ಮನೆ Latest News ದಲಿತ ಎನ್ನುವ ಪದ ಕಾಂಗ್ರೆಸ್ ನ ಓಟ್ ಬ್ಯಾಂಕ್ ರಾಜಕೀಯ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ...

ದಲಿತ ಎನ್ನುವ ಪದ ಕಾಂಗ್ರೆಸ್ ನ ಓಟ್ ಬ್ಯಾಂಕ್ ರಾಜಕೀಯ: ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಹೇಳಿಕೆ

0

ಬೆಂಗಳೂರು: ಕಾಂಗ್ರೆಸ್‌ನಲ್ಲಿ ದಲಿತ ಸಿಎಂ ಕೂಗು ವಿಚಾರ ದಲಿತ ಎನ್ನುವ ಪದ ಕಾಂಗ್ರೆಸ್ ನ ಓಟ್ ಬ್ಯಾಂಕ್ ರಾಜಕೀಯ. ಕರ್ನಾಟಕದಲ್ಲಿ ಎಸ್ ಸಿಪಿ-ಟಿಎಸ್ಪಿ ಯೋಜನೆ ತಂದಿದ್ದೇವೆ ಅಂತಾರೆ, ಆದರೆ ಅದು ಎಲ್ಲಿಗೆ ಹೋಗುತ್ತಿದೆ?. ಎಸ್ ಸಿ, ಎಸ್ಟಿಯವರಿಗೆ 45 ಸಾವಿರ ಕೋಟಿ ರೂ. ಖರ್ಚು ಮಾಡುತ್ತಿದ್ದೇವೆ ಅಂತ ಬಜೆಟ್‌ನಲ್ಲಿ ಹೇಳುತ್ತಾರೆ. ಆದರೆ ಯಾವುದೂ ಉಪಯೋಗಕ್ಕೆ ಬರುವುದಿಲ್ಲ. ದಲಿತರಿಗೆ ಇಡೀ ದೇಶದಲ್ಲಿ ನ್ಯಾಯ ಸಿಕ್ಕಿದೆ ಅಂತಾದರೆ ಅದು ಕಾಂಗ್ರೆಸ್ಸೇತರ ಪಕ್ಷಗಳಿಂದ . ಅಧಿಕಾರಕ್ಕೆ ಕುತ್ತು ಬಂದಾಗ ಈ ರೀತಿ ದಲಿತರ ಹೆಸರನ್ನು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ.

ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಪಂಡಿತ್ ದೀನ್ ದಯಾಳ್ ಪ್ರಶಿಕ್ಷಣ ಮಹಾಭಿಯಾನ ಮಾಡಲು ಕರೆ ನೀಡಿದ್ದಾರೆ. ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಪ್ರಶಿಕ್ಷಣ ನಡೆದಿದೆ.ರಾಜ್ಯದಲ್ಲಿ ಬೆಂಗಳೂರಿನಲ್ಲಿ ಫೆ. 26ರಂದು ಕಾರ್ಯಗಾರ ನಡೆಯಲಿದ್ದು, ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಆಗಮಿಸಲಿದ್ದಾರೆ. ಕಾರ್ಯಕರ್ತರಲ್ಲಿ ಸಮರ್ಥ ಮತ್ತು ದಕ್ಷ ವೈಚಾರಿಕತೆ ಬೆಳೆಸುವುದು, ಬೂತ್ ಮಟ್ಟದಿಂದ ರಾಷ್ಟ್ರೀಯ ಮಟ್ಟದ ಕಾರ್ಯಕರ್ತರವರೆಗೂ ರಾಷ್ಟ್ರೀಯ ವಿಚಾರಗಳ ಬಗ್ಗೆ ತಿಳಿಸಿಕೊಡುವುದು ಉದ್ದೇಶ. ಒಟ್ಟು ಎಂಟು ಅಂಶಗಳನ್ನಿಟ್ಟುಕೊಂಡು ಪ್ರಶಿಕ್ಷಣ ನೀಡಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

ಲಂಚ ಪ್ರಕರಣದಲ್ಲಿ ಬಿಜೆಪಿ  ಶಾಸಕ ಡಾ. ಚಂದ್ರು ಲಮಾಣಿ ಬಂಧನ ವಿಚಾರದ ಬಗ್ಗೆ ಮಾತನಾಡಿದ ಅವರು ಚಂದ್ರು ಲಮಾಣಿ ವಿಚಾರದ ಬಗ್ಗೆ ರಾಜ್ಯಾಧ್ಯಕ್ಷರು ಈಗಾಗಲೇ ಗಮನಕ್ಕೆ ತಂದಿದ್ದಾರೆ.ಲಂಬಾಣಿ‌ ಸಮುದಾಯಕ್ಕೆ ಅನ್ಯಾಯ ಆಗಿದೆ. ಒಬ್ಬರೇ ಶಾಸಕ ಲಂಬಾಣಿ ಸಮುದಾಯದಿಂದ ಆಯ್ಕೆಯಾಗಿ ಬಂದವರು. ಬಂಜಾರ ಸಮುದಾಯದ ಒಬ್ಬ ಮಂತ್ರಿ ಇಲ್ಲದ ಕ್ಯಾಬಿನೆಟ್ ಇದು. ಚಂದ್ರು ಲಮಾಣಿ ವಿರುದ್ಧ ಷಡ್ಯಂತ್ರ ನಡೆದಿದೆ. ಇದರ ಬಗ್ಗೆ ತನಿಖೆ ಆಗಲಿ, ಎದುರಿಸುತ್ತಾರೆ. ಇದೆಲ್ಲಾ ಕಾಂಗ್ರೆಸ್ ಟೂಲ್ ಕಿಟ್. ಕಾಂಗ್ರೆಸ್ ಪಕ್ಷ ತಮ್ಮ ಮೇಲಿನ ಆರೋಪ ಡೈವರ್ಟ್ ಮಾಡುವಾಗ ಅಮಾಯಕರನ್ನು ಅರೆಸ್ಟ್ ಮಾಡುತ್ತಾರೆ ಎಂದು ಅವರು ಹೇಳಿದ್ದಾರೆ.