ಬೆಂಗಳೂರು; ನರೇಂದ್ರ ಮೋದಿ ಅವರು MLA ನೇ ಆಗಲಿಲ್ಲಪ್ಪ ಸಿಎಂ ಆಗೋದ್ರು ಅಲ್ವಾ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಮೊದಲ ಬಾರಿ ಗೆದ್ದ ಶಾಸಕರಿಂದ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ಪೇಪರ್ ಅಲ್ಲಿ ನೋಡಿದ್ದೇನೆ ಅಷ್ಟೇ. ನನಗೆ ಪತ್ರ ಇನ್ನು ತಲುಪಿಲ್ಲ. ಎಲ್ಲರಿಗೂ ಮಂತ್ರಿ ಆಗಬೇಕು ಅಂತ ಆಸೆ ಇರುತ್ತೆ ಅಲ್ವಾ. ನರೇಂದ್ರ ಮೋದಿ ಅವರು MLA ನೇ ಆಗಲಿಲ್ಲಪ್ಪ ಸಿಎಂ ಆಗೋದ್ರು ಅಲ್ವಾ. ಆದಕ್ಕೆ ಎಲ್ಲರಿಗೂ ಆಸೆ ಇರುತ್ತೆ. ಸಿಎಂ ಇಲ್ಲದೇ ಹೋದ್ರು ಕೆಲವು ಮಂತ್ರಿ ಆಗಿದ್ದೋರು ಇದ್ದಾರೆ. MLA ಆಗದೇ ಇದ್ರು ಮಂತ್ರಿ ಆದವರು ಇದ್ದಾರೆ.ಅದಕ್ಕೆ ಕೇಳ್ತಾರೆ, ಅವರು ಕೇಳಿರೋದ್ರಲ್ಲಿ ತಪ್ಪೇನಿದೆ. ಹೊಸ MLA ಗಳಿಗೆ ಸಚಿವ ಸ್ಥಾನ ಕೊಟ್ರೆ ತಪ್ಪೇನಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನೋಡಪ್ಪ , ನಾನು ಫಸ್ಟ್ ಟೈಂ ಮಂತ್ರಿಯಾದವನು.ಹೊಸ ಪೀಳಿಗೆ ಬೆಳೆಯಬೇಕು ಅಲ್ವಾ. ಎಷ್ಟು ದಿನ ನಾವೇ ಇಲ್ಲಿ ಗೂಟ ಹೊಡೆದು ಕುಳಿತುಕೊಳ್ಳಲು ಆಗುತ್ತಾ.?. ನಾನು ಮಂತ್ರಿಯಾಗಿ 36 ವರ್ಷ ಆಯ್ತು. ಹೊಸ ಜನರೇಷನ್ ಬರಬೇಕು, ಹೊಸ ಆಲೋಚನೆ ಬರಬೇಕಲ್ವಾ ಎಂದು ಪ್ರಶ್ನಿಸಿದ್ದಾರೆ.
ಹೊಸಬರು ಇರಬೇಕು ಅಂತ ನಾನು ಅವರಿಗೆಲ್ಲ ಪ್ರೇರೇಪಣೆ ಕೊಡೋದು. ಹೊಸಬರನ್ನ ತಯಾರು ಮಾಡಬೇಕು ಅಲ್ವಾ.? ಹೊಸ ಜನರೇಷನ್ ಬೇಕು ಅಲ್ವಾ.ಅವರು ಕೇಳಿರೋದ್ರಲ್ಲಿ ತಪ್ಪೇನಿಲ್ಲ. ಪಾರ್ಟಿ ಲೀಡರ್ ಶಿಪ್ ತೀರ್ಮಾನ ಮಾಡುತ್ತೆ. ಹೊಸ ಶಾಸಕರು ನಿಮ್ಮ ಮಂತ್ರಿಮಂಡಲ ಸೇರೋ ಅವಕಾಶ ಸಿಗುತ್ತಾ ಎಂಬ ಪ್ರಶ್ನೆಗೆ ಅದನ್ನು ಕೇಳೋಕೆ ನಾನು ಮಂತ್ರಿಮಂಡಲ ಮಾಡ್ತೀನಿ ಅಂತ ನಾನು ಹೇಳು ಇಲ್ಲ ಏನಿಲ್ಲ. ಚೀಫ್ ಮಿನಿಸ್ಟರ್ ಹೇಳಿದ್ದಾರೆ. ಸಚಿವ ಸಂಪುಟ ವಿಸ್ತರಣೆ ಮಾಡ್ತೀನಿ ಅಂತ ಹೇಳಿದ್ದಾರೆ. ಅವರು ವಿಸ್ತರಣೆ ಮಾಡ್ತಾರೆ ಅಂತ ಕೆಲವರು ಡೆಲ್ಲಿಗೆ ಹೋಗ್ತಾರೆ. ಕೆಲವರು ಪತ್ರ ಬರೆಯುತ್ತಾರೆ. ಇನ್ನು ಕೆಲವರು ಹೊರಗಡೆ ಹೋಗಿ ಇನ್ಫ್ಲೂಯೆನ್ಸ್ ಮಾಡ್ತಾರೆ. ಅವರ ಆಸೆ ಇರುತ್ತೆ ಎಂದು ಅವರು ತಿಳಿಸಿದ್ದಾರೆ.











