ಮನೆ Latest News ದರ್ಶನ್ ಪರವಾಗಿ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಏನಿದೆ?

ದರ್ಶನ್ ಪರವಾಗಿ ವಕೀಲರು ಸಲ್ಲಿಸಿರುವ ಜಾಮೀನು ಅರ್ಜಿಯಲ್ಲಿ ಏನಿದೆ?

0

ಬೆಂಗಳೂರು :ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅವರು ಪರಪ್ಪನ ಅಗ್ರಹಾರ ಜೈಲು ಸೇರಿ ಇಂದಿಹಗೆ ಬರೋಬ್ಬರಿ 3 ತಿಂಗಳು. ಮೊನ್ನೆಯಷ್ಟೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಸುಮಾರು 3800 ಪುಟಗಳಿಗಿಂತ ಹೆಚ್ಚಿನ ಪುಟಗಳ ಚಾರ್ಚ್ ಶೀಟ್ ಸಲ್ಲಿಸಿದ್ದರು. ದರ್ಶನ್ ಜೈಲಿನಲ್ಲೇ ತನ್ನ ಪತ್ನಿ ಹಾಗೂ ಸಹೋದರನಿಂದ ಚಾರ್ಚ್ ಶೀಟ್ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಇದರ ಬೆನ್ನಲ್ಲೇ ನಿನ್ನೆ ದರ್ಶನ್ ಅವರ ಪರವಾಗಿ ಅವರ ವಕೀಲರು ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದರು.

ಹೌದು.. ರೇಣುಕಾಸ್ವಾಮಿ ಕೇಸ್ ನ ಎ2 ಆರೋಪಿಯಾಗಿರುವ ಡಿ ಬಾಸ್ ದರ್ಶನ್ ಅವರ ಪರವಾಗಿ ವಕೀಲರು ನಿನ್ನೆ ಬೆಂಗಳೂರಿನ 57ನೇ ಸಿಸಿಎಚ್ ನ್ಯಾಯಾಲಯಕ್ಕೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದರು.ನಿನ್ನೆ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ನಡೆಸಿದ ನ್ಯಾಯಾಧೀಶರಾದ ಜೈ ಶಂಕರ್ ಅವರು ಜಾಮೀನು ಅರ್ಜಿಯ ವಿಚಾರಣೆಯನ್ನು ಸೋಮವಾರ ಅಂದರೆ ಸೆಪ್ಟೆಂಬರ್ 23ಕ್ಕೆ ಮುಂದೂಡಿಕೆ ಮಾಡಿ ಆದೇಶ ನೀಡಿದ್ದಾರೆ.ಹಾಗಾಗಿ ನಾಳೆ ಏನ್ ತೀರ್ಪು ಬರುತ್ತೆ ಅನ್ನೋದು ಕುತೂಹಲ ಮೂಡಿಸಿದೆ.

ಇನ್ನು ಎ2 ಆರೋಪಿಯಾಗಿರುವ ದರ್ಶನ್ ಗೆ ಅಷ್ಟು ಬೇಗ ಬೇಲ್ ಸಿಗುವ ಸಾಧ್ಯತೆ ತುಂಬಾ ಕಮ್ಮಿ ಅಂತಾ ಹೇಳಲಾಗುತ್ತಿದೆ. ಹಾಗಾಗಿ ಯಾವ ವಿಚಾರವನ್ನು ಇಟ್ಟುಕೊಂಡು ದರ್ಶನ್ ಅವರ ಪರವಾಗಿ ವಕೀಲರು ಜಾಮೀನು ಅರ್ಜಿಯನ್ನು ಸಲ್ಲಿಸಿದ್ದಾರೆ. ಇನ್ನು ಯಾವ ವಿಚಾರವನ್ನು ಇಟ್ಟುಕೊಂಡು ವಕೀಲರು ಜಾಮೀನು ಅರ್ಜಿ ಸಲ್ಲಿಸಿದ್ದಾರೆ ಅನ್ನೋ  ಕುತೂಹಲ ಎಲ್ಲರಲ್ಲೂ ಇತ್ತು. ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.ದರ್ಶನ್ ಅವರು ಈ ಕೊಲೆಯಲ್ಲಿ ನೇರವಾಗಿ ಭಾಗಿಯಾಗಿಲ್ಲ ಅನ್ನೋ ಪಾಯಿಂಟ್ ಇಟ್ಟುಕೊಂಡು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದಲ್ಲಿ ಡಿ ಬಾಸ್ ದರ್ಶನ್ ಅವರು ನೇರವಾಗಿ ಭಾಗಿಯಾಗಿಲ್ಲ. ಅವರನ್ನು ಸುಮ್ಮನೆ ಸಿಲುಕಿಸಲಾಗಿದೆ. ರೇಣುಕಾಸ್ವಾಮಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡೋದಕ್ಕೆ ದರ್ಶನ್ ಹೇಳಿಲ್ಲ. ಹಾಗಾಗಿ ಅವರ ಪಾತ್ರ ಈ ಕೊಲೆಯಲ್ಲಿ ಇಲ್ಲ. ಮೂರನೇ ಆರೋಪಿ ಪವನ್ ಹಾಗೂ 10ನೇ ಆರೋಪಿ ವಿನಯ್ ಸೂಚನೆ ಮೇರೆಗೆ ರೇಣುಕಾಸ್ವಾವಿಯನ್ನು ಬೆಂಗಳೂರಿಗೆ ಕರೆ ತರಲಾಗಿದೆ ಎಂಬ ಅಂಶವನ್ನು ಇಟ್ಟುಕೊಂಡು ದರ್ಶನ್ ಅವರ ಪರವಾಗಿ ವಕೀಲರು ಅರ್ಜಿಯನ್ನು ಸಲ್ಲಿಸಿದ್ದಾರೆ. ನಾಳೆ ಮತ್ತೆ ಅರ್ಜಿಯ ವಿಚಾರಣೆ ನಡೆಯಲಿದೆ.

ಏನಿದು ಪ್ರಕರಣ?

ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಅಶ್ಲೀಲ ಮೆಸೇಜ್ ಮಾಡಿದಕ್ಕಾಗಿ ಚಿತ್ರದುರ್ಗ ಮೂಲದ ರೇಣುಕಾ ಸ್ವಾಮಿ ಎಂಬಾತನನ್ನು ದರ್ಶನ್ ಸೇರಿದಂತೆ 17 ಆರೋಪಿಗಳು ಕೊಲೆ ಮಾಡಿದ್ದರು.  ರೇಣುಕಾ ಸ್ವಾಮಿ ಪವಿತ್ರಗೌಡಗೆ ಫೋಟೋ ಕಳುಹಿಸಿ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಎನ್ನಲಾಗಿದೆ. ಈ ಹಿನ್ನೆಲೆ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿಸಿದ್ದಾರೆ ದೆ. ದರ್ಶನ್ ಅವರ ಆಪ್ತ ವಿನಯ್ ಅವರ ರಾಜರಾಜೇಶ್ವರಿ ನಗರದ ಪಟ್ಟಣಗೆರೆಯ ಕಾರ್ ಶೆಡ್ ಗೆ ಕರೆಸಿ ಹಲ್ಲೆ ಮಾಡಲಾಗಿತ್ತು. ದರ್ಶನ್ ಕೂಡ ಹಲ್ಲೆ ಮಾಡಿದ್ದು ಗಂಭೀರ ಗಾಯಗೊಂಡ ರೇಣುಕಾಸ್ವಾಮಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ಮೃತದೇಹವನ್ನು ಸುಮನಹಳ್ಳಿ ಬ್ರಿಡ್ಜ್ ಬಳಿ ಎಸೆಯಲಾಗಿತ್ತು.

ಪ್ರಕರಣ ಆರೋಪಿಯಾಗಿರುವ ಚಲನಚಿತ್ರ ನಟ ದರ್ಶನ್ ತೂಗುದೀಪ ಅವರನ್ನು ಬೆಂಗಳೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದರು ಮೈಸೂರಿನ ಕುವೆಂಪು ನಗರದ ಗೋಲ್ಡ್ ಜಿಮ್ ನಲ್ಲಿ ವರ್ಕೌಟ್ ಮುಗಿಸಿ ಹೊರ ಬಂದಿದ್ದ ದರ್ಶನ್ ರನ್ನು ನೇರವಾಗಿ ಪೊಲೀಸರು ಅರೆಸ್ಟ್ ಮಾಡಿದ್ದರು.ಅಂದು ಬೆಳಗ್ಗೆ 6.30 ಕ್ಕೆ ಜಿಮ್‌ಗೆ ತೆರಳಿದ್ದ ದರ್ಶನ್, 8.30ರ ವೇಳೆಗೆ ವರ್ಕೌಟ್ ಮುಗಿಸಿ ತಾವು ಉಳಿದುಕೊಂಡಿದ್ದ ಹೋಟೆಲ್ ಬಳಿ ಬರುತ್ತಿದ್ದಂತೆಯೇ ಪೊಲೀಸರು ಬಂಧಿಸಿದ್ದರು.

ಮೈಸೂರಿನ ಲಲಿತ್ ಮಹಲ್ ಹೋಟೆಲ್ ನಲ್ಲಿ ದರ್ಶನ್ ಅಭಿನಯದ ಡೇವಿಲ್ ಸಿನಿಮಾ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರತಂಡದ ವತಿಯಿಂದಲೇ ದರ್ಶನ್ ಗೆ ರ‌್ಯಾಡಿಸನ್ ಬ್ಲ್ಯೂ ಹೋಟೆಲ್ ನಲ್ಲಿ ಕೊಠಡಿ ಕಾಯ್ದಿರಿಸಲಾಗಿತ್ತು.‌ ಜೂನ್ 9 ರಿಂದಲೇ ದರ್ಶನ್ ಹೋಟೆಲ್‌ನಲ್ಲಿ ಉಳಿದುಕೊಂಡಿದ್ದರು.ತಮ್ಮ ಕೆಎ 01 ಎಂವೈ 7999 ನೋಂದಣಿ ಸಂಖ್ಯೆಯ ರೇಂಜ್ ರೋವರ್ ಡಿಫೆಂಡರ್ ಕಾರಿನಲ್ಲಿ ರ‌್ಯಾಡಿಸನ್ ಬ್ಲ್ಯೂ ಹೋಟೆಲ್ ಗೆ ದರ್ಶನ್ ಬಂದಿದ್ದು, ಕಾರು ಇನ್ನೂ ಹೋಟೆಲ್ ಪ್ರವೇಶದ್ವಾರದಲ್ಲಿಯೇ ನಿಲ್ಲಿಸಲ್ಪಟ್ಟಿತ್ತು. ಅರೆಸ್ಟ್ ಮಾಡಿದ ಬಳಿಕ ಪೊಲೀಸರು ತಮ್ಮ ಜೀಪ್ ನಲ್ಲೇ ದರ್ಶನ್ ರನ್ನು ಮೈಸೂರಿನಿಂದ ಬೆಂಗಳೂರಿಗೆ ಕರೆದೊಯ್ದಿದ್ದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಹಾಗಾಗಿ ಜೂನ್ 22 ರಿಂದ ಎಲ್ಲಾ ಆರೋಪಿಗಳು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು..ಆದರೆ ಅಲ್ಲಿ ದರ್ಶನ್ ರಾಜಾತಿಥ್ಯ ನೀಡಲಾಗುತ್ತಿದೆ ಅನ್ನೋ ವಿಚಾರ ಬಯಲಾಗುತ್ತಿದ್ದಂತೆ ಅವರನ್ನು ಆಗಸ್ಟ್ 29 ರಂದು ಬಳ್ಳಾರಿ ಜೈಲಿಗೆ ಶಿಫ್ಟ್ ಮಾಡಲಾಗಿತ್ತು. ಅದರಂತೆ ಡಿ ಬಾಸ್ ದರ್ಶನ್ ಬಳ್ಳಾರಿ ಜೈಲಿನಲ್ಲಿದ್ದಾರೆ. ಕೆಲವು ದಿನಗಳ ಹಿಂದೆ ಪೊಲೀಸರು 3991 ಪುಟಗಳ ಚಾರ್ಜ್ ಶೀಟ್ ನ್ನು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದರು. ಚಾರ್ಜ್ ಶೀಟ್ ಸಲ್ಲಿಕೆಯಾದ ಬೆನ್ನಲ್ಲೇ ದರ್ಶನ್ ಅವರ ಪರವಾಗಿ ಅವರ ವಕೀಲರು ಕೋರ್ಟ್ ಗೆ ಜಾಮೀನಿಗಾಗಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಆದರೆ ಅರ್ಜಿಯ ವಿಚಾರಣೆ ಸೋಮವಾರ ಅಂದರೆ ಸೆಪ್ಟೆಂಬರ್ 23ಕ್ಕೆ ಮುಂದೂಡಿಕೆಯಾಗಿದೆ.