ಮನೆ Latest News ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇಂದಿನಿಂದ ಆರಂಭ

ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಇಂದಿನಿಂದ ಆರಂಭ

0

ಬೆಂಗಳೂರು; ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಅಭಿನಯದ ಟಾಕ್ಸಿಕ್ ಸಿನಿಮಾಗಾಗಿ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ. ಈಗಾಗಲೇ ಈ ಸಿನಿಮಾದ ಯಶ್ ಅವರ ಲುಕ್ ಹಾಗೂ ಹೇರ್ ಸ್ಟೈಲ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಸಿನಿಮಾದ  ಶೂಟಿಂಗ್ ಇಂದಿನಿಂದ ಆರಂಭವಾಗಿದೆ ಎಂಬ ಶುಭ ಸುದ್ದಿಯನ್ನು ನಟ ಯಶ್ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿರುವ HMT ಕಾರ್ಖಾನೆ ಬಳಿ ಹಾಕಲಾಗಿರುವ ಅದ್ಧೂರಿ ಸೆಟ್​ನಲ್ಲಿ ಟಾಕ್ಕ್ ಸಿನಿಮಾದ ಮುಹೂರ್ತ ಅತ್ಯಂತ ಸರಳವಾಗಿ ನೆರವೇರಿದೆ. ಲೈಟ್ ಬಾಯ್ ನಿಂದ ಸಿನಿಮಾಗೆ ಕ್ಲ್ಯಾಪ್ ಮಾಡಿಸಲಾಯಿತು. ಇನ್ನು ಕಾರ್ಯಕ್ರಮಕ್ಕೆ ಯಾವೊಬ್ಬ ಸೆಲೆಬ್ರೆಟಿಯನ್ನೂ ಕೂಡ ಆಹ್ವಾನಿಸಿರಲಿಲ್ಲ. ಈ ಕಾರ್ಯಕ್ರಮದಲ್ಲಿ ಸಿನಿಮಾದ ನಿರ್ದೇಶಕಿ ಗೀತು ಮೋಹನ್ ದಾಸ್, ಅವರ ಪತಿ, ನಿರ್ಮಾಪಕ ವೆಂಕಟ್ ಹಾಗೂ ಸಿನಿಮಾ ತಂಡದವರು ಉಪಸ್ಥಿತರಿದ್ದರು. ಇನ್ನು ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ನಿರ್ಮಾಣ ಮಾಡುತ್ತಿದೆ. ಬಾಲಿವುಡ್ ತಾರೆ ಕಿಯಾರಾ ಅಡ್ವಾಣಿ, ನಟಿ ನಯನತಾರಾ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ. 2026 ರ ಆರಂಭದಲ್ಲಿ ಮೂವಿ ರಿಲೀಸ್ ಆಗುವ ಸಾಧ್ಯತೆಯಿದೆ ಇದೆ ಎನ್ನಲಾಗಿದೆ.

ವಿವಾದಕ್ಕೆ ಕಾರಣವಾದ ಟಾಕ್ಸಿಕ್ ಸಿನಿಮಾದ ಸೆಟ್

ಇನ್ನು ಸದ್ಯ ಟಾಕ್ಸಿಕ್ ಸಿನಿಮಾದ ಶೂಟಿಂಗ್ ಗಾಗಿ ಬೆಂಗಳೂರಿನ ನೆಲಮಂಗಲ ರಸ್ತೆಯಲ್ಲಿರುವ HMT ಕಾರ್ಖಾನೆ ಬಳಿ ಹಾಕಲಾಗಿರುವ ಅದ್ಧೂರಿ ಸೆಟ್​ ವಿವಾದಕ್ಕೆ ಕಾರಣವಾಗಿದೆ. ಸಿನಿಮಾ ಶೂಟಿಂಗ್ ಗಾಗಿ ಅರಣ್ಯ ಭೂಮಿಯನ್ನು ಅಕ್ರಮವಾಗಿ ಬಳಕೆ ಮಾಡಲಾಗಿದೆ ಎಂದು ವಕೀಲ ಬಾಲಾಜಿ ನಾಯ್ಡು ಎಂಬವರು ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಭೂಮಿಯಲ್ಲಿ ಅಕ್ರಮವಾಗಿ ಹಾಕಿರುವ ಸೆಟ್ ನ್ನು ತೆರವು ಮಾಡಬೇಕು ಎಂದು ಆಗ್ರಹಿಸಿದ್ದಾರೆ.ಅರ್ಜಿಯನ್ನು ವಿಚಾರಣೆಗೆ ಅರ್ಹ ಎಂದು ಪರಿಗಣಿಸಿರುವ ಹೈಕೋರ್ಟ್ ಸಿನಿಮಾ ನಿರ್ಮಾಣ ಸಂಸ್ಥೆಯಾಗಿರುವ ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಎಚ್​ಎಂಟಿ ಸಂಸ್ಥೆಗೂ ಕೂಡ ನೋಟಿಸ್ ಕೊಟ್ಟಿದೆ. ಹಾಗಾಗಿ ಸಿನಿಮಾ ಮುಹೂರ್ತ ನಡೆಯುವ ಮುನ್ನವೇ ಟಾಕ್ಸಿಕ್ ಸಿನಿಮಾಗೆ ವಿವಾಗ ಬೆನ್ನೇರಿದೆ. ಇದಕ್ಕೆ ಯಾವ ರೀತಿ ಪರಿಹಾರ ಸಿಗುತ್ತೆ ಅನ್ನೋದು  ಕುತೂಹಲಕ್ಕೆ ಎಡೆ ಮಾಡಿ ಕೊಟ್ಟಿದೆ.

ಟಾಕ್ಸಿಕ್‌ ಸಿನಿಮಾದ ಶೂಟಿಂಗ್ ಆರಂಭಕ್ಕೂ ಮುನ್ನ ರಾಕಿಂಗ್ ಸ್ಟಾರ್ ಟೆಂಪಲ್ ರನ್

ಬೆಳ್ತಂಗಡಿ; ರಾಕಿಂಗ್ ಸ್ಟಾರ್ ಯ್ ಅಭಿನಯ  ಬಹುನಿರೀಕ್ಷಿತ ಸಿನಿಮಾ ಟಾಕ್ಸಿಕ್ ನ ಶೂಟಿಂಗ್ ಇದೇ ತಿಂಗಳ 8 ರಂದು ಆರಂಭಗೊಳ್ಳಲಿದೆ. ಈ ಹಿನ್ನೆಲೆ ರಾಕಿಂಗ್ ಸ್ಟಾರ್ ಯಶ್ ಕುಟುಂಬ ಸಮೇತ ಟೆಂಪಲ್ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ವಿಭಿನ್ನ ಗೆಟಪ್ ನಲ್ಲಿ ಯಶ್ ಕಾಣಿಸಿಕೊಳ್ಳಳಿದ್ದಾರೆ. ಈಗಾಗಲೇ ಅವರ ಹೆರ್ ಸ್ಟೈಲ್ ರಿವೀಲ್ ಆಗಿದೆ. ಇದರ ಮಧ್ಯೆ ಸಿನಿಮಾ ಯಶಸ್ಸಿಗಾಗಿ ದೇವರ ಮೊರೆ ಹೋಗಿದ್ದಾರೆ.

ಹೌದು.. ಇವತ್ತು ನಟ ಯಶ್ ಪತ್ನಿ ರಾಧಿಕಾ, ಮಗಳು ಐರಾ ಯಶ್ , ಪುತ್ರ ಯಥರ್ವ್ ಯಶ್ ಜೊತೆಗೂಡಿ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿರುವ ಸುರ್ಯ ಸದಾಶಿವ ರುದ್ರ ದೇವಸ್ಥಾನಕ್ಕೆ ಭೇಟಿ ಕೊಟ್ಟು ವಿಶೇಷ ಪೂಜೆಯನ್ನು ಸಲ್ಲಿಸಿದ್ದಾರೆ. ಇನ್ನು ಇದೇ ವೇಳೆ ಯಶ್ ಹಾಗೂ ರಾಧಿಕಾ ಮಣ್ಣಿನ ಹರಕೆ ತೀರಿಸಿದ್ದಾರೆ. ಸುರ್ಯ ದೇವಸ್ಥಾನ ಮಣ್ಣಿನ ಹರಕೆಗೆ ಹೆಸರುವಾಸಿಯಾಗಿದೆ.ಅತ್ಯಂತ ಕಾರ್ಣಿಕದ ದೇವಸ್ಥಾನಗಳಲ್ಲಿ ಒಂದಾಗಿದೆ. ಯಶ್ ದಂಪತಿ ಕೂಡ ಮಣ್ಣಿನ ರೀಲ್ಸ್ ಹಾಗೂ ಕುಟುಂಬದ ಆರೋಗ್ಯಕ್ಕೆ ಸಂಬಂಧಿಸಿದಂತೆ ಇಲ್ಲಿನ ಮಣ್ಣಿನ ಹರಕೆ ಮಂಡೆ ಬಳಿ ತೆರಳಿ ಹರಕೆ ತೀರಿಸಿದ್ದಾರೆ.

ಇನ್ನು ಇದೇ ವೇಳೆ ದೇವಾಲಯದ ಆಡಳಿತ ಮಂಡಳಿ ವತಿಯಿಂದ ನಟ ಯಶ್ ದಂಪತಿಯನ್ನು ಸನ್ಮಾನಿಸಲಾಯಿತು. ದೇವಸ್ಥಾನ ಭೇಟಿ ವೇಳೆ ಯಶ್ ಅವರಿಗೆ ಟಾಕ್ಸಿಕ್‌ ಸಿನಿಮಾದ ನಿರ್ದೇಶಕ ವೆಂಕಟ್ ಜೊತೆಯಾಗಿದ್ರು.

ಕೆಜಿಎಫ್ ಬಳಿಕ ಯಶ್ ಅಭಿನಯಿಸುತ್ತಿರುವ ಬಹು ನಿರೀಕ್ಷಿತ ಸಿನಿಮಾ ಟಾಕ್ಸಿಕ್ ಆಗಿದ್ದು, ಸಿನಿಮಾದ ಬಗ್ಗೆ ಸಿನಿ ರಸಿಕರಲ್ಲಿ ಬೆಟ್ಟದಷ್ಟು ನಿರೀಕ್ಷೆಗಳಿವೆ. ಇದೇ ತಿಂಗಳ 8 (ಆಗಸ್ಟ್ 8) ರಂದು ಸಿನಿಮಾದ ಚಿತ್ರೀಕರಣ ಆರಂಭಗೊಳ್ಳಲಿದೆ.  ಬೆಂಗಳೂರಿನ HMT ಫ್ಯಾಕ್ಟರಿಯಲ್ಲಿ ಮೊದಲ ಹಂತದ ಶೂಟಿಂಗ್ ಗೆ ಚಾಲನೆ ಸಿಗಲಿದೆ.ಅದಕ್ಕಾಗಿ ಅಲ್ಲಿ ಈಗಾಗಲೇ  ಅದ್ದೂರಿ  ಸೆಟ್ ಹಾಕಲಾಗಿದೆ. ಈಗಾಗಲೇ ಯಶ್ ಅವರ ನ್ಯೂ ಲುಕ್ ಗೆ ಯಶ್ ಅಭಿಮಾನಿಗಳು ಫಿದಾ ಆಗಿದ್ದು ಸಿನಿಮಾದ ಬಗ್ಗೆ ಕೂಡ ಅಷ್ಟೇ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ. ಸಿನಿಮಾ ರಿಲೀಸ್ ಗಾಗಿ ಕಾಯುತ್ತಿದ್ದಾರೆ.

ಧರ್ಮಸ್ಥಳ ಹಾಗೂ ಕುಕ್ಕೆ ಸುಬ್ರಮಣ್ಯ ದೇಗುಲಕ್ಕೂ ಯಶ್ ಹಾಗೂ ರಾಧಿಕಾ ಭೇಟಿ

ಇನ್ನು ಸುರ್ಯ ದೇವಸ್ಥಾನದಿಂದ ನೇರವಾಗಿ ಯಶ್ ಅವರು ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿದರು. ಅಲ್ಲಿ ಮಂಜುನಾಥನ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಅಲ್ಲಿ ಊಟ ಮಾಡಿ ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಭೇಟಿ ನೀಡಿ ಅಲ್ಲಿ ವಿಶೇಷ ಪೂಜೆ ನೆರವೇರಿಸಿದರು.