ಚಿಕ್ಕಬಳ್ಳಾಪುರ; ರಾಜ್ಯಗಳ ಹಿತ ಕಾಯುವಲ್ಲಿ ಕೇಂದ್ರ ಸಂಪೂರ್ಣ ವಿಫಲ ಆಗಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ನರೇಗಾ ಉಳಿಸಿ ಅಭಿಯಾನದಲ್ಲಿ ಭಾಗವಹಿಸಲು ಎಲ್ಲರೂ ಬಂದಿದ್ದೀರಿ.ನಾವು ಸ್ವಲ್ಪ ತಡವಾಗಿಬಂದೆವು, ಕ್ಷಮಿಸಬೇಕು. ಇಡೀ ದೇಶಾದ್ಯಂತ ಮನರೆಗ ಉಳಿಸಿ ಅಭಿಯಾನ ಪ್ರಾರಂಭ ಆಗಿದೆ. ಚಳಿಗಾಲದ ಅಧಿವೇಶನದಲ್ಲಿ ಬಿಜೆಪಿ ಸರ್ಕಾರ ಮನರೇಗಾ ವನ್ನು ರದ್ದು ಮಾಡಿ ವಿಬಿಜಿ ರಾಮ್ ಜೀ ಕಾಯಿದೆ ಜಾರಿ ಮಾಡಿದೆ.ನರೇಗ ಕಾಯಿದೆ ರದ್ದು ಮಾಡುವ ಅಗತ್ಯ ಇರಲಿಲ್ಲ. ,೨೦೦೫ ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ ಈ ಕಾಯಿದೆ ಜಾರಿ ಮಾಡಲಾಗಿತ್ತು. ಹಳ್ಳಿಗಾಡಿನ ಕೂಲಿ ಕಾರ್ಮಿಕರಿಗೆ ಉದ್ಯೋಗ ಕೊಡುವ ಉದ್ದೇಶ ದಿಂದ ಈ ಕಾಯಿದೆ ಜಾರಿ ಮಾಡಲಾಗಿತ್ತು. ನರೇಗಾದಲ್ಲಿ ಶೇ 53 ರಷ್ಟು ಹೆಣ್ಣುಮಕ್ಕಳು ಉಪಯೋಗ ಪಡೆಯುತ್ತಿದ್ದರು. _ಶೇಖಡಾ 28. ರಷ್ಟು ಜನ ಪರಿಶಿಷ್ಟ ಪಂಗಡದವರು ಉಪಯೋಗ ಪಡೆಯುತ್ತಿದ್ದರು. ಇದನ್ನು ಕಿತ್ತುಕೊಳ್ಳುವ ಕೆಲಸ ಇಂದು ಮಾಡ್ತಾ ಇದ್ದಾರೆ ಎಂದಿದ್ದಾರೆ.
ಗ್ರಾಮಗಳ ಸುಧಾರಣೆ ಆಗದ ಹೊರತು ದೇಶದ ಸುಧಾರಣೆ ಆಗಲ್ಲ ಎಂದು ಮಹಾತ್ಮ ಗಾಂಧಿ ಹೇಳ್ತಾ ಇದ್ದರು.ವರ್ಷದಲ್ಲಿ ನೂರು ದಿನಗಳು ಉದ್ಯೋಗ ಖಾತ್ರಿ ಇತ್ತು. ಇಂತಹಾ ಕಾಯಿದೆ ಕಿತ್ತು ಹಾಕುವ ಕೆಲಸ ಮಾಡಿದ್ದಾರೆ. ಈಗ ಕೇಂದ್ರ ಸರ್ಕಾರ ಎಲ್ಲಿ ಕೆಲಸ ಆಗಬೇಕು ಅಂತಾ ತೀರ್ಮಾನ ಮಾಡಿ ಕೆಲಸ ಕೊಡುತ್ತೆ. ಹಾಗಾಗಿ ನರೇಗ ಉಳಿಸಲು ಕಾಂಗ್ರೆಸ್ ತೀವ್ರ ಒತ್ತಡ ಹಾಕುವ ಕೆಲಸ ಮಾಡ್ತಿದೆ. ರಾಜ್ಯ ಸರ್ಕಾರ ಅರವತ್ತು ಪರ್ಸೆಂಟ್ ಕೇಂದ್ರ ಸರ್ಕಾರ ನಲವತ್ತು ಪರ್ಸೆಂಟ್ ಕೊಡಬೇಕು ಅಂತ ಮಾಡಿದಾರೆ. ರಾಜ್ಯಗಳ ಹಿತ ಕಾಯುವ ಲ್ಲಿ ಕೇಂದ್ರ ಸಂಪೂರ್ಣ ವಿಫಲ ಆಗಿದೆ. ರಾಮ್ ಜಿ ಕಾಯಿದೆಯನ್ನು ಸಂಪೂರ್ಣ ರದ್ದು ಗೊಳಿಸಬೇಕು. ನರೇಗ ವನ್ನು ಮರು ಜಾರಿಗೊಳಿಸಬೇಕು ಅನ್ನೋದು ನಮ್ಮ ಬೇಡಿಕೆ ಎಂದು ತಿಳಿಸಿದ್ದಾರೆ.
ಜನರ ಉದ್ಯೋಗ ದ ಹಕ್ಕನ್ನು ಮರುಸ್ಥಾಪನೆ ಮಾಡಬೇಕು. ದೇಶಾದ್ಯಂತ ದಿನಕ್ಕೆ ನಾಲ್ಕು ನೂರು ಕನಿಷ್ಟ ವೇತನ ನೀಡಬೇಕು. ಹಿಂದೆ ರೈತ ವಿರೋಧಿ ಕಾಯಿದೆ ಜಾರಿ ಮಾಡಿದಾಗ ರೈತರು ಯಾವ ರೀತಿ ಹೋರಾಟ ಮಾಡಿದ್ರೋ.ಹಾಗೇ ಈಗಲೂ ಹೋರಾಟ ಮಾಡಬೇಕು ಎಂದಿದ್ದಾರೆ.










