ಮನೆ Latest News ಐಪಿಎಲ್ ಅವರು, RCB ಆವರು ಆಗಲಿ ಅಥವಾ ಪೊಲೀಸ್ ಅವರಿಂದಾಗಲಿ ಯಾವುದೇ ಕಂಪ್ಲೈಂಟ್ ಇಲ್ಲ; ಗೃಹ...

ಐಪಿಎಲ್ ಅವರು, RCB ಆವರು ಆಗಲಿ ಅಥವಾ ಪೊಲೀಸ್ ಅವರಿಂದಾಗಲಿ ಯಾವುದೇ ಕಂಪ್ಲೈಂಟ್ ಇಲ್ಲ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ಐಪಿಎಲ್ ಅವರು, RCB ಆವರು ಆಗಲಿ ಅಥವಾ ಪೊಲೀಸ್ ಅವರಿಂದಾಗಲಿ ಯಾವುದೇ ಕಂಪ್ಲೈಂಟ್ ಇಲ್ಲ ಎಂದು  ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಐಪಿಎಲ್ ಫೈನಲ್ ಪಂದ್ಯ ಶಿಫ್ಟ್ ಸ್ಥಳಾಂತರ ವಿಚಾರದ ಬಗ್ಗೆ ಮಾತನಾಡಿದ ಗೃಹ ಸಚಿವ ಪರಮೇಶ್ವರ್  ಭದ್ರತೆ ವಿಚಾರವಾಗಿ ಯಾವುದೇ ಕಂಪ್ಲೇಂಟ್ ಬಂದಿಲ್ಲ. 5 ಮ್ಯಾಚ್ ಇಲ್ಲಿಯವರೆಗೆ ಆಗಿದೆ ಭದ್ರತೆ ವಿಚಾರ ಕಾರಣ ಅಲ್ಲ. ನಂಗೆ ಅನಧಿಕೃತವಾಗಿ ಬಂದಿರೋ ಮಾಹಿತಿ ಏನಂದ್ರೆ ಅವರು ಇಲ್ಲಿ 33ಸಾವಿರ ಆಸನಗಳಿವೆ. 7-8 ಸಾವಿರ ಪಾಸ್  ಅವರ ಸ್ಪಾನ್ಸರ್ ಅವರಿಗೆ, ಇತರರಿಗೆ ಕೊಡಬೇಕಾಗುತ್ತದೆ. ಹೀಗಾಗಿ ಅವರೇ ಒಂದು 7-8 ಸಾವಿರ ಸೀಟ್ ಬ್ಲಾಕ್ ಮಾಡ್ತಾರೆ. ಅದಕ್ಕೆ ಉಳಿಯೋದೇ 25 ಸಾವಿರ ಉಳಿಯುತ್ತದೆ ಹೀಗಾಗಿ ಕರ್ಮಷಿಯಲ್ ವರ್ಕೌಟ್ ಆಗಲ್ಲ. KSCA ಅವರು ನಿರಂತರವಾಗಿ ಸಂಪರ್ಕದಲ್ಲಿದ್ದರು, ಆದ್ರೆ ಇಲ್ಲಿಗೆ ಕೊಟ್ಟಿಲ್ಲ.ಯಾವುದೇ ತಂಡ ಚಾಂಪಿಯನ್ ಆದಾಗ ಅದರ  ಮುಂದಿನ ಆವೃತ್ತಿಯಲ್ಲಿ .ಆ ತಂಡದ ತವರು ಮೈದಾನದಲ್ಲಿ ಮೊದಲ ಹಾಗೂ ಫೈನಲ್ ಮ್ಯಾಚ್ ಆಡಬೇಕಾಗುತ್ತದೆ.ಆದ್ರೆ ಇವರು ಮೊದಲೇ ಇದೆಲ್ಲವನ್ನ ವರದಿ ಮಾಡಿ ನಿರ್ಧಾರ ಮಾಡಿದ್ದಾರೆ ಅನ್ನಿಸುತ್ತೆ ಎಂದಿದ್ದಾರೆ.

ಶಾಸಕರ ಟಿಕೆಟ್ ದುರ್ಬಳಕೆಯಿಂದ  ಪಂದ್ಯ ಅಯೋಜನೆ ಕೈ ತಪ್ಪಿ ಹೋಯ್ತಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅದಕ್ಕೆ ಏನು ಸಂಬಂಧ ಇಲ್ಲ. ನಾಲ್ಕು ಪಾಸ್ ಕೊಟ್ರೆ ಏನು ಆಗುತ್ತದೆ. ಅದಕ್ಕೆ ಇದಕ್ಕೆಯಾವುದೇ ಸಂಬಂಧ ಇಲ್ಲ ಎಂದ ಅವರು ಪಶ್ಚಿಮ ಬಂಗಾಳದಲ್ಲಿ ಸುವೇಂದು ಅಧಿಕಾರಿ ಆಪ್ತನ ಹತ್ಯೆ ವಿಚಾರದ ಬಗ್ಗೆ ಮಾತನಾಡಿ ನಂಗೆ ಹೆಚ್ಚಿನ ಮಾಹಿತಿ ಇಲ್ಲ, ಎಲೆಕ್ಷನ್ ಆದ ನಂತರ ರಾಜ್ಯದಲ್ಲಿ ಗೊಂದಲ‌ ಹಾಗೂ ಈ ರೀತಿ ಆಗೋದು ನೋಡಿದ್ದೇವೆ.ಈ‌ ರೀತಿ ಆಗಬಾರದು, ಎಲೆಕ್ಷನ್ ಕಮಿಷನ್ ಇದನ್ನ ಕಂಟ್ರೋಲ್ ಮಾಡಬೇಕು ಎಂದು ತಿಳಿಸಿದ್ದಾರೆ.

ತಮಿಳುನಾಡಿನಲ್ಲಿ ಟಿವಿಕೆ  ಕಾಂಗ್ರೆಸ್  ಮೈತ್ರಿ, ಸಲುವಾಗಿ ಅವರನ್ನ ನಂಬಬೇಡಿ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿ ಅವರು ಎಷ್ಟು ಜನರಿಗೆ ಚೂರಿ ಹಾಕಿದ್ದಾರೆ. ಬಿಜೆಪಿ ಅವರು ದೇಶದಲ್ಲಿ ಯಾರಿಗೆ ಎಲ್ಲಿ ಚೂರಿ ಹಾಕಿದ್ದಾರೆ ಗೊತ್ತಿದೆ. ಒಂದು ಸಲ ಏನು ಆಗುತ್ತೆ ಬಿಜೆಪಿ ಅವರು ಜಾಣ ಕುರುಡು ರೀತಿ ವರ್ತನೆ ಮಾಡ್ತಾರೆ.ನಾವು ಹೌದು, ಪಾಲಿಟಿಕ್ಸ್ ಅಂದ್ರೆ ಪಾಲಿಟಿಕ್ಸ್.ಸರ್ಕಾರ ಅಲ್ಲಿ ಬರಬೇಕು, ಜನರಿಗೆ ಆಡಳಿತ ನೀಡಬೇಕು ಆ ದೃಷ್ಟಿಯಿಂದ ಅವರಿಗೆ ಬೆಂಬಲ ನೀಡಬೇಕಾಗುತ್ತದೆ. ಈಗಲೂ ಡಿಎಂಕೆ ಕಾಂಗ್ರೆಸ್ ಅಣ್ಣ ತಮ್ಮಂದಿರ ತರಹ ಇದ್ದೇವೆ,ಅದು ಪಾಸಿಬಿಲಿಟಿಸ್ ಸರ್ಕಾರ ರಚನೆ ಆಗಬೇಕು ಅಷ್ಟೇ ಎಂದಿದ್ದಾರೆ.