ಬೆಂಗಳೂರು; ವಿಧಾನಸಭೆಯಲ್ಲಿ ಕೆಪಿಎಸ್ ಸಿ ಅಕ್ರಮದ ಚರ್ಚೆಯಾಯಿತು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ಆರ್.ಅಶೋಕ್ ಆಕ್ರೋಶ ಹೊರ ಹಾಕಿದ್ದಾರೆ.
ಬೇರೆ ಬೇರೆ ದೊಡ್ಡ ರಾಜ್ಯಗಳಲ್ಲಿ ಕೆಪಿಎಸ್ ಸಿ ಸದಸ್ಯರ ಸಂಖ್ಯೆ 6-8 ಮಂದಿ ಇದ್ದಾರೆ. ನಮ್ಮ ರಾಜ್ಯದ ಕೆಪಿಎಸ್ ಸಿಯಲ್ಲಿ 18 ಜನ ಇದ್ದಾರೆ. ಹೆಗ್ಗಣಗಳ ರೀತಿ ಇದ್ದಾರೆ. ಹೆಗ್ಗಣಗಳು ಜಾಸ್ತಿ ಇದ್ದರೆ ಆ ಸಂಸ್ಥೆಯ ಸ್ಥಿತಿ ಏನಾಗುತ್ತೆ?.ಹೆಗ್ಗಣಗಳ ರೀತಿ ಕೆಪಿಎಸ್ ಸಿ ಇದೆ. ಹೆಗ್ಗಣಗಳು ಜಾಸ್ತಿ ಆಗುತ್ತಾ ಇದ್ದ ಹಾಗೇ ಪಾಲುದಾರಿಕೆನೂ ಹೆಚ್ಚಾಗುತ್ತದೆ. ಕಲ್ಯಾಣ ಕರ್ನಾಟಕದ ಜನರು ಹೆಚ್ಚಿನ ಜನ ಐಎಎಸ್, ಕೆಎಎಸ್ ಗಳಾಗಬೇಕು ಎಂದು ಅಲ್ಲಿ ಒಂದು ಸಂಸ್ಥೆ ಮಾಡಲಾಗಿದೆ. ಅಲ್ಲಿನ ವಿದ್ಯಾರ್ಥಿಗಳಿಗೆ 100 ಐಎಎಸ್, 400 ಕೆಎಎಸ್ ರಂತೆ ಒಟ್ಟು 500 ಜನಕ್ಕೆ ತರಬೇತಿ ಕೊಡಬೇಕು ಎಂದು ಆದೇಶ ಮಾಡಿತು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಆದೇಶ ಹೊರಡಿಸಿ .ಶಿಷ್ಯ ವೇತನಕ್ಕಾಗಿ ಬಯೋ ಮೆಟ್ರಿಕ್ ಶಿಷ್ಯ ವೇತನವನ್ನು ಪ್ರತಿ ಮಾಹೆ ತರಬೇತಿ ಕೇಂದ್ರ ಸಲ್ಲಿಸುವ ಹಾಜರಾತಿ ಅನ್ವಯ ಪಾವತಿಸಲಾಗುವುದು. ಆದರೆ ತರಬೇತಿ ಅವಧಿಯಲ್ಲಿ ಯಾವುದೇ ವಸತಿ ಸೌಲಭ್ಯ ಇರುವುದಿಲ್ಲ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ.ಬಳಿಕ ಡಿಸಿ ಆದೇಶ ಹೊರಡಿಸಿ ದಾಖಲಾತಿ ಪರಿಶೀಲನೆ ಬಳಿಕ ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಕೇಂದ್ರ ಕಲಬುರ್ಗಿ ನಗರದ ವಾಜಪೇಯಿ ವಸತಿ ಬಡಾವಣೆಯಲ್ಲಿ ತರಬೇತಿಯನ್ನು ಉತ್ತಮ ಸಂಸ್ಥೆಯಿಂದ ನೀಡಲಾಗುವುದು. ತರಬೇತಿಯು ಉಚಿತವಾಗಿರಲಿದೆ. ಅಭ್ಯರ್ಥಿಗಳಿಗೆ ಯಾವುದೇ ವಸತಿ ಸೌಲಭ್ಯ, ಶಿಷ್ಯ ವೇತನ ಇರುವುದಿಲ್ಲ ಎಂದು ಆದೇಶ ಹೊರಡಿಸಿದ್ದಾರೆ. ಜಿಲ್ಲಾಧಿಕಾರಿಗೆ ಮಾನ ಮರ್ಯಾದೆ ಇದೆಯಾ?. ಅವನು ಯಾರು ದೊಣ್ಣೆ ನಾಯಕ?. ಅವನ್ನದ್ದೇ ಆದ ಒಂದು ಆದೇಶ ಹೊರಡಿಸುತ್ತಾನೆ. ಸರ್ಕಾರಿ ಆದೇಶ ಇದ್ದರೂ ಡಿಸಿ ಪ್ರತ್ಯೇಕ ಆದೇಶ ಹೇಗೆ ಹೊರಡಿಸುತ್ತಾರೆ ಪ್ರಶ್ನೆ ಮಾಡಿದ್ದಾರೆ.
ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ ಆದೇಶ ಹೊರಡಿಸಿ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ 12 ತಿಂಗಳ ವಸತಿ ಸಹಿತ ತರಬೇತಿ ನೀಡುತ್ತಾರೆ. ಇದೇ ಸಮುದಾಯ ಎಸ್ ಎಸ್ ಸಿ ಹಾಗೂ ಆರ್ ಆರ್ ಬಿ ಅಭ್ಯರ್ಥಿಗಳಿಗೆ ಮೂರು ತಿಂಗಳ ಕೋಚಿಂಗ್ ಹಾಗೂ ಪ್ರತಿ ಮಾಹೆ 6000 ರೂ.ಶಿಷ್ಯ ವೇತನ ನೀಡಲು ನಿರ್ಧರಿಸುತ್ತದೆ. ಅಭ್ಯರ್ಥಿಗಳಿಗೆ ಏಳು ತಿಂಗಳ ಅವಧಿಗೆ ಕೋಚಿಂಗ್ ಸಹಿತ ಬೆಂಗಳೂರು ಸಂಸ್ಥೆಗೆ 10000 ರೂ. ಜಿಲ್ಲಾ ಸಂಸ್ಥೆಗಳಿಗೆ 8000 ರೂ. ಶಿಷ್ಯ ವೇತನ ನೀಡಲು ನಿರ್ಧರಿಸುತ್ತಾರೆ.ಎಸ್ ಸಿ ಎಸ್ ಟಿ ಅಭ್ಯರ್ಥಿಗಳಿಗೆ ಶಿಷ್ಯವೇತನ ಇಲ್ಲ. ಅಲ್ಪಸಂಖ್ಯಾತರಿಗೆ ಶಿಷ್ಯ ವೇತನ ಇದೆ. ಇದು ಎಷ್ಟು ಸರಿ ಇದೆ ಎಂದಿದ್ದಾರೆ.
ತರಬೇತಿಗೆ 500 ಜನ ಆಯ್ಕೆ ಆದ ಮೇಲೆ ತರಬೇತಿಗೆ ಬಂದಿರುವವರು ಕೇವಲ 40-50 ಜನ ಮಾತ್ರ. ಸರ್ಕಾರ ಐಎಎಸ್ ಹಾಗೂ ಕೆಎಸ್ಎಸ್ ಪರೀಕ್ಷೆಗೆ ತರಬೇತಿ ನೀಡುವ ಸಂಸ್ಥೆಗಳಲ್ಲೂ ಅಕ್ರಮ ಆಗುತ್ತಿದೆ.ಈ ಬಗ್ಗೆನೂ ಸರ್ಕಾರ ಗಮನಹರಿಸಬೇಕು ಎಂದು ಒತ್ತಾಯಿಸಿದ್ದಾರೆ.











