ಬೆಂಗಳೂರು: ಸಿಎಂ ಸಿದ್ದರಾಮಯ್ಯ ಇವತ್ತು 17 ನೇ ಬಜೆಟ್ ಅನ್ನು ಮಂಡಿಸಿದ್ರು. ಬಳಿಕ ಸಿಎಂ ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಸಚಿವ ಭೈರತಿ ಸುರೇಶ್, ಎಂಸಿ ಸುಧಾಕರ್, ಬಸವರಾಜ್ ರಾಯರೆಡ್ಡಿ, ನಜೀರ್ ಅಹ್ಮದ್ ಉಪಸ್ಥಿತರಿದ್ದರು.
ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಇವತ್ತು ರಾಜ್ಯದ ಬಜೆಟ್ ಮಂಡಿಸಿದ್ದೇವೆ. ಈ ಮುಂಗಡ ಪತ್ರ ಕರ್ನಾಟಕ ರಾಜ್ಯದ ಅಭಿವೃದ್ಧಿ ಗೆ ಪೂರಕವಾಗಿದೆ. ನಾನು ಮಂಡಿಸಿರುವ ಬಜೆಟ್ ಗಾತ್ರ ೪,೪೮,೦೦೪ ಕೋಟಿ ಬಜೆಟ್ . ಕಳೆದ ಸಲ ೪.೦೯ ಲಕ್ಷದ ಬಜೆಟ್ ಗಾತ್ರ ಇತ್ತು. ಕಳೆದ ಸಲಕ್ಕಿಂತ ೩೮,೪೫೫ ಕೋಟಿ ಹೆಚ್ಚಾಗಿದೆ.. ೯.೦೪% ಹೆಚ್ಚಳವಾಗಿದೆ ಎಂದರು.
ಜಿಎಸ್ಟಿ ಹಣ ಸಿಕ್ಕಲ್ಲ.ಇದರಿಂದ ಗ್ರೋಥ್ ಕಡಿಮೆಯಾಗಿದೆ. ಇದರಿಂದ ೪% ಗ್ರೋತ್ ರೇಟ್ ಇಳಿಕೆಯಾಯಿತು. ಕೆಲ ರಾಜ್ಯಗಳು ಇವತ್ತೂ ಕೂಡ ಚೇತರಿಸಿಕೊಂಡಿಲ್ಲ. ಮೈನಸ್ ಗ್ರೋತ್ ಇದ್ದಾವೆ ಅನೇಕ ರಾಜ್ಯ ಗಳು. ಜಿಎಸ್ಟಿ ನಲ್ಲಿ ನಮಗೆ ಹೊಡೆತ ಬಿದ್ದರೂ ಕೂಡ ಜಿಎಸ್ಟಿ ಕಲೆಕ್ಷನ್ ನಲ್ಲಿ ನಾವು ಎರಡನೇ ಸ್ಥಾನದಲ್ಲಿದ್ದೇವೆ. ಮಹಾರಾಷ್ಟ್ರ ನಂಬರ್ ಒನ್ !ನಾವು ಎರಡನೇ ಸ್ಥಾನ. ನಮಗೆ ತೆರಿಗೆ ವಿಷ್ಯಕ್ಕೆ ೧೦ ಸಾವಿರ ಕೋಟಿ ಕಡಿಮೆಯಾಗಿದೆ. ಮುಂದೆ ೧೫ ಸಾವಿರ ಕೋಟಿ ಕಡಿಮೆ ಆಗುತ್ತೆ. ಕೇಂದ್ರ ಸರ್ಕಾರದ ಅಸಹಕಾರ ಮತ್ತು ಮಲತಾಯಿ ಧೋರಣೆ ಆಗಿದೆ ಎಂದು ಅಸಮಾಧಾನ ಹೊರ ಹಾಕಿದರು.
ನಾವು ಆದರೂ ಸಹ ವಿತ್ತೀಯ ಶಿಸ್ತು ಉಲ್ಲಂಘನೆ ಮಾಡಿಲ್ಲ. ಜಿಡಿಪಿ ಬೆಳವಣಿಗೆ ೮.೧೦ ಇದು.. ರಾಷ್ಟ್ರದ್ದು ೭.೪೦ ಇದೆ. ಕೇಂದ್ರಕ್ಕಿಂತ ನಾವು ಉತ್ತಮವಾಗಿದ್ದೇವೆ. ಎಲ್ಲಾ ಗ್ಯಾರಂಟಿ ಯೋಜನೆಗಳಿಗೆ ೫೨ ಸಾವಿರ ಕೋಟಿ ಖರ್ಚು ಮಾಡುತ್ತಿದ್ದೇವೆ. ಇಲ್ಲಿವರೆಗೂ ಐದು ಗ್ಯಾರಂಟಿಗಾಗಿ ೧,೨೧, ೫೯೧ ಲಕ್ಷ ಕೋಟಿ ಖರ್ಚು ಮಾಡಿದ್ದೇವೆ. ಜನರಿಗೆ ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದ ಅವರು ಮುಂದಿನ ವರ್ಷ ಫಿಸಿಕಲ್ ರೆಸ್ಪಾನ್ಸಿಬಲ್ ಆ್ಯಕ್ಟ್ ಪ್ರಕಾರ ಮೂರ ಮಾನದಂಡ ಇದ್ದಾವೆ. ಫಿಸಿಕಲ್ ಡಿಬಿಸಿ ಜಿಡಿಪಿಯ ೩% ಒಳಗೆ ಇರಬೇಕು. ನಮ್ಮ ಸಾಲ ಜಿಡಿಪಿಯ ೨೫% ಒಳಗೆ ಇರಬೇಕು. ನಮ್ಮದು ಮುಂದಿನ ವರ್ಷ ಜಿಡಿಪಿ ೩೩,೦೫,೫೦೦ ಇರುತ್ತದೆ. ಅದರಲ್ಲಿ ನಮ್ಮ ಸಾಲ ಎಷ್ಟು? ೮.೧೪ ಲಕ್ಷ ಆಗುತ್ತದೆ. ನಾನು ಪ್ಯಾರಾಮೀಟರ್ ನಲ್ಲೇ ಸಾಲ ಮಾಡಿದ್ದೇವೆ. ಕೇಂದ್ರ ಸರ್ಕಾರ ಹಣ ಕೊಟ್ಟಿದ್ದರೆ ಇಷ್ಟೊಂದು ಸಾಲ ಆಗ್ತಿರಲಿಲ್ಲ ಎಂದು ತಿಳಿಸಿದರು.
೬೯ ಸಾವಿರ ಕೋಟಿ ಜಲಜೀವನ್ ಮಿಷನ್ ಪ್ರಾಜೆಕ್ಟ್ ಕಾಸ್ಟ್. ಆದ್ರೆ ೧೧ ಸಾವಿರ ಚಿಲ್ಲರ್ ಹಣ ಕೊಟ್ಟಿದ್ದಾರೆ. ನಾವು ೩೭ ಸಾವಿರ ಕೋಟಿ ಖರ್ಚು ಮಾಡಿದೆ ಯೋಜನೆ. ೧೫೫೦೦ ಕೋಟಿ ಹೆಚ್ಚು ಖರ್ಚು ಮಾಡಿದ್ದೇವೆ. ೨೭೦೯೧ ಕೋಟಿ ಹಣ ಬಿಡುಗಡೆ ಮಾಡಿದ್ದೇವೆ. ೨೧೯ ಲಕ್ಷಕ್ಕೂ ಹೆಚ್ಚು ಕೋಟಿ ಸಾಲ ಇದೆ ಕೇಂದ್ರ ಸರ್ಕಾರದ್ದು. ಈ ವರ್ಷ ೧೭.೨೦ ಲಕ್ಷ ಕೋಟಿ ಹಣ ಸಾಲ ಕೇಂದ್ರ ಮಾಡಿದೆ. ಅಶೋಕ್ ನಿಗೆ ಯಾವ ನೈತಿಕತೆ ಇದೆ. ೧೬೫ ಲಕ್ಷ ಕೋಟಿ ಬಿಜೆಪಿ ಸರ್ಕಾರ ಬಂದ್ಮೇಲೆ ಸಾಲ ಮಾಡಿದೆ ಕೇಂದ್ರದಲ್ಲಿ. ಸಾಲ ಮಾಡದಯೇ ಅಭಿವೃದ್ಧಿ ಮಾಡೋಕೆ ಸಾಧ್ಯವಿಲ್ಲ. ಆದ್ರೆ ಸಾಲ ಮಾಡೋವಾಗ ಪ್ಯಾರಾಮೀಟರ್ ಒಳಗೆ ಇರಬೇಕು. ಅವರಿಗೆ ನಾಚಿಕೆ ಆಗಬೇಕೋ ಬೇಡ್ವೋ. ಇಷ್ಟೊಂದು ಮೋದಿ ಬಂದ್ಮೇಲೆ ಸಾಲ ಮಾಡಿರೋದು ಎಂದು ವಾಗ್ದಾಳಿ ನಡೆಸಿದರು.
ಅಶೋಕ್ ಟೀಕೆ ಮಾಡ್ತಾ ಇದ್ನ ನಾವು ಸಾಲಗಾರ ಅಂತಾ. ನಾವು ಸಾಲಗಾರ ಆಗಿಲ್ಲ. ಪ್ಯಾರಾಮೀಟರ್ ಗಳ ಅಡಿಯಲ್ಲೇ ನಾವು ಸಾಲ ಮಾಡಿದ್ದೇವೆ. ಇವರು ಬಂದ ಮೇಲೆ ಎಷ್ಟು ಸಾಲ ಮಾಡಿದ್ರು?. 5,53,847 ಕೋಟಿ ನಮ್ಮ ಸರ್ಕಾರ ಬರುವಾಗ ಸಾಲ ಇತ್ತು. ಈಗ ನಾವು ಬಂದು ಮೂರು ವರ್ಷ ಆಯ್ತು. ಸಾಲ ಎಲ್ಲ ಕಾಲದಲ್ಲೂ ಮಾಡಿದ್ದಾರೆ ನಮ್ಮ ಕಾಲದಲ್ಲೂ ಮಾಡಿದ್ದೇವೆ ಕೇಂದ್ರ ಸರ್ಕಾರವೂ ಸಾಲ ಮಾಡಿದೆ. ೫೬೪೩೨ ನೇಮಕಾತಿ ಮಾಡುತ್ತೇವೆ. ವಿಳಂಬ ಆಗಿರುವುದರಿಂದ ಏಜ್ ರಿಲ್ಯಾಕ್ಸೇಷನ್ ಕೂಡ ಮಾಡಿದ್ದೇವೆ. ನಂಜುಡಪ್ಪ ವರದಿ ಆದಮೇಲೆ ಅನೇಕ ಆಯೋಗಗಳನ್ನು ರಚನೆ ಮಾಡಿದ್ದೆವು. ಪ್ರಾದೇಶಿಕ ಅಸಮಾನತೆ ಕಡಿಮೆ ಆಗಿಲ್ಲ ಎಂಬ ಕಾರಣಕ್ಕೆ ಗೋಂವಿದ ರಾವ್ ಆರ್ಥಿಕ ತಜ್ಞರು ಅವರ ನೇತೃತ್ವದಲ್ಲಿ ಸಮಿತಿ ಮಾಡಿದ್ದೆವು. ಸಮಿತಿ ವರದಿ ಕೊಟ್ಟಿದೆ, ಅದನ್ನು ಕ್ಯಾಬಿನೆಟ್ ನಲ್ಲಿ ಒಪ್ಪಿಕೊಂಡಿದ್ದೇವೆ. ಈ ಸದನದಲ್ಲಿಯೇ ಮಂಡಿಸುತ್ತಿದ್ದೇವೆ. ಐದು ವರ್ಷಗಳಲ್ಲಿ ೪೩ ಸಾವಿರ ಕೋಟಿ ವೆಚ್ಚ ಮಾಡಬೇಕು ಎಂದಿದ್ದಾರೆ. ಕಮಿಟಿ ಶಿಫಾರಸು ನಾವು ಒಪ್ಪಿರುವುದರಿಂದ ೪೨೯೧ ಕೋಟಿ ಪ್ರಾರಂಭಿಕವಾಗಿ ಬಜೆಟ್ ನಲ್ಲಿ ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.
ಇದೇ ವೇಳೆ ೧೬ ವರ್ಷ ದ ಮಕ್ಕಳು ಮೊಬೈಲ್ ಇಟ್ಟುಕೊಳ್ಳಬಹುದು. ಆದ್ರೆ ಸೋಷಿಯಲ್ ಮೀಡಿಯಾ ಯೂಸ್ ಮಾಡಿಕೊಳ್ಳಬಾರದು. ನಾವು ಇನ್ನೂ ನಿರ್ಣಯ ಮಾಡಿಲ್ಲ ,ಫೈನಲ್ ಆದ್ಮೇಲೆ ಹೇಳುತ್ತೇನೆ ಎಂದು ತಿಳಿಸಿದರು. : ದಾಖಲೆ ಬಜೆಟ್ ಮಂಡನೆಯಾಗಿದೆ, ಮುಂದೆ ಎಷ್ಟು ಬಜೆಟ್ ಮಂಡಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಹೈಕಮಾಂಡ್ ಹೇಳುವವರೆಗೂ ಬಜೆಟ್ ಮಂಡನೆ ಮಾಡುತ್ತಿರುತ್ತೇನೆ ಎಂದು ಮತ್ತೆ ಹೈಕಮಾಂಡ್ ನತ್ತ ಸಿಎಂ ಬೊಟ್ಟು ಮಾಡಿದ್ದಾರೆ.
ಫಿಸಿಕಲ್ ಪ್ಯಾರಾಮೀಟರ್ ಒಳಗೆ ಕಾಪಾಡಿಕೊಂಡಿದ್ದೇನೆ. ಯಾವಾಗ ಆರ್ಥಿಕ ಸಚಿವ ಆಗಿದ್ದೇನೆ, ಆಗಲಿಂದಲೂ ಕಾಪಾಡಿದ್ದೇನೆ. ಈ ವರ್ಷ ಸರಿ ಹೋಗ್ತಿರಲಿಲ್ಲ, ೧೦ ಸಾವಿರ ಕೋಟಿ ಬಂದಿದ್ರೆ ಸರಿ ಆಗ್ತಿತ್ತು ಅಲ್ವೇ? ಅಭಿವೃದ್ಧಿ ಕೆಲಸ ಹೆಚ್ಚು ಮಾಡಿದಾಗ ಕಡಿಮೆ ಮಾಡೋದು ಹೇಗೆ?. ಗ್ಯಾರಂಟಿ ಇಲ್ದೇ ಇದ್ದಾಗಲೂ ಸಾಲ ಮಾಡಿದ್ದೇ.. ೨೪.೯೪% ಸಾಲ ಮಾಡಿದ್ದೇನೆ. ಹೊಸ ಕಾರ್ಯಕ್ರಮ ಮಾಡಿದ್ದೆವೆ, ಅದಕ್ಕೆ ತೆಗೆದುಕೊಂಡಿದ್ದೇವೆ. ಕರಾವಳಿ ಅಭಿವೃದ್ಧಿ ಯೋಜನೆ ಮಾಡಿದ್ದೇವೆ.ಅವರು ಇದ್ದಾಗ ಯಾಕೆ ಯೋಜನೆ ಮಾಡಿಲ್ಲ. ಆರೋಪ ಮಾಡೋದು ಸುಲಭ. ಬಿಜೆಪಿ ಅವರಿಗೆ ಮಾರಲ್ ರೈಟೇ ಇಲ್ಲ. ಇಂಡಿಯಾದಲ್ಲಿ ತಲಾದಾಯದಲ್ಲಿ ನಾವೇ ನಂಬರ್ ಒನ್ .ಕೊಂಡುಕೊಳ್ಳೋ ಶಕ್ತಿ ಜಾಸ್ತಿ ಆಗಿದೆ. ಬೇರೆ ರಾಜ್ಯದಲ್ಲಿ ಯಾಕೆ ನಮ್ಮ ಗ್ಯಾರಂಟಿ ಫಾಲೋ ಮಾಡುತ್ತಿದ್ದಾರೆ ?. ನರೇಗಾ ವಿಷ್ಯದಲ್ಲಿ ನಾವು ಇನ್ನೂ ತೀರ್ಮಾನ ಮಾಡಿಲ್ಲ. ಮನರೇಗಾ ಮಾಡಬೇಕು ಎಂದು ಹೋರಾಟ, ಚಳುವಳಿ ಮಾಡುತ್ತಿದ್ದೇವೆ ಎಂದರು.











