ಮನೆ Latest News ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರಕ್ಕೆ ಕ್ಲಾರಿಟ್ಟ ಕೊಟ್ಟ ಸಚಿವ ಜಮೀರ್ ಅಹ್ಮದ್

ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರಕ್ಕೆ ಕ್ಲಾರಿಟ್ಟ ಕೊಟ್ಟ ಸಚಿವ ಜಮೀರ್ ಅಹ್ಮದ್

0

ಬೆಂಗಳೂರು: ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಜಮೀರ್ ಅಹ್ಮದ್ ಕ್ಲಾರಿಟ್ಟ ಕೊಟ್ಟಿದ್ದಾರೆ.

ನಾಮಪತ್ರ ಸಲ್ಲಿಕೆಯಿಂದ ದೂರ ಉಳಿದ ವಿಚಾರದ ಬಗ್ಗೆ ಮಾತನಾಡಿದ ಅವರು ನಾನು ನಾಮಪತ್ರ ಸಲ್ಲಿಕೆಗೆ ಹೋಗಬೇಕಿತ್ತು. ಹೋಗಬೇಕು ಎಂದು ಸಿಎಂ ಹೇಳಿದ್ದರು. ಆದರೆ ಸದನದಲ್ಲಿ ಪ್ರಶ್ನೋತ್ತರ ಕಲಾಪವಿತ್ತು. ಇದು ಮುಂಚೆಯೇ ಇತ್ತು, ಹಾಗಾಗಿ ಹೋಗಲು ಸಾಧ್ಯವಾಗಿಲ್ಲ. ಪ್ರಚಾರಕ್ಕೆ ನಾವು ಹೋಗುತ್ತೇವೆ.ಹೋಗಿ ಗೆಲ್ಲಿಸಿಕೊಂಡು ಬರುತ್ತೇವೆ. ನಾವೇ ಗೆಲ್ಲುತ್ತೇವೆ ಎಂದಿದ್ದಾರೆ.

ಸ್ಥಳೀಯವಾಗಿ ಅಲ್ಪಸಂಖ್ಯಾತ ಮುಖಂಡರ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಶಾಮನೂರು ಅಜ್ಜನವರು ನಿಧನ ಆದ ಮೇಲೆ ಟಿಕೆಟ್ ಕೇಳಿದ್ದು ನಿಜ. 85 ಸಾವಿರ ಅಲ್ಪಸಂಖ್ಯಾತರ ಮತಗಳಿವೆ. ಟಿಕೆಟ್ ಕೊಡಿ ಎಂದು ಕೇಳಿದ್ದೇವು.ಆದರೆ ಮೊದಲಿಂದಲೂ ಪದ್ದತಿಯಿದೆ. ಯಾರು ನಿಧನ ಆಗಿದ್ದಾರೆ ಅವರ ಕುಟುಂಬಕ್ಕೆ ಟಿಕೆಟ್ ಕೊಡುವ ಪದ್ದತಿಯಿದೆ. ಇದರ ಬಗ್ಗೆ ಸಿಎಂ, ಡಿಸಿಎಂ, ಸುರ್ಜೇವಾಲ ಮಾತಾಡಿದ್ದಾರೆ.ಆದರೆ ಮೊದಲಿಂದಲೂ ಪದ್ದತಿ ನಡೆದು ಬಂದಿದೆ ಎಂದು ಟಿಕೆಟ್ ಕೊಟ್ಟಿದ್ದಾರೆ. ಮುಂದಿನ ಜನರಲ್ ಎಲೆಕ್ಷನ್ ನಲ್ಲಿ ಪರಿಗಣಿಸುವ ಎಂದು ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಎಸ್. ಎಸ್ ಮಲ್ಲಿಕಾರ್ಜುನ , ಪ್ರಭಾ ಮಲ್ಲಿಕಾರ್ಜುನ ಆಹ್ವಾನ ಕೊಟ್ಟಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಮೊನ್ನೆ ನಾವೆಲ್ಲರೂ ಜೊತೆಯಲ್ಲಿ ಇದ್ದೇವು.ಸಿಎಂ ಅವರು ಕರೆದಿದ್ದರು.ಪ್ರಶ್ನೋತ್ತರ ಇದ್ದ ಕಾರಣ ಹೋಗಿಲ್ಲ. ನಾನು ಐದು ದಿನಗಳ ಕಾಲ ಅಲ್ಲೇ ಇರುತ್ತೇನೆ.ಗೆಲ್ಲಿಸಿಕೊಂಡು ಬರುತ್ತೇನೆ ಎಂದ ಜಮೀರ್ ಅಹ್ಮದ್ ಹೇಳಿದ್ದಾರೆ.

ಡಿಕೆಶಿ ಪರವಾಗಿ ಪ್ರಣಾವನಂದ ಸ್ವಾಮೀಜಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಡಿಕೆಶಿ ಅವರು ಸಿಎಂ ಆಗಬೇಕು ಎಂದಿದ್ದಾರೆ. ಆದ್ದರಿಂದ ಡಿಕೆಶಿಯವರನ್ನ ನೀವು ಕೇಳಬೇಕು. ಬಜೆಟ್ ಬಗ್ಗೆ ಮಾತಾಡಿದರೇ ಸಿಎಂ ಅವರನ್ನ ಕೇಳಿ ಎಂದ್ಹೇಳಿ ಜಮೀರ್ ಹೊರಟು ಹೋಗಿದ್ದಾರೆ.