ಮನೆ Latest News ಸಿದ್ದರಾಮಯ್ಯಗೆ ಮರೆವು ಜಾಸ್ತಿಯಾಗುತ್ತಿದೆ,ಅವರಿಗೆ ಏನು ಒತ್ತಡ ಇದೆಯೋ ಏನೋ?; ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್...

ಸಿದ್ದರಾಮಯ್ಯಗೆ ಮರೆವು ಜಾಸ್ತಿಯಾಗುತ್ತಿದೆ,ಅವರಿಗೆ ಏನು ಒತ್ತಡ ಇದೆಯೋ ಏನೋ?; ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿಕೆ

0

ಬೆಂಗಳೂರು: ಸಿದ್ದರಾಮಯ್ಯಗೆ ಮರೆವು ಜಾಸ್ತಿಯಾಗುತ್ತಿದೆ,ಅವರಿಗೆ ಏನು ಒತ್ತಡ ಇದೆಯೋ ಏನೋ?ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.

ಸಿಎಂ ಕಚೇರಿಯಲ್ಲಿ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಗಳ ಆಯ್ಕೆ  ಕುರಿತು ಚರ್ಚೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯಗೆ ಮರೆವು ಜಾಸ್ತಿಯಾಗುತ್ತಿದೆ. ಅವರಿಗೆ ಏನು ಒತ್ತಡ ಇದೆಯೋ ಏನೋ?. ಚುನಾವಣಾ ವಿಚಾರವನ್ನು ಸಿಎಂ ತಮ್ಮ ವಿಧಾನಸೌಧದ ಕಚೇರಿಯಲ್ಲಿ ಚರ್ಚೆ ಮಾಡಿದ್ದು ತಪ್ಪು.ತಮ್ಮ ಪದವಿಯನ್ನು ಸಿಎಂ ಅವರೇ ದುರ್ಬಳಕೆ ಮಾಡಿಕೊಂಡಿದ್ದಾರೆ. ಚುನಾವಣಾ ವಿಚಾರ ಮಾತಾಡಲು ಕೆಪಿಸಿಸಿ ಅಧ್ಯಕ್ಷರಿದ್ದಾರೆ, ಅವರ ಪಕ್ಷದ ಕಚೇರಿ ಇದೆ. ಸಿಎಂ ಕೊಠಡಿಯಲ್ಲಿ ಆ ಚರ್ಚೆ ನಡೆದಿದ್ದು ತಪ್ಪು ಎಂದಿದ್ದಾರೆ.

ಜಿಬಿಎ ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಮೂರು ದಿನ ಕಾಲಾವಕಾಶ ಹೆಚ್ಚಿಸಲು ಹೇಳಿದ್ದೇವೆ. ಈಗಾಗಲೇ ಮೂರು ದಿನ ಕಳೆದು ಹೋಗಿದೆ. ವೆಬ್ ಸೈಟ್ ಓಪನ್ ಆಗಿದ್ದೇ ನಿನ್ನೆ. ಅದೇನೋ ಇಂದು ಸರಿ ಮಾಡಿದ್ದೇವೆ ಎಂದಿದ್ದಾರೆ. ಹೀಗಾಗಿ ಪ್ರತಿಯೊಬ್ಬರೂ ನಿಮ್ಮ ವೋಟರ್ ಲಿಸ್ಟ್ ಚೆಕ್ ಮಾಡಿ. ಒಮ್ಮೆ ಡಿಲೀಟ್ ಆದರೆ ಮತ್ತೆ ಇರುವುದಿಲ್ಲ ಎಂದು ತಿಳಿಸಿದ್ದಾರೆ.

ಕೋಗಿಲು ಅಕ್ರಮ ನಿವಾಸಿಗಳಿಗೆ ಹಕ್ಕುಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ಕೋಗಿಲು ಜಾಗ ಕಸ ವಿಲೇವಾರಿಗೆ ಮೀಸಲಾಗಿದ್ದ ಜಾಗ. ಬಾಂಗ್ಲಾದೇಶದವರು ಬಂದು ಅಲ್ಲಿ ಟೆಂಟ್ ಹಾಕಿಕೊಂಡಿದ್ದರು. ಇದಕ್ಕೆ ಬಿಜೆಪಿ ಹೋರಾಟ ಮಾಡಿತ್ತು. ಸರ್ಕಾರ ಆತುರಾತುರವಾಗಿ ಅವರ ಕೇಂದ್ರ ನಾಯಕರನ್ನು ಮೆಚ್ಚಿಸಲು ಅವರೆಲ್ಲರನ್ನೂ ರೆಡಿ ಮಾಡಿತ್ತು.ಕಸ ವಿಲೇವಾರಿಗೆ ಮಂಜೂರಾಗಿದ್ದನ್ನು ಸೈಟ್ ಹೇಗೆ ಕೊಡಲು ಬರುತ್ತದೆ?.ಬಾಂಗ್ಲಾದೇಶದವರಿಗೆ ಕೊಡುವುದಾದರೆ ಇದು ಮತ್ತೊಂದು ಹೋರಾಟ ಆಗುತ್ತದೆ. ನಿನ್ನೆ ಡಿಜಿಪಿ 250 ಬಾಂಗ್ಲಾದೇಶದವರನ್ನು ಗಡಿಪಾರು ಅಂತಾ ಹೇಳಿದ್ದು ಯಾರನ್ನು?. ನಾವು ಅಂದು ಬಾಂಗ್ಲಾದೇಶದವರು ಇದ್ದಾರೆ ಎಂದು ಹೇಳಿದ್ದು ಸತ್ಯ ಆಗಿದೆ. ಅಲ್ಲಿ ಸೈಟ್ ಕೊಟ್ಟರೆ ಸರ್ಕಾರ ಆಪಾದಿತವಾಗುತ್ತದೆ. ಬಿಜೆಪಿ ಮತ್ತೆ ಹೋರಾಟ ಮಾಡುತ್ತದೆ ಎಂದಿದ್ದಾರೆ.