ಮನೆ ಕ್ರೀಡೆ ವಿನೇಶ್ ಪೋಗಟ್ ಕೊರಳೇರುತ್ತಾ ಬೆಳ್ಳಿ ಪದಕ; ನಾಳೆ ಬರಲಿದೆ ತೀರ್ಪು

ವಿನೇಶ್ ಪೋಗಟ್ ಕೊರಳೇರುತ್ತಾ ಬೆಳ್ಳಿ ಪದಕ; ನಾಳೆ ಬರಲಿದೆ ತೀರ್ಪು

0

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಜಸ್ಟ್ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದಲ್ಲಿ ಜಸ್ಟ್ 100 ಗ್ರಾಂ ತೂಕ ಹೆಚ್ಚಾಗಿದ್ದಕ್ಕೆ ಪೈನಲ್ ನಿಂದ ವಿನೇಶ್ ಪೋಗಟ್ ಅವರನ್ನು ಅನರ್ಹಗೊಳಿಸಲಾಗಿತ್ತು. ಇದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿತ್ತು.. ಇಡೀ ದೇಶವೇ ವಿನೇಶ್ ಪೋಗಟ್ ಬೆಂಬಲಕ್ಕೆ ನಿಂತಿತ್ತು. ಅಷ್ಟರಲ್ಲೇ ವಿನೇಶ್ ನಿವೃತ್ತಿ ಘೋಷಣೆ ಮಾಡಿದ್ದರು.

ಇದರ ಮಧ್ಯೆ ವಿನೇಶ್ ಫೋಗಟ್ ಅವರು ಬೆಳ್ಳಿ ಪದಕಕ್ಕಾಗಿ ಮನವಿ ಮಾಡಿದ್ದರು.  ಕೋರ್ಟ್ ಆಫ್ ಆರ್ಬಿಟ್ರೇಶನ್ ಫಾರ್ ಸ್ಪೋರ್ಟ್ (CAS)ನ  ತಾತ್ಕಾಲಿಕ ವಿಭಾಗಕ್ಕೆ ಮನವಿಯನ್ನು ಸಲ್ಲಿಸಿದ್ದರು. ಈ ಮನವಿಗೆ ಸಂಬಂಧಪಟ್ಟಂತೆ ಮಂಗಳವಾರ ತೀರ್ಪು ಪ್ರಕಟಸಲಿದೆ.

ಈಗಾಗಲೇ ಪ್ಯಾರಿಸ್ ಒಲಿಂಪಿಕ್ಸ್ ಮುಕ್ತಾಯವಾಗಿದೆ. ನಾಳೆ ವಿನೇಶ್ ಪೋಗಟ್ ಅವರ ಪದಕಕ್ಕೆ ಸಂಬಂಧಪಟ್ಟಂತೆ ತೀರ್ಪು ಬರಲಿದೆ. ಹಾಗಾಗಿ ನಾಳೆ ಏನಾಗುತ್ತೆ ಅನ್ನೋ ಎಲ್ಲರ ಚಿತ್ತ ನಾಳಿನ ತೀರ್ಪಿನ ಕಡೆಗೆ ನೆಟ್ಟಿದೆ. ವಿನೇಶ್ ಪೋಗಟ್ ಗೆ ಬೆಳ್ಳಿ ಪದಕ ದೊರಕಲಿ ಅಂತಾ ಕ್ರೀಡಾಭಿಮಾನಿಗಳು ಹಾರೈಸುತ್ತಿದ್ದಾರೆ.

ಕುಸ್ತಿ ಪಂದ್ಯ ನನ್ನ ಎದುರು ಗೆದ್ದಿದೆ, ನಾನು ಸೋತಿದ್ದೇನೆ, ಕ್ಷಮಿಸಿ:  ಭಾವುಕ ಪೋಸ್ಟ್ ನೊಂದಿಗೆ ಕುಸ್ತಿಗೆ ವಿದಾಯ ಘೋಷಿಸಿದ ವಿನೇಶ್ ಪೋಗಟ್

ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ  ವಿನೇಶ್ ಪೋಗಟ್ ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಜಾಸ್ತಿ ಇದ್ದಾರೆ ಅಂತಾ 50 ಕೆಜಿ ಮಹಿಳೆಯರ ಕುಸ್ತಿ ವಿಭಾಗದ ಫೈನಲ್ ಪಂದ್ಯದಿಂದ ಅವರನ್ನು ಒಲಿಂಪಿಕ್ಸ್ ಸಂಘಟಕರು ಅನರ್ಹಗೊಳಿಸಿದ್ರು. ಇದು ಕೋಟ್ಯಂತರ ಭಾರತೀಯರಿಗೆ ಬಹುದೊಡ್ಡ ಆಘಾತ. ಈ ಆಘಾತದಿಂದ ಹೊರ ಬರುವ ಮೊದಲೇ ಇದೀಗ ಮತ್ತೊಂದು ಎಲ್ಲದಕ್ಕಿಂತ ದೊಡ್ಡ ಆಘಾತ ಭಾರತೀಯರಿಗೆ ಎದುರಾಗಿದೆ.

ಹೌದು.. ಒಲಿಂಪಿಕ್ಸ್ ನಲ್ಲಿ ಕುಸ್ತಿ ಪಂದ್ಯದ ಫೈನಲ್ ನಿಂದ ಅನರ್ಹಗೊಂಡ ಬೆನ್ನಲ್ಲೇ ಬದುಕಿನ ಕಠಿಣ ನಿರ್ಧಾರವೊಂದನ್ನು ವಿನೇಶ್ ಪೋಗಟ್ ತೆಗೆದುಕೊಂಡಿದ್ದಾರೆ. ವಿನೇಶ್ ಪೋಗಟ್ ಕುಸ್ತಿ ಪಂದ್ಯಕ್ಕೆ ವಿದಾಯವನ್ನು ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಒಂದು ಭಾವುಕರಾಗಿ ಹಾಕಿದ್ದಾರೆ. ಆ ಪೋಸ್ಟ್ ನ ಸಾಲುಗಳು ಇಂತಿವೆ. ಅಮ್ಮಾ..ನನ್ನ ವಿರುದ್ಧ ಕುಸ್ತಿ ಪಂದ್ಯ ಗೆದ್ದಿದೆ. ಆದರೆ ನಾನು ಸೋತಿದ್ದೇನೆ.ನನ್ನ ಕ್ಷಮಿಸು. ನನ್ನ ಕನಸು, ನನ್ನ ಧೈರ್ಯ ಎಲ್ಲವೂ ಕುಸಿದಿದೆ. ನನ್ನಲ್ಲಿ ಈಗ ಯಾವುದೇ ಶಕ್ತಿ ಇಲ್ಲ. ಗುಡೈ ಬೈ ಕುಸ್ತಿ 2001-2024 ಎಂದು ತೀರಾ ಭಾವುಕರಾಗಿ ಪೋಸ್ಟ್ ಹಾಕಿದ್ದಾರೆ. ವಿನೇಶ್ ಪೋಸ್ಟ್ ನೋಡಿ ಕೋಟ್ಯಂತರ ಕ್ರೀಡಾಪ್ರೇಮಿಗಳು ಕಂಬನಿ ಮಿಡಿದಿದ್ದಾರೆ. ನಿರ್ಧಾರ ಬದಲಿಸಿ ಎಂದು ಆಗ್ರಹಿಸಿದ್ದಾರೆ. ಆಕೆಗೆ ಬೆಂಬಲವಾಗಿ ನಿಂತಿದ್ದಾರೆ.