ಮನೆ Latest News ನಾನು ಯಾವ ಲಾಭಿಯನ್ನು ಮಾಡ್ತಿಲ್ಲ,ದೆಹಲಿಗೂ ಹೋಗ್ತಿಲ್ಲ,ನನ್ನ ಹಿತೈಷಿಗಳಿಗೂ ಒಂದೆರೆಡು ಸರಿ ಹಾಗೆಲ್ಲ ಮಾಡಬೇಡಿ ಎಂದಿದ್ದೇನೆ; ಗೃಹ...

ನಾನು ಯಾವ ಲಾಭಿಯನ್ನು ಮಾಡ್ತಿಲ್ಲ,ದೆಹಲಿಗೂ ಹೋಗ್ತಿಲ್ಲ,ನನ್ನ ಹಿತೈಷಿಗಳಿಗೂ ಒಂದೆರೆಡು ಸರಿ ಹಾಗೆಲ್ಲ ಮಾಡಬೇಡಿ ಎಂದಿದ್ದೇನೆ; ಗೃಹ ಸಚಿವ ಪರಮೇಶ್ವರ್ ಹೇಳಿಕೆ

0

ಬೆಂಗಳೂರು: ನಾನು ಯಾವ ಲಾಭಿಯನ್ನು ಮಾಡ್ತಿಲ್ಲ,ದೆಹಲಿಗೂ ಹೋಗ್ತಿಲ್ಲ,ನನ್ನ ಹಿತೈಷಿಗಳಿಗೂ ಒಂದೆರೆಡು ಸರಿ ಹಾಗೆಲ್ಲ ಮಾಡಬೇಡಿ ಎಂದಿದ್ದೇನೆ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.

ಪರಮೇಶ್ವರ್ ಸಿಎಂ ಆಗಬೇಕೆನ್ನುವ ಒತ್ತಾಯ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು ಈಗಾಗಲೇ ಸಾಕಷ್ಟು ಗೊಂದಲವಾಗಿದೆ. ನಾನು ಇನ್ನು ಹೆಚ್ಚು ಗೊಂದಲ ಮಾಡಲು ತಯಾರಿಲ್ಲ. ಅನೇಕರು ನನ್ನನ್ನು ಕೇಳ್ತಾರೆ,ಅಭಿಮಾನಿಗಳು ಘೋಷಣೆ ಕೂಗ್ತಾರೆ. ಇದಕ್ಕೆಲ್ಲ ಉತ್ತರ, ಹೈಕಮಾಂಡ್‌ ನಿರ್ಧಾರ .ಹಾಗಾಗಿ ಅದರ ಬಗ್ಗೆ ಹೆಚ್ಚು ವ್ಯಾಖ್ಯಾನ ಮಾಡಬೇಕಿಲ್ಲ.ನಾನು ಯಾವ ಲಾಭಿಯನ್ನು ಮಾಡ್ತಿಲ್ಲ.ದೆಹಲಿಗೂ ಹೋಗ್ತಿಲ್ಲ,ನನ್ನ ಹಿತೈಷಿಗಳಿಗೂ ಒಂದೆರೆಡು ಸರಿ ಹಾಗೆಲ್ಲ ಮಾಡಬೇಡಿ ಎಂದಿದ್ದೇನೆ.ಈ ಗೊಂದಲಕ್ಕೆ ನಾನು ಕೈ ಜೋಡಿಸಲು ಹೋಗಲ್ಲ ಎಂದಿದ್ದಾರೆ.

ಗ್ಯಾರಂಟಿಯಿಂದ ಸರ್ಕಾರಕ್ಕೆ ಹೊರೆ ಯಾಗ್ತಿದೆ ಎಂದು ಡಿಕೆಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಡಿಕೆಶಿ ನಮ್ಮ ಅಧ್ಯಕ್ಷರು. ನಾವೆಲ್ಲಾ ಸೇರಿ ಪ್ರಣಾಳಿಕೆ ಸಿದ್ದಪಡಿಸಿದ್ದು. ಕಲೆಕ್ಟಿವ್ ಆಗಿ ಎಲ್ಲರು ಸಿದ್ದಪಡಿಸಿದ್ದೆವು .ಅವರಿಗೆ ಈಗ ಅನಿಸಿರಬಹುದು. ಅವರ ಅಭಿಪ್ರಾಯ ಹೇಳಿದ್ದಾರೆ. ಈಗಲೂ ಅವರು ಅಧ್ಯಕ್ಷರಿದ್ದಾರೆ. ಇದನ್ನ ಬಗೆಹರಿಸಬೇಕಿರೋದು ಸಿಎಂ ಅಧ್ಯಕ್ಷರು ,ನಾವೆಲ್ಲ ಮಾಡಬೇಕು ಎಂದು ತಿಳಿಸಿದ್ದಾರೆ.

ಗ್ಯಾರಂಟಿಯನ್ನ ಸ್ವಯಂಪ್ರೇರಿತವಾಗಿ ಶ್ರೀಮಂತರು ಬಿಡಬೇಕೆನ್ನುವ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಗ್ಯಾರಂಟಿ ಜಾರಿ ಮಾಡುವಾಗ ನಾವು ಯಾವುದೇ ಈ ರೀತಿಯ ನಿಯಮ ಮಾಡಿರಲಿಲ್ಲ. ಹಣವಂತರೂ ಯಾರೂ ತೆಗೆದುಕೊಳ್ತಾರೆ ಎಂದು ಯೋಚಿಸಿದ್ದೆವು. ಈಗ 10೦ಎಕರೆ ಜಮೀನು ಇರೋದು ತಕೊತ್ತಿದ್ದಾರೆ. ಈ ಹಿಂದೆ ಮೋದಿ ಅವರು ಕರೆ ಕೊಟ್ಟಾಗ ಗ್ಗಾಸ್ ಸಬ್ಸಿಡಿಯನ್ನ ಕೆಲವರು ಬಿಟ್ಟಿದ್ರು.ಆಗಲೂ ಹಲವು ಸಬ್ಸಿಡಿ ಬಿಟ್ಟಿದ್ರು.ಅದಕ್ಕೆ ಈಗ ಸಿಎಂ ಕರೆ ಕೊಟ್ಟಿದ್ದಾರೆ ಎಂದಿದ್ದಾರೆ.

ಉದ್ಯೋಗಾಕಾಂಕ್ಷಿಗಳ ವಿಚಾರ ಬಹಳ ಗಂಭೀರ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಹೆಚ್ಚಿ ವಿದ್ಯಾವಂತರಾಗಬೇಕು ಎನ್ನುತ್ತೇವೆ. ಅದರ ಬಗ್ಗೆಯೂ ನಾವು ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡ್ತೇವೆ.ಒಳಮೀಸಲಾತಿಯಿಂದ ನೇಮಕಾತಿ ವಿಳಂಬ ಆಗಿದೆ. ಅದನ್ನ ಸರಿಪಡಿಸಿ ಹೇಗೆ ಮಾಡೋದು ಎನ್ನೊದರ ಬಗ್ಗೆ ಚರ್ಚೆ ಮಾಡ್ತೇವೆ. ನಾವು ನಮ್ಮ ಪ್ರಣಾಳಿಕೆಯಲ್ಲಿ ಹೇಳಿದ್ದೆವು.2.5ಲಕ್ಷ ಉದ್ಯೋಗ ಖಾಲಿ ಇದೆ ಅದನ್ನ ಹಂತ ಹಂತವಾಗಿ ತುಂಬುತ್ತೇವೆ ಎಂದಿದ್ದೆವು. ಈಗಾಗಲೇ ನಾವು ಎರಡುವರೆ ವರ್ಷದಲ್ಲಿ ಹಲವು ನೇಮಕಾತಿ ಮಾಡಿದ್ದೇವೆ.ನಮ್ಮ ಇಲಾಖೆಯಲ್ಲಿ 17ಸಾವಿರ ಹುದ್ದೆ ಖಾಲಿ ಇದೆ. ನೇಮಕಾತಿ ಆದೇಶ ಮಾಡಲು ನಮಗೆ ಅನುಮತಿ ಸಿಕ್ಕಿದೆ ಎಂದಿದ್ದಾರೆ.