ಬೆಂಗಳೂರು; ನರೇಂದ್ರ ಮೋದಿಯವರಿಗೆ ಬೆಲೆ ಏರಿಕೆ ಮಾಡೋದು ಅಗತ್ಯ ಇರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ್ಮೇಲೆ ಅನೇಕ ಸಲ ಬೆಲೆ ಏರಿಕೆ ಆಗಿದೆ. ಈಗ ಕೂಡ ಬೆಲೆ ಏರಿಕೆ ಮಾಡ್ತಾರೆ ಅಂತಾ ಗೊತ್ತಿತ್ತು. ಪೆಟ್ರೋಲ್ ಡೀಸೆಲ್ ಬೆಲೆ ಏರಿಕೆಯಿಂದ ಜನರ ಮೇಲೆ ಪ್ರಭಾವ ಬೀರುತ್ತೆ. ವಿಶೇಷವಾಗಿ ರೈತರು ಬಡವರು ಕಾರ್ಮಿಕರ ಮೇಲೆ ಪರಿಣಾಮ ಬೀರುತ್ತೆ. ಬೆಲೆ ಏರಿಕೆಯನ್ನ ನಾವು ಖಂಡಿಸುತ್ತೇವೆ. ನರೇಂದ್ರ ಮೋದಿಯವರಿಗೆ ಬೆಲೆ ಏರಿಕೆ ಮಾಡೋದು ಅಗತ್ಯ ಇರಲಿಲ್ಲ. ಇದನ್ನ ವಾಪಸ್ ತಗೋಬೇಕಂತ ಒತ್ತಾಯ ಮಾಡ್ತಿವಿ. ಬಿಜೆಪಿ ಅಧಿಕಾರಕ್ಕೆ ಬಂದಾಗ ಎಲ್ ಪಿ ಜಿ ದರ 413 ರೂ ಇತ್ತು. ಈಗ ಸಾವಿರ ರೂಪಾಯಿ ದಾಟಿದೆ.ಇದ್ರಿಂದ ಆಹಾರ ಪದಾರ್ಥಗಳ ಬೆಲೆ ಏರಿಕೆಯು ಆಗಿದೆ. ಈಗ ಗ್ಯಾಸ್ ಸಹ ಸಿಗ್ತಿಲ್ಲ. ಇದರ ಜೊತೆ ಬೆಲೆ ಏರಿಕೆ ಆದ್ರೆ ಹೊರೆ ಜಾಸ್ತಿಯಾಗುತ್ತೆ ಎಂದಿದ್ದಾರೆ.
ನೀಟ್ ಮರು ಪರೀಕ್ಷೆ ವಿಚಾರದ ಬಗ್ಗೆ ಮಾತನಾಡಿದ ಅವರು ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಕಟ್ಟಿ ತಯಾರಿ ಆಗಬೇಕಿದೆ.ರಾಜ್ಯದಲ್ಲಿ ಎಸ್ ಐ ಆರ್ ಪ್ರಾರಂಭ ವಿಚಾರದ ಬಗ್ಗೆ ಮಾತನಾಡಿದ ಅವರು ಎಸ್ ಐ ಅರ್ ಪ್ರಾರಂಭ ಆಗ್ತಿದೆ. ಈ ಬಗ್ಗೆ ನಾವು ತಯಾರಿ ಮಾಡಿಕೊಳ್ತೀವಿ ಎಂದು ತಿಳಿಸಿದ್ದಾರೆ.











