ಬೆಂಗಳೂರು; ನಾವು 3-4 ಬಾರಿ ಗೆದ್ದವರು ನಮ್ಮ ಹಕ್ಕು ಹೇಳುವುದರಲ್ಲಿ ತಪ್ಪೇನು ಎಂದುವಿಧಾನಸೌಧದಲ್ಲಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ನಾಳೆ 3-4 ಬಾರಿ ಗೆದ್ದ ಶಾಸಕರು ಸಭೆ ಸೇರುವ ವಿಚಾರದ ಬಗ್ಗೆ ಮಾತನಾಡಿದ ಅವರು ನಾಳೆ ಹಿರಿಯ ಶಾಸಕರು ಸಭೆ ಮಾಡ್ತಾ ಇದ್ದೇವೆ. ಸಚಿವ ಸ್ಥಾನ ಕೇಳಲು ಸಭೆ ಸೇರುತ್ತಿದ್ದೇವೆ.ಮೊದಲ ಬಾರಿ ಗೆದ್ದವರೆ ಸಚಿವ ಸ್ಥಾನ ಕೇಳುತ್ತಿದ್ದಾರೆ. ದೆಹಲಿಗೆ ಹೋಗಿ ಸಚಿವ ಸ್ಥಾನ ಕೇಳಿದ್ದಾರೆ. ನಾವು 3-4 ಬಾರಿ ಗೆದ್ದವರು ನಮ್ಮ ಹಕ್ಕು ಹೇಳುವುದರಲ್ಲಿ ತಪ್ಪೇನು? ಹಾಗಾಗಿ ಸಭೆ ಸೇರುತ್ತೇವೆ, ಸಿಎಂ, ಡಿಸಿಎಂ ಹೇಳುತ್ತೇವೆ.ದೆಹಲಿಗೂ ಹೋಗಿ ಹೈಕಮಾಂಡ್ ನಾಯಕರ ಭೇಟಿ ಮಾಡ್ತೇವೆ ಎಂದಿದ್ದಾರೆ.
ಕಮರ್ಷಿಯಲ್ LPG ಗ್ಯಾಸ್ ಕೊರತೆ ವಿಚಾರದ ಬಗ್ಗೆ ಮಾತನಾಡಿದ ಅವರು ಇದಾಗಲೇ ಎಲ್ಲಾ ಹೋಟೆಲ್ ಗಳಿಗೂ ಗ್ಯಾಸ್ ಕೊರತೆಯಾಗಿವೆ. ಹೋಟೆಲ್ ಬಂದ್ ಮಾಡೋ ಎಚ್ಚರಿಕೆ ನೀಡಿದ್ದಾರೆ. ಹೋಟೆಲ್ ಗಳು ಬಂದ್ ಆದ್ರೆ ಸೀರಿಯಸ್ ಆಗಿ ಪರಿಣಾಮ ಬೀಳಲಿದೆ.ಹಾಗಾಗೀ ಕೂಡಲೇ ಕೇಂದ್ರ ಸರ್ಕಾರ ಮಧ್ಯಸ್ಥಿಕೆ ವಹಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕು.ಕೇವಲ ಹೋಟೆಲ್ ಅಲ್ಲ, ಆಸ್ಪತ್ರೆಗಳು, ಪಿಜಿಗಳು ಎಲ್ಲದಕ್ಕೂ ಸೂಕ್ತ ವ್ಯವಸ್ಥೆ ಆಗಬೇಕು.ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ ಗ್ಯಾಸ್ ಬೆಲೆ 650 ಇತ್ತು.ವರ್ಷಕ್ಕೆ 50 ಸಾವಿರ ಸಬ್ಸಿಡಿ ನೀಡ್ತಾ ಇದ್ವಿ.ಆದ್ರೆ ಇವರು ಬಂದ ನಂತರ ಯಾವುದೇ ಬೆಲೆ ಕಡಿಮೆ ಆಗಿಲ್ಲ.ಭಾರತ ದೇಶದಲ್ಲಿ ಗ್ಯಾಸ್ ಉತ್ಪಾದನೆ ಮಾಡೋದ್ರಲ್ಲಿ ವಿಫಲಗೊಂಡಿದೆ. ಎಲ್ಲವನ್ನ ಆಮದು ಮೇಲೆಯೇ ಡಿಫೆಂಡ್ ಆಗಿದ್ದೇವೆ, ಇದಕ್ಕೆ ಕೇಂದ್ರವೇ ನೇರ ಹೊಣೆ.ಕೂಡಲೇ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೊ ಕೆಲಸ ಆಗಬೇಕು ಎಂದಿದ್ದಾರೆ.











