ಮನೆ Latest News ಉಪಚುನಾವಣೆಯ ಫಲಿತಾಂಶಕ್ಕೂ ಸಿಎಂ ಕುರ್ಚಿಯ ವಿಚಾರಕ್ಕೂ ಸಂಬಂಧ ಇಲ್ಲ; ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

ಉಪಚುನಾವಣೆಯ ಫಲಿತಾಂಶಕ್ಕೂ ಸಿಎಂ ಕುರ್ಚಿಯ ವಿಚಾರಕ್ಕೂ ಸಂಬಂಧ ಇಲ್ಲ; ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿಕೆ.

0

ಮೈಸೂರು; ಉಪಚುನಾವಣೆಯ ಫಲಿತಾಂಶಕ್ಕೂ ಸಿಎಂ ಕುರ್ಚಿಯ ವಿಚಾರಕ್ಕೂ ಸಂಬಂಧ ಇಲ್ಲ ಎಂದು ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಉಪಚುನಾವಣೆಯ ಫಲಿತಾಂಶಕ್ಕೂ ಸಿಎಂ ಕುರ್ಚಿಯ ವಿಚಾರಕ್ಕು ಸಂಬಂಧ ಇಲ್ಲ.  ನಮ್ಮದು ಹೈ ಕಮಾಂಡ್ ಪಕ್ಷ, ಹೈ ಕಮಾಂಡ್ ಹೇಳಿದರೆ ಇನ್ನೂ ಎರಡು ಬಜೆಟ್ ಮಂಡಿಸುತ್ತೇನೆ. ಇದನ್ನು ಅಧಿವೇಶನದಲ್ಲೇ ಹೇಳಿದ್ದೇನೆ, ಈಗಲೂ ಅದನ್ನೇ ಹೇಳುತ್ತೇನೆ. ಉಪಚುನಾವಣೆ ಫಲಿತಾಂಶಕ್ಕೂ ಅದಕ್ಕು ಸಂಬಂಧ ಇಲ್ಲ. ಎರಡು ಕ್ಷೇತ್ರಗಳಲ್ಲಿ ನಾವೇ ಗೆಲ್ಲುತ್ತೇವೆ‌. ದಾವಣಗೆರೆಯಲ್ಲಿ ಯಾವ ಗೊಂದಲವೂ ಇಲ್ಲ. ಕಳೆದ ಮೂರು ಉಪಚುನಾವಣೆಯಲ್ಲಿ ಮೂರು ಕ್ಷೇತ್ರಗಳಲ್ಲಿ ನಾವೇ ಗೆದ್ದಿದ್ದೇವೆ‌.ಅದು ಜನ ಸರ್ಕಾರಕ್ಕೆ ಮಾಡಿದ ಆಶೀರ್ವಾದ

ಈ ಫಲಿತಾಂಶವೂ ಕೂಡ ಜನರ ಸರ್ಕಾರ ಮಾಡುವ ಆಶೀರ್ವಾದ. ಇದನ್ನ ದಿಕ್ಸೂಚಿ ಅದು ಇದು ಎಂದು ಹೇಳುವುದಿಲ್ಲ. ನಾನು ಏಪ್ರಿಲ್ ಒಂದರಿಂದ ಚುನಾವಣೆ ಪ್ರಚಾರದಲ್ಲಿ ಭಾಗವಹಿಸುತ್ತೇನೆ. ಏಪ್ರಿಲ್ 5ರಂದು ಕೇರಳಕ್ಕೆ ಪ್ರಚಾರಕ್ಕೆ ಹೋಗುತ್ತೇನೆ. ತಮಿಳುನಾಡು ಚುನಾವಣೆ ಪ್ರಚಾರಕ್ಕೆ ಹೋಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ಮೈಸೂರಿನಲ್ಲೂ ಡ್ರಗ್ಸ್ ಜಾಲ ವಿಚಾರದ ಬಗ್ಗೆ ಮಾತನಾಡಿದ ಅವರು ಡ್ರಗ್ಸ್ ಜಾಲ ಪತ್ತೆ ಮಾಡಿರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ನಾವು ಹೋರಾಡುತ್ತಿದ್ದೇವೆ.ಡ್ರಗ್ಸ್ ನ ಲಿಂಕ್ ಯಾವುದೇ ಆಗಿರಲಿ, ನಾವು ಅದನ್ನು ತಡೆಯುತ್ತೇವೆ ಎಂದ ಅವರು ಮೈಸೂರಿನಲ್ಲಿ ಸಿಗ್ನಲ್ ಲೈಟ್ ಹೆಚ್ಚಳ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ  ವೈಜ್ಞಾನಿಕವಾಗಿಯೇ ಸಿಗ್ನಲ್ ಲೈಟ್ ಅಳವಡಿಕೆ ಮಾಡಿದ್ದಾರೆ. ಜನರಿಗೆ ಅನಗತ್ಯ ತೊಂದರೆ ಕೊಡಲು ಯಾರು ಸಿಗ್ನಲ್ ಲೈಟ್ ಹಾಕುವುದಿಲ್ಲ. ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಈ ವ್ಯವಸ್ಥೆ ಮಾಡಲಾಗಿದೆ.ಏನಾದರೂ ಬದಲಾವಣೆ ಬೇಕಿದ್ದರೆ ಸ್ಥಳೀಯವಾಗಿ ಮಾಡಿಕೊಳ್ಳುತ್ತಾರೆ. ಹೆಜ್ಜೆ ಹೆಜ್ಜೆಗಂತೂ ಸಿಗ್ನಲ್ ಲೈಟ್ ಹಾಕಿಲ್ಲ ಎಂದಿದ್ದಾರೆ.