ಮನೆ Latest News ಸರ್ಕಾರ ಜನ ಭಿಕ್ಷೆಗೆ ನಿಂತಿದ್ದಾರೆ ಅಂತ ಭಾವಿಸಿಕೊಂಡಿದೆ: ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ...

ಸರ್ಕಾರ ಜನ ಭಿಕ್ಷೆಗೆ ನಿಂತಿದ್ದಾರೆ ಅಂತ ಭಾವಿಸಿಕೊಂಡಿದೆ: ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿಕೆ

0

ಬೆಂಗಳೂರು; ಸರ್ಕಾರ ಜನ ಭಿಕ್ಷೆಗೆ ನಿಂತಿದ್ದಾರೆ ಅಂತ ಭಾವಿಸಿಕೊಂಡಿದೆ ಎಂದು ಬೆಂಗಳೂರಿನಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.

ಗ್ಯಾರಂಟಿಗಳು ಹೊರೆ ಎಂಬ ಡಿಸಿಎಂ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಜನ ಭಿಕ್ಷೆ ಕೇಳುತ್ತಿಲ್ಲ, ಭಿಕ್ಷೆಗೆ ಕೈಯೊಡ್ಡಿ ನಿಂತಿಲ್ಲ. ಸರ್ಕಾರ ಜನ ಭಿಕ್ಷೆಗೆ ನಿಂತಿದ್ದಾರೆ ಅಂತ ಭಾವಿಸಿಕೊಂಡಿದೆ. ಜನ ಉದ್ಯೋಗ ಕೇಳುತ್ತಿದ್ದಾರೆ. ಯಾಕೆ ನಿರುದ್ಯೋಗಿಗಳು ಹೋರಾಟಕ್ಕೆ ಇಳಿದರು?. ಉದ್ಯೋಗ ಭರ್ತಿ ಬಗ್ಗೆ ಸರ್ಕಾರ ಸುಳ್ಳು ಹೇಳುತ್ತಿದೆ. ಬೆಳಗಾವಿ ಅಧಿವೇಶನದಲ್ಲಿ ಸರ್ಕಾರವೇ ಉದ್ಯೋಗ ಎಷ್ಟು ಭರ್ತಿ ಮಾಡಿದೆ ಅಂತ ಉತ್ತರ ಕೊಟ್ಟಿದೆ. 2.84 ಲಕ್ಷ ಹುದ್ದೆಗಳು ಖಾಲಿ ಇವೆ. ಈ ಪೈಕಿ ಕಳೆದ ಮೂರು ವರ್ಷದಲ್ಲಿ 8,157 ಹುದ್ದೆಗಳ ನೇಮಕಾತಿ ಪೂರ್ತಿ ಆಗಿದೆ. ಸಿಎಂ 40 ಸಾವಿರ ಹುದ್ದೆ ಭರ್ತಿ ಮಾಡಿರುವುದಾಗಿ ಸುಳ್ಳು ಹೇಳಿದ್ದೇಕೆ?. ರಾಜ್ಯದಲ್ಲಿ ಸ್ಕ್ಯಾನಿಂಗ್ ಬಂದ್, ಔಷಧಿಗಳು ಇಲ್ಲ. ಗ್ಯಾರಂಟಿಗಳು ಹೊರೆ ಅಲ್ಲ, ಈ ಸರ್ಕಾರವೇ ರಾಜ್ಯಕ್ಕೆ ಹೊರೆ. ಜನ‌ ಈ ಕಾಂಗ್ರೆಸ್ ಹೊರೆಯನ್ನು ಇಳಿಸಿಕೊಳ್ಳಲು ಇಚ್ಚಿಸಿದ್ದಾರೆ. 2.84 ಲಕ್ಷ ಹುದ್ದೆಗಳು ಖಾಕಿ ಇವೆ. ಯಾವಾಗ ಈ ಹುದ್ದೆಗಳನ್ನು ಭರ್ತಿ ಮಾಡುತ್ತೀರಿ?.ಯಾವ ತಡೆಯಾಜ್ಞೆ ಇದೆ ನೇಮಕಾತಿ ಮಾಡಲು? ಎಂದು ಪ್ರಶ್ನಿಸಿದ್ದಾರೆ.

ಒಳಮೀಸಲಾತಿ ಗೊಂದಲ ನಿಮ್ಮಿಂದ ಆಗಿರುವುದು.ಹಾವೂ ಸಾಯಬಾರದು, ಕೋಲೂ ಮುರಿಯಬಾರದು ಅಂದರೆ ಹೇಗೆ?. ಯಾವುದರ ಆಧಾರದಲ್ಲಿ ಒಳ ಮೀಸಲಾತಿ ಹಂಚಿದ್ರಿ?. ಸಿದ್ದರಾಮಯ್ಯ ಅನಾನುಭವಿ ಸಿಎಂ. ಅಂಗನವಾಡಿ ಮಕ್ಕಳಿಗೆ ತರಕಾರಿ ಖರೀದಿಗೆ 50 ಪೈಸೆ ಕೊಡುತ್ತಿದ್ದಾರೆ. ಯಾವ ಊರಲ್ಲಿ 50 ಪೈಸೆಗೆ ತರಕಾರಿ ಬರುತ್ತೆ ಹೇಳಲಿ? ಎಂದಿದ್ದಾರೆ. ಬಾಂಗ್ಲಾ ನಿವಾಸಿಗಳ ಅಕ್ರಮ ನೆಲೆಗಳ ಮೇಲೆ ದಾಳಿ ವಿಚಾರದ ಬಗ್ಗೆ ಮಾತನಾಡಿದ ಅವರು ಬೆಂಗಳೂರಿನ‌ ಕಾರ್ಖಾನೆಗಳಲ್ಲಿ ಅಕ್ರಮ ಬಾಂಗ್ಲಾ ನಿವಾಸಿಗಳಿದ್ದಾರೆ. ಚಿಂದಿ ಆಯುವವರೂ ಅವರೇ. ಬಾಂಗ್ಲಾ ನಿವಾಸಿಗಳನ್ನು ನಿರ್ದಾಕ್ಷಿಣ್ಯವಾಗಿ ಹೊರಗೆ ಹಾಕಲಿ .ಕದ್ದು ಮುಚ್ಚಿ ಕಳ್ಳತನದಿಂದ ಬರುವವರನ್ನು ಯಾಕೆ ಸೇರಿಸಿಕೊಳ್ಳುತ್ತೀರಿ?. ಬಾಂಗ್ಲಾ ನಿವಾಸಿಗಳು ಅಕ್ರಮವಾಗಿ ಬರುವ ಬದಲು ಅವರಿಗೆ ಸರ್ಕಾರ ವರ್ಕಿಂಗ್ ವೀಸಾ ಕೊಡಲಿ ಎಂದಿದ್ದಾರೆ.

ಮಕ್ಕಳ ನಾಪತ್ತೆ ಪ್ರಕರಣ, ಹೆಣ್ಮಕ್ಕಳ‌ ನಾಪತ್ತೆ ಪ್ರಕರಣ ರಾಜ್ಯದಲ್ಲಿ ಹೆಚ್ಚಾಗಿದೆ . ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿ. ಸಾಮಾಜಿಕ, ಅಪರಾಧಿಕ, ಕೌಟುಂಬಿಕ ದೃಷ್ಟಿಯಿಂದ ಇದನ್ನು ನೋಡಬೇಕು. ಸರ್ಕಾರ ಇದರತ್ತ ಗಮನ ಕೊಟ್ಟು ಕ್ರಮ ಕೈಗೊಳ್ಳಲಿ ಎಂದ ಅವರು ಖಾಸಗಿ ವಲಯದಲ್ಲೂ ಮೀಸಲಾತಿ ಕೊಡಬೇಕೆಂಬ ಕೂಗು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಇದು ಇನ್ನಷ್ಟು ಚರ್ಚೆ ಆಗಬೇಕು. ಖಾಸಗಿಯವರು ಸ್ವಂತ ಬಂಡವಾಳ ಹಾಕಿರುತ್ತಾರೆ. ಅದಕ್ಕೆ ಶ್ಯೂರಿಟಿ ಕೊಡುತ್ತಾ ಸರ್ಕಾರ?. ಸರ್ಕಾರ ಬಂಡವಾಳಕ್ಕೆ ಶ್ಯೂರಿಟಿ ಕೊಟ್ಟು ಖಾಸಗಿಯಲ್ಲೂ ಬೇಕಾದರೆ ಮೀಸಲಾತಿ ಕೊಡಲಿ ಎಂದು ಆಗ್ರಹಿಸಿದ್ದಾರೆ.