ಮನೆ Latest News ವಿನೇಶ್ ಪೋಗಟ್ ಭೇಟಿಯಾಗಿ ಧೈರ್ಯ ತುಂಬಿದ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪಿ ಟಿ ಉಷಾ

ವಿನೇಶ್ ಪೋಗಟ್ ಭೇಟಿಯಾಗಿ ಧೈರ್ಯ ತುಂಬಿದ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪಿ ಟಿ ಉಷಾ

0

ಪ್ಯಾರಿಸ್  ಒಲಿಂಪಿಕ್ಸ್ ನಲ್ಲಿ ಮಹಿಳಾ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡಿ ಭಾರತೀಯರಲ್ಲಿ ಚಿನ್ನದ ಪದಕದ ಆಸೆ ಬಿತ್ತಿದ್ದ ವಿನೇಶ್ ಪೋಗಟ್ ಅವರು ಫೈನಲ್ ನ ಮೊದಲ ಸುತ್ತಿನಲ್ಲಿ ಕೇವಲ 100 ಗ್ರಾಂ ತೂಕ ಜಾಸ್ತಿಯಿದ್ದಾರೆ ಅನ್ನೋ ಕಾರಣಕ್ಕೆ ಅನರ್ಹಗೊಂಡಿದ್ದಾರೆ. ಕೋಟ್ಯಂತರ ಭಾರತೀಯರಿಗೆ ಇದು ಆಘಾತಕಾರಿ ಸುದ್ದಿ.

ಇನ್ನು ಫೈನಲ್ ನಿಂದ ಅನರ್ಹಗೊಳ್ಳುತ್ತಲೇ ವಿನೇಶ್ ಪೋಗಟ್ ಆರೋಗ್ಯದಲ್ಲಿ ಏರುಪೇರಾಗಿದೆ. ನಿನ್ನೆ ರಾತ್ರಿಯಿಡಿ ತೂಕ ಇಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನಗಳನ್ನು ವಿನೇಶ್ ಮಾಡುತ್ತಲೇ ಇದ್ದರು. ಆದರೆ ದೇವರು ಆಕೆಯ ಕೈ ಹಿಡಿಯಲಿಲ್ಲ.  ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಜಾಸ್ತಿ ಇದ್ದದ್ದರಿಂದ ಅವರು ಅನರ್ಹಗೊಂಡಿದ್ದಾರೆ. ಇನ್ನು ನಿನ್ನೆ ರಾತ್ರಿಯಿಡಿ ತೂಕ ಇಳಿಸಲು ನಾನಾ ಪ್ರಯತ್ನಗಳನ್ನು ಮಾಡಿದ ಪರಿಣಾಮ ಇಂದು ವಿನೇಶ್ ಆರೋಗ್ಯದಲ್ಲಿ ಏರುಪೇರು ಉಂಟಾಗಿತ್ತು. ಡಿಹೈಡ್ರೇಟ್ ಆಗಿ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಹಾಗಾಗಿ ಆಕೆಯನ್ನು ಪ್ಯಾರಿಸ್ ಒಲಿಂಪಿಕ್ಸ್  ಕ್ರೀಡಾ ಗ್ರಾಮದಲ್ಲಿರುವ ಕ್ಲಿನಿಕ್ ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪಿ ಟಿ ಉಷಾ ವಿನೇಶ್ ಅವರನ್ನು ಭೇಟಿಯಾಗಿ ಅವರ ಆರೋಗ್ಯ ವಿಚಾರಿಸಿದ್ದಾರೆ. ಅಲ್ಲದೇ ಸದಾ ಅವರ ಜೊತೆಯಿರೋದಾಗಿ ತಿಳಿಸಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಅಧ್ಯಕ್ಷೆ ಪಿ ಟಿ ಉಷಾ ಪೋಗಟ್ ಗೆ ಆದ ಅನ್ಯಾಯದ ಬಗ್ಗೆ ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್ ಪ್ರಶ್ನೆ ಮಾಡಿದೆ. ವಿನೇಶ್ ಅವರ ಆರೋಗ್ಯವನ್ನು ವಿಚಾರಿಸಿದ್ದೇನೆ ಅವರು ಸದ್ಯ ಆರೋಗ್ಯವಾಗಿದ್ದಾರೆ.ದೈಹಿಕವಾಗಿ ಅವರು ಚೆನ್ನಾಗಿದ್ದಾರೆ. ಆದರೆ ಮಾನಸಿಕವಾಗಿ ಅವರು ಕುಗ್ಗಿದ್ದಾರೆ ಅಂತಾ ತಿಳಿಸಿದ್ರು. ಭಾರತೀಯ ಒಲಿಂಪಿಕ್ಸ್ ಅಸೋಸಿಯೇಶನ್, ಭಾರತ ಸರ್ಕಾರ ಹಾಗೂ ಇಡೀ ದೇಶ ಅವರಿಗೆ ಬೆಂಬಲವಾಗಿ ನಿಂತಿದೆ. ಮುಂದೆಯೂ ನಿಲ್ಲುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.

ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತೀಯರ ಕನಸು ಭಗ್ನ;ಪ್ಯಾರಿಸ್ ಒಲಿಂಪಿಕ್ಸ್ ಫಿನಾಲೆಯಿಂದ ವಿನೇಶ್ ಪೋಗಟ್ ಅನರ್ಹ

ಪ್ಯಾರೀಸ್; ಸಾಕಷ್ಟು ಅವಮಾನ, ಕಿರುಕುಳ ಎಲ್ಲವನ್ನು ಅನುಭವಿಸಿ ನೋವುಂಡ ಜೀವ ಕುಸ್ತಿಪಟು ವಿನೇಶ್ ಪೋಗಟ್.ವಿನೇಶ್ ಪೋಗಟ್ ಪ್ಯಾರೀಸ್ ಒಲಿಂಪಿಕ್ಸ್ ನಲ್ಲಿ ಮಹಿಳೆಯರ 50 ಕೆಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶ ಮಾಡುತ್ತಿದ್ದಂತೆ ಇಡೀ ಭಾರತೀಯರು ನಮ್ಮ ಮಗಳೇ ಫೈನಲ್  ಪ್ರವೇಶ ಮಾಡಿದ್ದಾಳೆ ಅನ್ನುವಷ್ಟರ ಮಟ್ಟಿಗೆ ಸಂಭ್ರಮಿಸಿದ್ರು. ಭಾರತಕ್ಕೆ ಬಂಗಾರದ ಪದಕ ಫಿಕ್ಸ್ ಅಂತಾ ಖುಷಿ ಪಟ್ರು. ಆದರೆ ಆ ಖುಷಿ ಸಂಭ್ರಮ ಕೆಲವೇ ಕೆಲವು ಗಂಟೆಗಳಲ್ಲಿ ಮಣ್ಣು ಪಾಲಾಯ್ತು.

ಹೌದು.. ವಿನೇಶ್ ಪೋಗಟ್ ಭಾರತಕ್ಕೆ ಬಂಗಾರದ ಪದಕ ತರ್ತಾರೆ ಅಂತಾ ಕಾಯುತ್ತಿದ್ದ ಮಂದಿಗೆ ಶಾಕ್ ಎದುರಾಗಿತ್ತು, ವಿನೇಶ್ ಪೋಗಟ್ ಕುಸ್ತಿ ಪಂದ್ಯದ ಫಿನಾಲೆಯಿಂದ ಹೊರ ಬಿದ್ದಿದ್ದಾರೆ ಅನ್ನೋ ಅಘಾತಕಾರಿ ಸುದ್ದಿ ಹೊರ ಬಿದ್ದಿತ್ತು. ನಿಗದಿತ ತೂಕಕ್ಕಿಂತ 100 ಗ್ರಾಂ ತೂಕ ಹೆಚ್ಚಾಗಿದ್ದರಿಂದ ವಿನೇಶ್ ಪೋಗಟ್ ಅವರು ಫೈನಲ್ ನಿಂದ ಹೊರ ಬಿದ್ದಿದ್ದಾರೆ. ಇನ್ನು ರಾತ್ರಿಯೇ ತೂಕ ಕೊಂಚ ಜಾಸ್ತಿ ಇದೆ ಎಂಬ ಬಗ್ಗೆ ಅರಿವಿದ್ದ ವಿನೇಶ್  ಆ ತೂಕವನ್ನು ಸರಿದೂಗಿಸಲು ರಾತ್ರಿಯಿಡಿ ಜಿಮ್ ನಲ್ಲಿ ವರ್ಕೌಟ್ ಮಾಡಿದ್ದಾರೆ. ಸೈಕ್ಲಿಂಗ್,ಸ್ಕಿಪ್ಪಿಂಗ್ ಮಾಡಿದ್ದಾರೆ. ಏನೆಲ್ಲಾ ಮಾಡಬಹುದೋ ಅದೆಲ್ಲಾ ಪ್ರಯತ್ನವನ್ನು ಮಾಡಿದ್ದಾರೆ. ಆದರೂ ಯಾವ ಪ್ರಯೋಜನ ಆಗಿಲ್ಲ.ಹಾಗಾಗಿ ಫೈನಲ್‌ ಸುತ್ತು ಎಂಟ್ರಿಯಾಗುವ ಮುನ್ನವೇ ವಿನೇಶ್ ಪೋಗಟ್ ಅನರ್ಹರಾಗಿದ್ದಾರೆ,

ಇನ್ನು ಈ ಕಹಿ ಸುದ್ದಿ ಹೊರ ಬೀಳುತ್ತಿದ್ದಂತೆ ಭಾರತೀಯ ಒಲಿಂಪಿಕ್ಸ್ ಘಟನೆ ಬಗ್ಗೆ ಬೇಸರ ಹೊರ ಹಾಕಿದೆ. ಅಲ್ಲದೇ ಅವರ ಖಾಸಗೀತನವನ್ನು ಬೆಂಬಲಿಸುತ್ತೇವೆ ಎಂದಿದೆ. ಅಲ್ಲವೇ ಕೆಲವೇ ಕೆಲವು ಅಂತರದಲ್ಲಿ ಅವಕಾಶ ತಪ್ಪಿರುವ ಬಗ್ಗೆ ದೂರು ನೀಡೋದಾಗಿ ಹೇಳಿದೆ.ಇನ್ನು ಸಾಕಷ್ಟು ಜನ ಈ ಬಗ್ಗೆ ಬೇಸರ ಹಾಗೂ ಆಕ್ರೋಶ ಹೊರ ಹಾಕಿದ್ದಾರೆ. ವಿನೇಶ್ ಪೋಗಟ್ ಗೆ ಅನ್ಯಾಯ ಮಾಡಲಾಗಿದೆ ಎಂದು ಆರೋಪ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ವಿನೇಶ್ ಪೋಗಟ್ ಪರವಾಗಿ ಸಾಕಷ್ಟು ಪೋಸ್ಟ್ ಗಳು ವೈರಲ್ ಆಗುತ್ತಿವೆ. ಅಲ್ಲದೇ ಈ ರೀತಿ ಯಾವ ಕ್ರೀಡಾಪಟು ಕೂಡ ಆಗಬಾರದು ಅನ್ನೋ ಮಾತುಗಳು ಕೂಡ ಸದ್ಯ ಕೇಳಿ ಬರುತ್ತಿದೆ.

ವಿನೇಶ್ ಪೋಗಟ್ ಗೆ ಅವಕಾಶ ಕೈ ತಪ್ಪುತ್ತಿದ್ದಂತೆ ಅವರಿಗೆ ಬೆಂಬಲ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್ ನಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ. ವಿನೇಶ್ ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿಯಾಗಿದ್ದೀರಿ. ನಿಮ್ಮ ಇಂದಿನ ಹಿನ್ನಡೆ ನೋವು ತಂದಿದೆ. ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು ಎಂದು ನಾನು ಬಯಸುತ್ತೇನೆ. ಅಲ್ಲದೇ ಇದೆಲ್ಲವನ್ನು ನೀವು ಗಟ್ಟಿಯಾಗಿ ಎದುರಿಸುತ್ತೀರಿ ಎಂದು ನಾನು ಭಾವಿಸುತತೇನೆ. ಯಾಕಂದ್ರೆ ಸವಾಲುಗಳನ್ನು ಎದುರಿಸುವುದು ಯಾವಾಗಲೂ ನಿಮ್ಮ ಸ್ವಭಾವವಾಗಿದೆ.ಇನ್ನಷ್ಟು ಬಲಿಷ್ಠವಾಗಿ ನೀವು ಹಿಂತಿರುಗಿ. ನಾವೆಲ್ಲ ನಿಮಗೆ ಬಲವಾಗಿರುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಇನ್ನು ಸಿಎಂ ಸಿದ್ದರಾಮಯ್ಯ ಅವರು ಕೂಡ ವಿನೇಶ್ ಪೋಗಟ್ ಪರವಾಗಿ ಟ್ವೀಟ್ ಮಾಡಿದ್ದಾರೆ. ಘಟನೆಯ ಬಳಿಕ ನನಗೆ ಬೇಸರವಾಗಿದೆ. ಪ್ಯಾರಿಸ್ ಒಲಿಂಪಿಕ್ಸ್ ನ ಅಹಿತಕರ ಘಟನೆಯ ನಂತರ. ನಿಮ್ಮ ಶಕ್ತಿ, ದೃಢತೆ ಮತ್ತು ಸಮರ್ಪಣೆ ಮನೋಭಾವ ಇಡೀ ದೇಶಕ್ಕೆ ಸ್ಫೂರ್ತಿ. ನೆನಪಿಟ್ಟುಕೊಳ್ಳಿ, ಈ ಕ್ಷಣವು ಮುಂದೆ ನಿಮ್ಮ ಅಗಣಿತ ಸಾಧನೆಗಳನ್ನು ಮತ್ತು ನೀವು ಭಾರತಕ್ಕೆ ತಂದ ಹೆಮ್ಮೆಯನ್ನು ಯಾವತ್ತೂ ಕಡಿಮೆ ಮಾಡುವುದಿಲ್ಲ. ಬಿ ಸ್ಟ್ರಾಂಗ್ ವಿನೇಶ್ . ನಾವು ನಿಮ್ಮನ್ನು ಮತ್ತು ನಿಮ್ಮ ಮುಂದಿನ  ಅದ್ಭುತ ಪ್ರಯಾಣವನ್ನು ನಂಬುತ್ತೇವೆ. ನೀವು ಯಾವಾಗಲೂ ನಮ್ಮ ಚಾಂಪಿಯನ್ನೇ ಆಗಿರುತ್ತೀರಿ ಎಂದು ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.