ಬೆಂಗಳೂರು: ಶೃಂಗೇರಿ ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಡಿ ಎನ್ ಜೀವರಾಜ್ ಅವರ ಪ್ರಮಾಣ ವಚನ ಈಗ ಆಗಿದೆ, ಅದರ ಬಗ್ಗೆ ಚರ್ಚೆ ಬೇಡ ಎಂದು ವಿಧಾನಸಭಾಧ್ಯಕ್ಷ ಯು ಟಿ ಖಾದರ್ ಹೇಳಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು ರಾಜ್ಯಪಾಲರು ಸೂಚನೆ ಕೊಟ್ಟಿಲ್ಲ. ಎಲ್ಲಿಯೂ ಕೂಡ ತಡವಾಗಿಲ್ಲ. ಮೊನ್ನೆ ಬೆಳಿಗ್ಗೆ ಎಲೆಕ್ಷನ್ ಕಮಿಷನ್ ಆದೇಶ ಮಾಡಿದೆ. ನಿನ್ನೆ ಬೆಳಿಗ್ಗೆ ನಮ್ಮ ಕಚೇರಿಗೆ ಅರ್ಜಿ ಕೊಟ್ಟಿದ್ದಾರೆ. ನಿನ್ನೆ ನಾನು ಊರಲ್ಲಿದ್ದೆ, ಬೇರೆ ಬೇರೆ ಕಾರ್ಯಕ್ರಮದಲ್ಲಿದ್ದೆ. ನಿನ್ನೆ ಅರ್ಜಿ ಕೊಟ್ಟು ಗವರ್ನರ್ ಭೇಟಿಯಾಗಿದ್ದಾರೆ. ನಾನು ಬೇರೆ ಬೇರೆ ಕೆಲಸದಲ್ಲಿದ್ದೆ. ಸಂವಿಧಾನದವಾಗಿ ನಾನು ನನ್ನ ಕೆಲಸ ಮಾಡಿದ್ದೇನೆ. ಕಾನೂನು ತೊಡಕುಗಳ ಬಗ್ಗೆ ತಿಳಿದುಕೊಳ್ಳಲು ಸಮಯ ಬೇಕಿತ್ತು. ಸ್ಪೀಕರ್ ಮೇಲೆ ಒತ್ತಡ ಹೇರಲು ಬರಲ್ಲ, ಒತ್ತಡವೂ ಇಲ್ಲ. ಸರ್ಕಾರದ ಮೇಲೆ, ಪ್ರತಿಪಕ್ಷದ ಮೇಲೆ ವಿಶ್ವಾಸ ಇರಬೇಕು. ನಾವು ಎಲ್ಲಿಯೂ ತಡ ಮಾಡಿಲ್ಲ. ಒತ್ತಡ, ನಿರ್ದೇಶನ ಯಾವುದು ಇದರಲ್ಲಿ ಆಗಿಲ್ಲ.ರಾಜ್ಯಪಾಲರಿಗೂ ನಾನು ಇಂದು ಬೆಳಿಗ್ಗೆ ಉತ್ತರ ಕೊಟ್ಟಿದ್ದೇನೆ ಎಂದಿದ್ದಾರೆ.
ಚುನಾವಣಾ ಆಯೋಗ ಪ್ರಮಾಣ ಪತ್ರ ಕೊಟ್ಟ ಬಳಿಕ ಅವರಿಗೆ ಪ್ರಮಾಣ ವಚನ ಬೋಧಿಸಬೇಕು. ಹಾಗಾಗಿ ಪ್ರಮಾಣ ವಚನ ಬೋಧಿಸಿದ್ದೇನೆ. ಒಂದು ವೇಳೆ ಕೋರ್ಟ್ ಸ್ಟೇ ಕೊಟ್ಟರೆ ಇವರದ್ದು( ಜೀವರಾಜ) ಶಾಸಕ ಸ್ಥಾನ ರದ್ದು ಆಗಲಿದೆ. ಅವರಿಗೆ ( ರಾಜೇಗೌಡಗೆ) ಪ್ರಮಾಣ ವಚನ ಬೋಧಿಸಬಹುದು. ಕಾನೂನು ಇರೋದೆ ಹಾಗೇ, ಕಾನೂನು ತಜ್ಞರ ಜೊತೆಗೆ ನಾನು ಮಾತಾಡಿದ್ದೇನೆ ಎಂದು ತಿಳಿಸಿದ್ದಾರೆ.











