ಮಂಡ್ಯ: ಮೂರೂವರೆ ಗಂಟೆ ಬಜೆಟ್ನ್ನು ಖುಷಿಯಿಂದ ಓದಿಲ್ಲ, ಪಾಪ ಒಂದೊಂದು ಪದ ಬಳಕೆ ಮಾಡಲು ಶ್ರಮ ಪಡುತ್ತಿದ್ದರು ಎಂದು ಮಂಡ್ಯದಲ್ಲಿ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಮಂಡ್ಯದ ವಿಸಿ ಫಾರಂನಲ್ಲಿ ಸಿದ್ದರಾಮಯ್ಯ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ದಾಖಲೆ ಬಜೆಟ್ನ್ನು ಮಂಡನೆ ಮಾಡಿದ್ದಾರೆ. ಇದನ್ನ ದಾಖಲೆ ಬಜೆಟ್ ಅಲ್ಲ ಅಂತ ಹೇಳಲು ಆಗಲ್ಲ. ಆದ್ರೆ ಈ ದಾಖಲೆ ಬಜೆಟ್ ಹೊಡೆತ ಜನರ ಮೇಲೆ ಹೇಗೆ ಬೀಳುತ್ತೆ ನೋಡಬೇಕು. ಆರ್ಥಿಕ ತಜ್ಞರು ಸಹ ಈ ಬಗ್ಗೆ ಹೇಳಿದ್ದಾರೆ.ಬಜೆಟ್ ನಿಂದ ಸಾಕಷ್ಟು ಸಮಸ್ಯೆ ಆಗುತ್ತೆ ಎಂದು ಹೇಳಿದ್ದಾರೆ ಎಂದಿದ್ದಾರೆ.
ನಾವು ಜಿಡಿಪಿ ಗ್ರೋತ್ 25% ಒಳಗೆ ಇರಬೇಕು, ಈಗ ಅದನ್ನು ಮೀರಿದೆ. ಇದನ್ನು ಬಜೆಟ್ನಲ್ಲಿ ಮರೆ ಮಾಚಿದ್ದಾರೆ.ಇದರ ಎಫೆಕ್ಟ್ ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ. ಕೇಂದ್ರ ಸರ್ಕಾರ ಮೇಲೆ ಟೀಕೆ ಬಿಟ್ಟರೆ ಇವರ ಶ್ರಮ ಏನಿದೆ? ಎಂದು ಪ್ರಶ್ನಿಸಿದ ಅವರು ಹಿಂದಿನ ಸರ್ಕಾರದಲ್ಲಿ ತೀರ್ಮಾನ ಆಗಿದ್ದನ್ನೇ ಹೇಳಿದ್ದಾರೆ. ದುಡ್ಡನ್ನು ಬಜೆಟ್ ನಲ್ಲಿ ಇಡದ ಯೋಜನೆಗಳನ್ನು ಘೋಷಣೆ ಮಾಡಿದ್ದಾರೆ.ಭರಪೂರ ಘೋಷಣೆಗಳನ್ನು ಮಾಡಿದ್ದಾರೆ.ಮೂರೂವರೆ ಗಂಟೆ ಬಜೆಟ್ನ್ನು ಖುಷಿಯಿಂದ ಓದಿಲ್ಲ.ಪಾಪ ಒಂದೊಂದು ಪದ ಬಳಕೆ ಮಾಡಲು ಶ್ರಮ ಪಡುತ್ತಿದ್ದರು.ಪಾಪ ಕನ್ನಡದಲ್ಲಿ ಎಂಎಲ್ಎಗಳಿಗೆ ಸಂಧಿ ಪಾಠ ಮಾಡ್ತಾ ಇದ್ದರು.ನಿನ್ನೆ ಓದುವಾಗ ಶ್ರಮ ನೋಡಿದಾಗ ಜನಗಳ ಪರಿಸ್ಥಿತಿ ಏನಾಗುತ್ತೆ ಅನ್ನೋದನ್ನು ನೋಡಬೇಕು ಎಂದು ತಿಳಿಸಿದ್ದಾರೆ.









