ರಾಯಚೂರು: ಈ ಬಾರೀ 100 ಕ್ಕೆ 100ರಷ್ಟು ಬಾಗಲಕೋಟೆಯಲ್ಲಿ ಭಗವಧ್ವಜ ಹಾರಾಡುತ್ತೆ ಎಂದು ರಾಯಚೂರಿನಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ದಾರೆ.
ಈ ಬಾರಿ ಬಾಗಲಕೋಟೆಯಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ತಂದಿದೆ. ಈ ಬಾರೀ 100 ಕ್ಕೆ 100ರಷ್ಟು ಬಾಗಲಕೋಟೆಯಲ್ಲಿ ಭಗವಧ್ವಜ ಹಾರಾಡುತ್ತೆ. ರಾಜ್ಯ ಸರ್ಕಾರದಿಂದ ಬೆಲೆ ಏರಿಕೆ ಆಗ್ತಿದೆ. 2.5 ವರ್ಷದಲ್ಲಿ ಇದೇ ಸರ್ಕಾರದ ಸಾಧನೆ ಆಗಿದೆ. ಅಧಿಕಾರಕ್ಕಾಗಿ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ಪೈಪೋಟಿ ಮಾಡ್ತಿದ್ದಾರೆ. ಇಬ್ಬರ ಮಧ್ಯದ ಜಗಳಲ್ಲಿ ರಾಜ್ಯದ ಜನ ಬಡವರಾಗಿದ್ದಾರೆ. ಮಲ್ಲಿಕಾರ್ಜುನ್ ಖರ್ಗೆ ಅವರು ಕೂಡ ಹೈಕಮಾಂಡ್ ಅಂತಾರೆ. ಆಡಳಿತ ಸರಿಯಾಗಿ ನಡೆಯುತ್ತಿಲ್ಲ.ಸರ್ಕಾರದ ಮಾತನ್ನ ಅಧಿಕಾರಿಗಳು ಕೇಳ್ತಿಲ್ಲ. ಎರಡು ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸುತ್ತೆ. ಎರಡು ಕ್ಷೇತ್ರದಲ್ಲಿ ಜವಾಬ್ದಾರಿ ಕೊಟ್ಟಿದ್ದಾರೆ ಅದನ್ನ ನಿಭಾಯಿಸುತ್ತೇನೆ ಎಂದಿದ್ದಾರೆ.
ಶ್ರೀ ರಾಮುಲು ಮಸ್ಕಿ ಕ್ಷೇತ್ರದತ್ತ ಕಣ್ಣೀಟ್ಟಿರೋ ವಿಚಾರದ ಬಗ್ಗೆ ಮಾತನಾಡಿದ ಅವರು ರಾಜ್ಯದಲ್ಲಿ ಈ ಬಾರಿ 120 ಕ್ಕೂ ಹೆಚ್ಚು ಸ್ಥಾನಗಳು ಬರಬೇಕಿದೆ. ಹೀಗಾಗಿ ಮಧ್ಯ ಕರ್ನಾಟಕದ ದಾವಣಗೆರೆ,ಚಿತ್ರದುರ್ಗದಿಂದ, ಕಲ್ಯಾಣ ಕರ್ನಾಟದಲ್ಲಿ ಪಕ್ಷ ಸಂಘಟನೆ ಮಾಡ್ತಿದ್ದೇನೆ. 2008, 2013 ರಲ್ಲಿ ಈ ಭಾಗದಲ್ಲಿ 20 ಕ್ಕು ಹೆಚ್ಚು ಸ್ಥಾನ ಗೆದ್ದಿದ್ವಿ. ಆದ್ರೆ ಈ ಬಾರಿ ಹೆಚ್ಚು ಸ್ಥಾನ ಗೆದ್ದಿಲ್ಲ. 2024 ಲೋಕಸಭೆ ಚುನಾವಣೆಯಲ್ಲೂ ಎಲ್ಲಾ ಕಡೆ ಸೋಲು ಕಂಡಿದ್ದೇವೆ. ಹೀಗಾಗಿ ಪಾರ್ಟಿ ಜವಾಬ್ದಾರಿ ಕೊಟ್ಟು,ಪಕ್ಷ ಸಂಘಟನೆಗೆ ಸೂಚಿಸಿದೆ. ಹೀಗಾಗಿ ಎಲ್ಲಿ ನಿಲ್ಲಬೇಕು ಅನ್ನೋದಿಲ್ಲ. ಪಕ್ಷ ಸಂಘಟನೆ ಮಾಡಲಾಗ್ತಿದೆ. 2028 ಕ್ಕೆ ಬಿಜೆಪಿಗೆ ಒಳ್ಳೆ ವಾತಾವರಣ ಇದೆ. ಜನ ಕೂಡ ಬಿಜೆಪಿ ಬಗ್ಗೆ ಒಲವು ಹೊಂದಿದ್ದಾರೆ. ಇಲ್ಲಿ ಬಿಜೆಪಿ ಮಾಜಿ ಶಾಸಕ ಪ್ರತಾಪ್ ಗೌಡ ಇದ್ದಾರೆ. ಈ ಹಿಂದಿನಿಂದಲೂ ಈ ಭಾಗದ ನಾಯಕರು ಗೊತ್ತು ಎಂದ ಅವರು ಯಾರಿಗೆ ಟಿಕೆಟ್ ಕೊಡಬೇಕು ಅನ್ನೋದು ಹೈಕಮಾಂಡ್ ವಿಚಾರ.ಈ ಜಿಲ್ಲೆಯಲ್ಲಿ ಉಸ್ತುವಾರಿ ಆಗಿ ಕೆಲಸ ಮಾಡಿದ್ದೇನೆ ಎಂದಿದ್ದಾರೆ.











