ಮನೆ Latest News ಡಿ ಕೆ ಶಿವಕುಮಾರ್ ಅವರ ಧಮ್ಕಿ ನಮ್ಮ ಹತ್ರ ನಡೆಯಲ್ಲ: : ಡಿಸಿಎಂ ವಿರುದ್ಧ ಎಚ್...

ಡಿ ಕೆ ಶಿವಕುಮಾರ್ ಅವರ ಧಮ್ಕಿ ನಮ್ಮ ಹತ್ರ ನಡೆಯಲ್ಲ: : ಡಿಸಿಎಂ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು: ಡಿ ಕೆ ಶಿವಕುಮಾರ್ ಅವರ ಧಮ್ಕಿ ನಮ್ಮ ಹತ್ರ ನಡೆಯಲ್ಲ ಎಂದು ಡಿಸಿಎಂ ವಿರುದ್ಧ ಎಚ್ ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಡಿ ಕೆ ಶಿವಕುಮಾರ್ ಅವರ ಧಮ್ಕಿ ನಮ್ಮ ಹತ್ರ ನಡೆಯಲ್ಲ. ಯಾರ್ ಯಾರ್ ಕಾಲದಲ್ಲಿ ಯಾರ್ ಯಾರ್ ಕಾಲು ಕಟ್ತೀರಿ ಗೊತ್ತಿದೆ ನಮಗೆ. ಇವರು ಹೇಳಿದ್ದಕ್ಕೆ ಡಿಸಿ ಸೈನ್ ಹೊಡೆದುಕೊಂಡು ಕೂತಿದ್ದೀರಿ. ನಮ್ಮ ನಂಬರ್‌ನಿಂದ ಫೋನ್ ಹೋದ್ರೆ ಡಿಸಿ ಫೋನೇ ತೆಗೆಯಲ್ಲ. ಮುಖ್ಯಮಂತ್ರಿಗಳಿಗೆ ಹೇಳುತ್ತೇನೆ. ಚೇರ್ ಸಿಕ್ಕಿದ್ರೆ ಸಾಕು ಅಂತ ಇವನ ಮಾತು ಕಟ್ಟಿಕೊಂಡು ರಿಯಲ್ ಎಸ್ಟೇಟ್ ದಲ್ಲಾಳಿ ಆಗಬೇಡಿ. ಕೊನೆಗಾಲದಲ್ಲಿ ಹೋಗಬೇಕಾದರೆ ಸಿದ್ದರಾಮಯ್ಯ ಗೌರವಯುತವಾಗಿ ಹೆಸರು ತೆಗೆದುಕೊಂಡು ಹೋಗಿ. ಹಲವರು ಭಾಗ್ಯ ಕೊಟ್ಟೇ ೨೦೧೮ ರಲ್ಲಿ ೮೫ ಕ್ಕೆ ಇಳಿಸಿದ್ರು ನಿಮ್ಮನ್ನುಇಂಥ ಗ್ಯಾರಂಟಿ ಕೊಟ್ಟು ಜನ ಈಗ ಉಳಿಸ್ತಾರೆ ಅಂತ ಭಾವಿಸಬೇಡಿ. ಕ್ಯಾಬಿನೆಟ್ ಎನ್ನೋದು ಹೆಸರಿಗೆ ಮಾತ್ರ.ಕ್ಯಾಬಿನೆಟ್ ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ. ಕ್ಯಾಬಿನೆಟ್ ಅಂದ್ರೆ ಎಲ್ಲವನ್ನೂ ಹರಾಜು ಹಾಕುವ ಸಭೆ ಎನ್ನಬಹುದಾ? ಎಂದು ಪ್ರಶ್ನಿಸಿದ್ದಾರೆ,

ರಾಜ್ಯದ ಡಿಸಿಎಂ ಬೆಂಗಳೂರು ನಗರದ ಅಭಿವೃದ್ಧಿ ಗೆ ದೊಡ್ಡ ಮಟ್ಟದ ಗ್ಯಾರಂಟಿ ಗಳನ್ನು ಬೇರೆ ಘೋಷಣೆ ಮಾಡಿದ್ದಾರೆ. ಬೆಂಗಳೂರು ನಾಗರೀಕರಿಗೆ ೬ ನೇ ಗ್ಯಾರಂಟಿ ಕೊಟ್ಟು ಜನ ತೇಲಾಡುವ ಗ್ಯಾರಂಟಿ ಕೊಡ್ತೀನಿ ಅಂದಿದ್ದಾರೆ. ನನಗೆ ರಾಜಕೀಯವಾಗಿ, ನನ್ನ ತಂದೆಯವರಿಗೂ ರಾಜಕೀಯವಾಗಿ ದೊಡ್ಡ ಅವಕಾಶ ಕೊಟ್ಟ ರಾಮನಗರ. ರಾಮನಗರ, ಭೈರಮಂಗಲ ಸೇರಿ ೮ ಗ್ರಾಮಗಳನ್ನು ಗ್ರೇಟರ್ ಬೆಂಗಳೂರು ಟೌನ್ ಶಿಪ್ ಎಂಬ ಹೆಸರಲ್ಲಿ ಮಾಡ್ತಿದ್ದಾರೆ. ಇಂಟಿಗ್ರೇಟೆಡ್ ಟೌನ್ ಶೀಪ್ ಮಾಡಬೇಕು ಎಂದು ಹೊರಟಿದ್ದಾರೆ. ಈ ಸರ್ಕಾರ ಬಂದ ಮೇಲೆ ಹಲವಾರು ವಿಷಯಗಳನ್ನು ಪ್ರಾರಂಭ ಮಾಡಿದ್ದಾರೆ.ಇದು ಕುಮಾರಸ್ವಾಮಿ ಕೂಸು ಈಗ ಕುಮಾರಸ್ವಾಮಿ ವಿರೋಧ ಮಾಡ್ತಿದ್ದಾರೆ ಅಂತ ಹೇಳ್ತಿದ್ದಾರೆ ಇವರು. ನನಗೆ ರಾಜಕೀಯ ಜನ್ಮ ಕೊಟ್ಟ ರಾಮನಗರ. ನಾನು ಸಿಎಂ ಆಗಿದ್ದಾಗ ಕೃಷ್ಣ ಕಚೇರಿಯಲ್ಲಿ ರೈತರ ಜೊತೆಗೆ ಸುದೀರ್ಘ ಸಭೆ ಮಾಡಿದ್ದೆ.ಆಗ ತಾಯಿ ಸಮಾನ ಮಹಿಳೆಯೊಬ್ಬರು ನನಗೆ ಮಾತು ಹೇಳಿದ್ರು. ಪರಿಹಾರ ಕೊಟ್ಟರೆ ಎಷ್ಟು ದಿನ ಇರಬಹುದು? ನಿನ್ನನ್ನು ಶಾಸಕನಾಗಿ ಮಾಡಿದ್ದು ನಮ್ಮ ಒಕ್ಕಲು ಎಬ್ಬಿಸಲು ಮಾಡಿದ್ದಾ ಎಂದು ಕೇಳಿದ್ರು.ಲ್ಯಾಂಡ್ ವ್ಯಾಲ್ಯು ಬಗ್ಗೆ ನಾನು ಮಾತಾಡಲ್ಲ. ಅವತ್ತು ನನ್ನ ಕಾರ್ಯಕ್ರಮ ಬೇರೆ, ಈಗಿನ ಸರ್ಕಾರ ರಿಯಲ್ ಎಸ್ಟೇಟ್ ವ್ಯಾಪಾರ ಮಾಡಲು ಹೊರಟಿದ್ದಾರೆ. ರಿಯಲ್ ಎಸ್ಟೇಟ್ ಬ್ರೋಕರ್ ಆಗಿ ಸಿದ್ದರಾಮಯ್ಯ ನವರನ್ನೇ ಮಾಡಲಾಗಿದೆ ಎಂದು ತಿಳಿಸಿದ್ದಾರೆ.