ಮನೆ Latest News ಪಾರ್ಟಿ ಶಿಸ್ತು ಎಲ್ಲರೂ ಮೇಂಟೇನ್ ಮಾಡಬೇಕು, ಗೌರವ ನೀಡಬೇಕು,ಮೀಡಿಯಾ ಮುಂದೆ ಕುಳಿತು ಪಾರ್ಟಿ ಹೆಸರು ಹಾಳು...

ಪಾರ್ಟಿ ಶಿಸ್ತು ಎಲ್ಲರೂ ಮೇಂಟೇನ್ ಮಾಡಬೇಕು, ಗೌರವ ನೀಡಬೇಕು,ಮೀಡಿಯಾ ಮುಂದೆ ಕುಳಿತು ಪಾರ್ಟಿ ಹೆಸರು ಹಾಳು ಮಾಡಬಾರದು; ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆ

0

ಬೆಂಗಳೂರು; ಪಾರ್ಟಿ ಶಿಸ್ತು ಎಲ್ಲರೂ ಮೇಂಟೇನ್ ಮಾಡಬೇಕು, ಗೌರವ ನೀಡಬೇಕು,ಮೀಡಿಯಾ ಮುಂದೆ ಕುಳಿತು ಪಾರ್ಟಿ ಹೆಸರು ಹಾಳು ಮಾಡಬಾರದು ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ನನಗೆ ತಮಿಳುನಾಡು ಹೋಗೋಕೆ ಹೇಳಿದರು.ಅಲ್ಲಿ ಹೋಗಿ ಬಂದಿದ್ದೇನೆ. ಮರಳಿ ಹೋಗಬೇಕಾಗಿದೆ, ಅದರ ಬಗ್ಗೆ ವರದಿ ಕೊಡಲು ಬಂದಿದ್ದೇನೆ ಎಂದಿದ್ದಾರೆ. ಇದೇ ವೇಳೆ ಶಾಸಕರು ದೆಹಲಿಗೆ ಹೋಗ್ತಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಎಲ್ಲಾ ಹೋಗಿದ್ದಾರೆ, ಸಿಎಂ ಏನೋ ಹೇಳಿದ್ದಾರೆ. ಆದ್ರೆ ಎಲ್ಲಾರು ಡಿಸಿಪ್ಲೀನ್ ಕಾಪಾಡಿಕೊಳ್ಳಬೇಕಾಗಿದೆ.ಪಾರ್ಟಿ ಶಿಸ್ತು ಎಲ್ಲರೂ ಮೇಂಟೇನ್ ಮಾಡಬೇಕು, ಗೌರವ ನೀಡಬೇಕು. ಮೀಡಿಯಾ ಮುಂದೆ ಕುಳಿತು ಪಾರ್ಟಿ ಹೆಸರು ಹಾಳು ಮಾಡಬಾರದು .ಎಲ್ಲರ ಭವಿಷ್ಯ ಪಕ್ಷದಲ್ಲಿದೆ ಮೀಡಿಯಾದಲ್ಲಿ ಇಲ್ಲ. ಮೀಡಿಯಾದಲ್ಲಿ ನಿಮಗೆ ಏನೂ ಬೇಕು ಅದನ್ನ ಹೇಳ್ತೀರಾ. ಎಲ್ಲರಿಗೂ ಅಪೀಲು ಮಾಡುತ್ತೇನೆ. ಎಲ್ಲಾ ಶಾಸಕರಿಗೆ ಹೇಳುತ್ತೇನೆ. ವರಿಷ್ಠರನ್ನ ಭೇಟಿ ಮಾಡೋದು ತಪ್ಪೇನಿಲ್ಲ. ಆದ್ರೆ ಬೇಕಾಬಿಟ್ಟಿ ಏನೇನೋ ಕಮೆಂಟ್ ಮಾಡೋದಾದ್ರೆ ನಾವು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ. ನನ್ನ ಹತ್ತಿರ ಕೆಲವರು ಬಂದು ಹೇಳಿದ್ದರು.ಹೋಗಿ ಕೇಳೋದರಲ್ಲಿ ತಪ್ಪು ಇಲ್ಲ . ಫಸ್ಟ್ ಎಂಎಎಲ್ ಆದವರು, ಎರಡನೇ ಬಾರಿ ಆದವರು ಕೇಳೋದು ತಪ್ಪು ಏನೆಲ್ಲ, ಹಿಂದೆ ಎಲ್ಲಾ ನಡೆದಿದೆ. ಆದ್ರೆ ಇದು ಟೈಮ್ ಅಲ್ಲ, ಇದು ಟೈಮ್ ಅಲ್ಲ. ಈಗ ಎಲೆಕ್ಷನ್ ಇನ್ನೂ ನಡೀತಿಷೆ, ಮೊದಲು ಎಲೆಕ್ಷನ್ ಮಾಡೋಣ ಎಂದಿದ್ದಾರೆ.