ಬೆಂಗಳೂರು; ಇಂದು ಅಥವಾ ನಾಳಿದ್ದು ಟಿಕೆಟ್ ಘೋಷಣೆ ಆಗಬಹುದು ಎಂದು ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ಹೇಳಿದ್ದಾರೆ.
ದಾವಣಗೆರೆ ಟಿಕೆಟ್ ಆಯ್ಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಯಾರ್ಯಾರು ಆಕಾಂಕ್ಷೆ ಇದ್ದಾರೆ ಎಲ್ಲರೂ ಹೋಗಿ ಸಿಎಂ, ಡಿಸಿಎಂ, ಸುರ್ಜೇವಾಲಾ, ಖರ್ಗೆ ಭೇಟಿ ಆಗಿದ್ದಾರೆ, ಕೇಳಿದ್ದಾರೆ. ನಮ್ಮ ಅಬ್ಸವರ್ಸ್ ಹೋಗಿದ್ದಾರೆ, ಸರ್ವೇ ಮಾಡಿದ್ದಾರೆ. ಎಲ್ಲಾ ಉಸ್ತುವಾರಿ ಗೆ ವರದಿ ಸಲ್ಲಿಸಿದ್ದಾರೆ, ಅವರು ಹೈಕಮಾಂಡ್ ಗೆ ವರದಿ ಸಲ್ಲಿಸಿರಬಹುದು. ಇಂದು ಸಂಜೆ ಅಥವಾ ನಾಳಿದ್ದು ಟಿಕೆಟ್ ಘೋಷಣೆ ಆಗಬಹುದು. ಎಲ್ಲಾ ಸಮುದಾಯದವರು ಹೋಗಿ ಮನವಿ ಮಾಡಿದ್ದಾರೆ, ಲಾಭಿ ಮಾಡಿದ್ದಾರೆ.ಅದನ್ನ ಸರ್ವೇ ಮಾಡಿ ವರದಿ ಸಲ್ಲಿಸಿದ್ದಾರೆ. ಎರಡೂ ಕಡೆ ನಾವು ಗೆಲ್ಲಬೇಕು, ಅಂಥಾ ಅಭ್ಯರ್ಥಿ ಯನ್ನ ಆಯ್ಕೆ ಮಾಡಬೇಕು.ನಾಳೆ ಸಂಜೆ ಯೊಳಗೆ ಅಂತಿಮ ಆಗಬಹುದು ಎಂದಿದ್ದಾರೆ.
ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ಹಳೇ ಪಾರ್ಟಿ, ನ್ಯಾಷನಲ್ ಪಾರ್ಟಿ. ಏನೇ ತೀರ್ಮಾನ ಆದ್ರೂ ಒಂದು ಪ್ರಕ್ರಿಯೆ ಇದ್ದೇ ಇರುತ್ತದೆ. ಯಾರು ಯಾರಿಗೆ ಮಾತು ಕೊಟ್ಟರು ಅನ್ನೋದು ಅವರಿಗೆ ಮಾತ್ರ ಗೊತ್ತು. ರಾಹುಲ್ ಗಾಂಧಿ, ಖರ್ಗೆ, ಸುರ್ಜೇವಾಲಾ, ವೇಣುಗೋಪಾಲ್ ಸೇರಿ ಹೈಕಮಾಂಡ್ ಗೆ ಮಾತ್ರ ಗೊತ್ತು.ಬದಲಾವಣೆ ಬಗ್ಗೆ ಚರ್ಚೆ ಬೇಡ, ಎಲ್ಲಾ ಹೈಕಮಾಂಡ್ ತೀರ್ಮಾನ. ಪರಿಸ್ಥಿತಿ ಎಲ್ಲಾ ಅವರಿಗೆ ಗೊತ್ತಿದೆ. ಪದೇ ಪದೇ ಹೇಳೋದು ಬೇಕಾಗಿಲ್ಲ. ಪಾರ್ಟಿ ಚನ್ನಾಗಿ ಆಗಬೇಕು, ಅವರು ಮುಂದೆ ನಿರ್ಧಾರ ತೆಗೆದುಕೊಳ್ಳುತ್ತಾರೆ. ನಮ್ಮ ಕಡೆ ಬಹುಮತ ಇದೆ, ಕಾಂಗ್ರೆಸ್ ಸಿಎಂ ಇರೋದು, ಕಾಂಗ್ರೆಸ್ ಪಾರ್ಟಿ ನೇ ಇರೋದು ಎಂದು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಬಗ್ಗೆ ವೇಣುಗೋಪಾಲ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಅವರು ಹೇಳಿದ್ದು ಸತ್ಯ, ದೇಶದಲ್ಲಿ ಬಿಜೆಪಿ ಅಧಿಕಾರ ಇರೋದು.ಆದ್ರೆ ನಮ್ಮ ಕಾಂಗ್ರೆಸ್ ಸಿಎಂ ಗಳ ಹೆಸರು ಗೊತ್ತು.ಸಿದ್ದರಾಮಯ್ಯ, ರೇವಂತ್ ರೆಡ್ಡಿ, ಸುಕ್ಕು ಅವರು ಗೊತ್ತು. ಪಾಪ್ಯೂಲರ್, ಪವರ್ ಫುಲ್ ಸಿಎಂ ಇದ್ದಾರೆ ನಮ್ಮವರು.ಎಲ್ಲಾ ಗ್ಯಾರಂಟಿ ಎಫೆಕ್ಟ್ ಆಗೋ ರೀತಿ ಇಂಪ್ಲಿಮೆಂಟ್ ಮಾಡಿದ್ದಾರೆ.ಮೂವರು ಸಿಎಂ ಪಾಪ್ಯುಲರ್.ಯಾರಿಗೆ ಏನೂ ಹೇಳಿಸಿಲ್ಲ, ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತದೆ, ಹೈಕಮಾಂಡ್ ಏನೂ ನಿರ್ಧಾರ ತೆಗೆದುಕೊಳ್ಳುತ್ತದೆ ಅನ್ನೋದು ಯಾರಿಗೂ ಗೊತ್ತಿಲ್ಲ ಎಂದಿದ್ದಾರೆ.










