ಮನೆ Latest News ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಹಳ ಕಠಿಣವಾದ ತೀರ್ಮಾನ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಹಳ ಕಠಿಣವಾದ ತೀರ್ಮಾನ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ದಾವಣಗೆರೆ, ಬಾಗಲಕೋಟೆ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಹಳ ಕಠಿಣವಾದ ತೀರ್ಮಾನ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ದಾವಣಗೆರೆ ಹಾಗೂ ಬಾಗಲಕೋಟೆ ಉಪಚನಾವಣೆ ಕಾಂಗ್ರೆಸ್ ಅಭ್ಯರ್ಥಿಗಳ ಘೋಷಣೆಯಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಬಹಳ ಕಠಿಣವಾದಂತಹ ತೀರ್ಮಾನ. ಎರಡು ಸೀಟುಗಳು ಕಾಂಗ್ರೆಸ್ ಪಕ್ಷ ಗೆದ್ದಿದೆ. ಈ ಬಾರಿಯೂ ನಾವು ಗೆಲ್ಲಬೇಕು. ಎರಡು ಕಡೆ ಕುಟುಂಬದವರು ಟಿಕೆಟ್ ಕೇಳಿದ್ರು. ಕಾರ್ಯಕರ್ತರು ಬೇರೆ ಅಭ್ಯರ್ಥಿಗೆ ಕೊಡಬೇಕಂತ ಒತ್ತಾಯ ಮಾಡ್ತಿದ್ರು. ಎಲ್ಲವನ್ನ ಬಹಳ ಎಚ್ಚರಿಕೆಯಿಂದ ಹೈಕಮಾಂಡ್ ತೀರ್ಮಾನ ಮಾಡಿದೆ. ಬಾಗಲಕೋಟೆಯಲ್ಲಿ ಮೇಟಿ ಪುತ್ರ ಅವರಿಗೆ ಕೊಟ್ಟಿದ್ದಾರೆ. ದಾವಣಗೆರೆಯಲ್ಲಿ ಮಲ್ಲಿಕಾರ್ಜುನ ಪುತ್ರ ಅವರಿಗೆ ಟಿಕೆಟ್ ಕೊಡಲಾಗಿದೆ. ಇದು ಸುಲಭವಾದ ತಿರ್ಮಾನ ಆಗಿರಲಿಲ್ಲ. ಹೈಕಮಾಂಡ್ ತೀರ್ಮಾನ ಆಗಿದೆ. ಹೈಕಮಾಂಡ್ ತೀರ್ಮಾನಕ್ಕೆ ನಾವೆಲ್ಲಾ ಕೆಲಸ ಮಾಡಬೇಕು, ಅವರಿಬ್ಬರನ್ನ ಗೆಲ್ಲಿಸಬೇಕು. ಅನೇಕ ವಿಷಯಗಳು ಅಲ್ಲಿ ನಡೆಯಬಹುದು. ಅಲ್ಲಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು  ಸಿಎಂ‌, ಕೆಪಿಸಿಸಿ ಅಧ್ಯಕ್ಷರ ಸೂಚನೆಯಂತೆ ಚುನಾವಣೆ ನಡೆಸಿ ಗೆಲ್ಲಿಸಬೇಕು ಎಂದಿದ್ದಾರೆ.

ರಾಮಚಂದ್ರರಾವ್ ರ ವೈರಲ್ ವೀಡಿಯೋ ಅಸಲಿ ಎಂಬ FSL ವರದಿ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಪಾರ್ಟ್ಮೆಂಟಲ್ ಎನ್ ಕ್ವೈರಿ ಮಾಡಿ, ಅವರು ಏನು ಹೇಳ್ತಾರೆ ಅದರ ಮೇಲೆ ಸರ್ಕಾರ ತೀರ್ಮಾನ ಮಾಡುತ್ತೆ. ಡಿಪಾರ್ಟ್ಮೆಂಟ್ ನಿಂದ ಸರ್ಕಾರಕ್ಕೆ ವರದಿ ಕೊಡಬೇಕು ಅದರ ಮೇಲೆ ತೀರ್ಮಾನ ಆಗುತ್ತೆ. ಅವರು AI ವಿಡಿಯೋ ಅಂತ ಹೇಳಿದ್ರು ಅದಕ್ಕೆ FSLಗೆ ಕೊಟ್ಟಿದ್ವಿ. ಡಿಪಾರ್ಟ್ಮೆಂಟಲ್ ವರದಿ ಸರ್ಕಾರಕ್ಕೆ ಕೊಡಬೇಕು .ಅದರ ಆಧಾರದ ಮೇಲೆ ನಾವು ತೀರ್ಮಾನ ತಗೊತೀವಿ ಎಂದ ಅವರು, ದಾವಣಗೆರೆ ದಕ್ಷಿಣ ಟಿಕೆಟ್ ಕಗ್ಗಂಟು ಬಗ್ಗೆ ಮಾತನಾಡಿ ಬೈ ಎಲೆಕ್ಷನ್ ನಲ್ಲಿ ಇಂತಹ ಸಮಸ್ಯೆ ಬಹಳಷ್ಟು ಬಂದಿದೆ. ನಾನು ಅಧ್ಯಕ್ಷನಾಗಿದ್ದಾಗಲು ಇಂತಹ ಸಮಸ್ಯೆ ಬಗೆಹರಿಸಿದ್ದೀವಿ. ಅಂತಿಮವಾಗಿ ಯಾರಿಗಾದ್ರು ಟಿಕೆಟ್ ಕೊಡಲೇಬೇಕಲ್ವಾ. ಸಾಧಕ ಬಾದಕಗಳನ್ನು ನೋಡಿ ಹೈಕಮಾಂಡ್ ನವರು ತೀರ್ಮಾನ ಮಾಡ್ತಾರೆ. ಮೇಟಿ ಅವರದು ಅಷ್ಟೇ ಫ್ಯಾಮಿಲಿ ವರ್ಸಸ್ ಇತರರು ಆಗಿದೆ. ಈಗಾಗಲೇ ಲೀಡರ್ಸ್ ಗಳನ್ನು ಕರೆದು ಮಾತನಾಡಿದ್ದಾರೆ. ಉಸ್ತುವಾರಿ ಗಳು, ಅಧ್ಯಕ್ಷರು, ಸಿಎಂ ಎಲ್ಲಾ ಮಾತನಾಡಿದ್ದಾರೆ ಎಂದು ಹೇಳಿದ್ದಾರೆ.