಿದ್ದಾಗ  ತಾಂಡವ್ ಅವರು ಫೈರಿಂಗ್ ಮಾಡಿದ್ದಾರೆ. ನಿರ್ದೇಶಕ ಭರತ್ ಅವರ ಕಡೆ ಗನ್ ನಿಂದ ತಾಂಡವ್ ಫೈಯರ್ ಮಾಡಿದ್ದಾರೆ. ಈ ವೇಳೆ ಗುಂಡಿನಿಂದ ನಿರ್ದೇಶಕ ಭರತ್ ಗುಂಡಿನಿಂದ ತಪ್ಪಿಸಿಕೊಂಡಿದ್ದಾರೆ. ಆ ಗುಂಡು ಕಚೇರಿಯ ಆರ್ ಸಿಸಿಗೆ ತಗುಲಿತ್ತು.  ನಂತರ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ಬಂದು ಭರತ್ ದೂರು ಕೊಟ್ಟಿದ್ದಾರೆ. ಈ ಸಂಬಂಧ BNS 109 ಹಾಗೂ ಆರ್ಮ್ಸ್ ಆ್ಯಕ್ಟ್ ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಲ್ಲದೇ  ಪ್ರಕರಣ ಸಂಬಂಧ ಆರೋಪಿ ತಾಂಡವೇಶ್ವರನನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.