ಬೆಂಗಳೂರು; ಸಿಎಂ ಸಿದ್ದರಾಮಯ್ಯ 2024ನೇ ಸಾಲಿನ ಅರಭಾಷೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದರು. ಅರೆಭಾಷೆ ಸಾಹಿತ್ಯ ಮತ್ತು ಶೈಕ್ಷಣಿಕ ಸೇವೆಗಾಗಿ ಕೆ.ಆರ್. ಗಂಗಾಧರ್, ಸಾಹಿತ್ಯ ಮತ್ತು ಪತ್ರಿಕೋದ್ಯಮ ಸೇವೆಗಾಗಿ ಡಾ.ಯು.ಪಿ ಶಿವಾನಂದ್, ಅರೆಭಾಷೆ ಸಂಘಟನೆ ಮತ್ತು ಆಡಳಿತ ಸೇವೆಗೆ ಡಿ.ಎಸ್.ಆನಂದ್ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ 2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿಯ ಜಂಬರ ಎಂದರೆ ಕಾರ್ಯಕ್ರಮ ಎಂದರ್ಥ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಡಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂತೋಷದಿಂದ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ಮೂರು ಜನರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದೇನೆ. ಸರ್ಕಾರ, ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಅರೆಭಾಷೆ ಗೌಡ್ರು ದ.ಕನ್ನಡ ಹಾಗೂ ಕೊಡುಗೆ ಜಿಲ್ಲೆಯಲ್ಲಿ ಹೆಚ್ಚು ವಾಸ. 3 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಅಲ್ಲಿ ವಾಸವಾಗಿದ್ದಾರೆ. 1980ರ ಮೈಸೂರು ಗೆಜೆಟ್ ಪ್ರಕಾರ ಹಾಸನದ ಸಕಲೇಶಪುರದಲ್ಲಿದ್ದರು.ಬೆಂಕಿ ಮಳೆ ಇಲ್ಲ, ಬರಗಾಲ ಇರಬಹುದುಯ ಹೇಮಾವತಿ ನದಿ ದಡದಲ್ಲಿನ ಜನ ಸುಳ್ಯದ ಬಳಿ ಬರ್ತಾರೆ. ಅಲ್ಲಿ ತುಳು, ಕೊಂಕಣಿ ಭಾಷೆ ಮಿಕ್ಸ್ ಆಗಿ ಕನ್ನಡ ಆಗಿದೆ. ಬರುತ್ತೇನೆ ಅನ್ನೋದು ಬನೆ ಅಂತ ಕರೆಯುತ್ತಾರೆ. ಕೆಲವು ಅಕ್ಷರಗಳು ಬಿಟ್ಟು ಹೋಗಿದೆ.ಇದಕ್ಕಾಗಿಯೇ ಇದನ್ನ ಅರೆಭಾಷೆ ಅಂತ ಕರೆಯುತ್ತಾರೆ. ಹೀಗಾಗಿಯೇ ನಿಮ್ಮನ್ನ ಅರೆಭಾಷಿಕರು ಅಂತ ಕರೆಯುತ್ತಾರೆ.ಕನ್ನಡದ ಜೊತೆಗೆ ಮಿಶ್ರಣವಾಗಿರುವ ಸಂಸ್ಕೃತಿ ನಿಮ್ಮದು ಎಂದಿದ್ದಾರೆ,
ಕುವೆಂಪು ಹಾಗೂ ಈ ಸಮುದಾಯದವರು ಬೀಗರು. ಕನ್ನಡ ಸಾಹಿತ್ಯದಲ್ಲಿ ಅವರು ಎತ್ತರಕ್ಕೆ ಬೆಳೆದ್ರು. 230 ಸಣ್ಣ ಭಾಷೆಗಳು ಕರ್ನಾಟಕದಲ್ಲಿದೆ. ಇವೆಲ್ಲವೂ ಕನ್ನಡದಿಂದ ಬಂದ ಭಾಷೆ. ವಿಭಿನ್ನ ಸಂಸ್ಕೃತ ಒಳಗೊಂಡ ಭಾಷೆ ಕನ್ನಡ. ನನಗೆ ಇವರ ಭಾಷೆ ಸ್ವಲ್ಪ ಸ್ವಲ್ಪ ಅರ್ಥ ಆಗುತ್ತೆ. ಕನ್ನಡ ಭಾಷೆಯೇ ಇದು ಅರೆಭಾಷೆ ಆಗಿದೆ. ಈ ಭಾಷೆ ಉಳಿಸಬೇಕು, ಬೆಳೆಸಬೇಕು. ಭಾಗಮಂಡಲದಲ್ಲಿ ನಾನೇ ಸಮುದಾಯ ಭವನ ನಿರ್ಮಾಣ ಮಾಡಿದ್ದೇನೆ. 1 ಕೋಟಿ ರೂ. ಕೊಟ್ಟಿದ್ದೇನೆ. ಬೇರೆ ನಿಮ್ಮ ಮನವಿಗಳನ್ನ ಪರಿಶೀಲನೆ ಮಾಡುತ್ತೇವೆ. ಅರೆಭಾಷಿಕರಿಗೆ ಮಡಿಕೇರಿಯಲ್ಲಿ ಜಮೀನು ಕೊಡುವ ಬಗ್ಗೆ ಕ್ಯಾಬಿನೆಟ್ ನಲ್ಲಿ ತೀರ್ಮಾನ ಮಾಡ್ತೀನಿ. ನಾನು ಮೈಸೂರಿಗೆ ಹೋಗಬೇಕಿದೆ, ಬೀಗರ ಊಟ ಕಾರ್ಯಕ್ರಮ ಇದೆ. ಅಲ್ಲಿಗೆ ಹೋಗಲೇಬೇಕು ಎಂದು ಹೇಳಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡಿ ನನ್ನ ಉಸಿರಿರುವರೆಗೂ ನಾನು ನಿಮ್ಮ ಜೊತೆಗೆ ಇರುತ್ತೇನೆ. ನಾನು ಹಾಕಿರುವ ತೆಗೀಲಾ ಸರ್ ಅಂದ್ರು. ಬೇಡ ಅವರ ಸಂಸ್ಕೃತಿ ಉಳಿಸಬೇಕು ಅಂತ ಹೇಳ್ದೆ. ಕೊಡಗಿನ ವೆದರ್ ಬೆಂಗಳೂರಿಗೆ ಕರೆದುಕೊಂಡು ಬಂದಿದ್ದೀರಿ. ಅಂತಹ ವಾತಾವರಣೆ ನಿರ್ಮಾಣ ಆಗಿದೆ. ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಪ್ರಪಂಚದಲ್ಲಿ ಎಲ್ಲರೂ ಬೆಳೆಯಬೇಕು, ಎತ್ತರಕ್ಕೆ ಬೆಳೆಯಬೇಕು. ಅಕ್ಷರ ಮರೆತರೆ ಕಲಿಸಬಹುದು, ಸಂಸ್ಕೃತಿ ಮರೆತರೆ ಕಲಿಸೋಕೆ ಆಗಲ್ಲ.ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಖಚಿತ ಎಂದಿದ್ದಾರೆ.
ಸಾಧನೆ ಮಾಡಿ ಸತ್ತಾಗ ಮಗು ಸಂತೋಷವಾಗಿ ಸತ್ತಿದೆ ಅಂತಾರೆ. ಅದೇ ಹುಟ್ಟು ಸಾವಿಗೂ ಇರೋ ವ್ಯತ್ಯಾಸ. ವೇದಿಕೆ ಮೇಲೆ ನನಗೆ ಮನವಿ ಕೊಟ್ಟಿದ್ದೀರಿ. ಸ್ವಾಭಿಮಾನದ ಬದುಕಿನಲ್ಲಿ ನಾವೆಲ್ಲ ಇದ್ದೇವೆ. ಭಾರತದ ಆಸ್ತಿಯೇ ಸಂಸ್ಕೃತಿ. ಅಲೆಗ್ಸಾಂಡರ್ ದಿ ಗ್ರೇಟ್. ಭಾರತ ವಶಪಡಿಸಿಕೊಳ್ಳಲು ಹೋಗ್ತಾರೆ.ತನ್ನ ಗುರುಗಳನ್ನ ಭೇಟಿ ಮಾಡಿ ಬರುತ್ತಾನೆ. ನೀನು ಭಾರತಕ್ಕೆ ಹೋಗಿ ವಾಪಸ್ ಹೋಗಿ ಬರ್ತೀಯಾ ಅಂತಾರೆ. ಇಲ್ಲ ಎರಡು ಭಾಗ ವಶಪಡಿಸಿಕೊಂಡಿದ್ದೇನೆ ಅಂತಾನೆ. ಮಹಾಭಾರತ ಗ್ರಂಥ ರಾಮಾಯಣ ಗ್ರಂಥ, ಕೃಷ್ಣಾನ ಕೊಳಲು, ಗಂಗಾ ಜಲ, ಭಾರತದ ತ್ವತ್ವ ಜ್ಞಾನಿಗಳನ್ನ ತೆಗೆದುಕೊಂಡು ಬಂದ್ರೆ ಇಡೀ ಭಾರತವನ್ನೇ ತಂದಂತೆ ಅಂತ ಅವರ ಗುರು ಹೇಳ್ತಾರೆ. ಕೊಳಲು ಬಿದರಿನಿಂದ ಆದದ್ದು. ನಿನ್ನೆ ಇಡುಗುಂಜಿಯಿಂದ ಪ್ರಸಾದ ತಂದು ಕೊಟ್ರು. ಹುಲ್ಲು ಗಣೇಶನಿಗೆ ಇಡುತ್ತಾರೆ. ಪಿಳ್ಳಾರತಿಯಲ್ಲಿ ಗಣೇಶನನ್ನ ಕಾಣ್ತೀವಿ. ನಮ್ಮ ಜನಸಂಖ್ಯೆ ಕಡಿಮೆ ಅಂತ ತಿಳಿದುಕೊಳ್ಳಬೇಡಿ ಎಂದು ಮಂಕುತಿಮ್ಮನ ಸಾಲುಗಳನ್ನ ಡಿಕೆಶಿ ಮೆಲುಕು ಹಾಕಿದರು.
ಜನಸಂಖ್ಯೆ ಕಡಿಮೆ ಇದ್ರೂ ನಾಯಕರಾಗಬಹುದು. ಭಾರತದಲ್ಲಿ ಬೇಕಾದಷ್ಟು ಭಾಷೆಗಳಿವೆ. 7 ಸಾವಿರದಿಂದ 2800ಕ್ಕೆ ಭಾಷೆಗಳು ಕ್ಷೀಣಿಸಿವೆ. 4 ಲಕ್ಷದ ಜನರಲ್ಲ, 7 ಕೋಟಿಯ ಜನರು ಪ್ರತಿನಿಧಿಸುವ ನಾಯಕರನ್ನ ನೀವು ಕೊಟ್ಟಿದ್ದೀರಿ. ಮೈಸೂರು, ಕೊಡಗು, ಗುಲ್ಬರ್ಗ, ಕನಕಪುರ ಕನ್ನಡವೇ ಬೇರೆ. ಆದ್ರೆ 224 ಜನರೂ ನಾವು ವಿಧಾನಸೌಧದಲ್ಲಿ ಒಂದೇ ಭಾಷೆ ಮಾತಾಡ್ತೀವಿ. ಸಮುದಾಯಕ್ಕೆ ಜಮೀನು ಬೇಕು ಅಂತ ಮಂಥರ್ ಗೌಡ ಹೇಳಿದ್ರು. ರಾಜಕೀಯ ಇರುತ್ತೆ, ಹೋಗುತ್ತೆ. ನಾನು, ನನ್ನ ಹೆಂಡತಿ, ಕುಟುಂಬ ಸದಾ ನಿಮ್ಮ ಜೊತೆಗೆ ಇರುತ್ತೇವೆ. ಕೊನೆಯ ಉಸಿರು ಇರುವವರೆಗೂ ನಿಮ್ಮ ಜೊತೆಗಿರುತ್ತೇವೆ. ನನಗೆ ಮುಂದಿನ ಬಾರಿ ನಿಮ್ಮ ಸಂಪ್ರದಾಯದ ಊಟ ಹಾಕಿಸಿ ಎಂದು ಮನವಿ. ದೆಹಲಿಗೆ ಹೋಗ್ಬೇಕಿತ್ತು, ಮಂಥರ್ ಗೌಡ ಬರಲೇಬೇಕು ಅಂತಿದ್ರು ಅದಕ್ಕೆ ಬಂದೆ ಎಂದ ಡಿಕೆಶಿ ಹೇಳಿದ್ದಾರೆ.










