ಮನೆ Latest News ನನಗೆ ರಾಜ್ಯ ಮುಖ್ಯ, ಜನ ಪರವಾದ ಸರ್ಕಾರ ತರಬೇಕು, ಅದು ನನ್ನ ಮೊದಲ ಆದ್ಯತೆ: ಚಿಕ್ಕನಾಯಕನಹಳ್ಳಿಯಲ್ಲಿ...

ನನಗೆ ರಾಜ್ಯ ಮುಖ್ಯ, ಜನ ಪರವಾದ ಸರ್ಕಾರ ತರಬೇಕು, ಅದು ನನ್ನ ಮೊದಲ ಆದ್ಯತೆ: ಚಿಕ್ಕನಾಯಕನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿಕೆ.

0

ಬೆಂಗಳೂರು; ನನಗೆ ರಾಜ್ಯ ಮುಖ್ಯ, ಜನ ಪರವಾದ ಸರ್ಕಾರ ತರಬೇಕು, ಅದು ನನ್ನ ಮೊದಲ ಆದ್ಯತೆ ಎಂದು ಚಿಕ್ಕನಾಯಕನಹಳ್ಳಿಯಲ್ಲಿ ಕೇಂದ್ರ ಸಚಿವ ಕುಮಾರಸ್ವಾಮಿ ಹೇಳಿದ್ದಾರೆ.

ಆರ್.ಎಸ್.ಎಸ್ ಕುರಿತ ಪ್ರಿಯಾಂಕ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು  ಬಹಳ ದಿನಗಳಿಂದ ಲಘುವಾಗಿ ಮಾತನಾಡೋದನ್ನ ಗಮನಿಸಿದ್ದೇನೆ. ಅವರು ಟೀಕೆ ಮಾಡಿದ್ದಾರೆ, ಅದಕ್ಕೆ ಉತ್ತರ ಕೊಡಲು ಹೋದ್ರೆ, ಅವರು ನನ್ನ ಕೇಳ್ತಾರೆ. ಅವರು ಹೇಳ್ತಿರೋದು ಎಲ್ಲಾದಕ್ಕೂ ದಾಖಲೆ ಕೇಳ್ತಿದ್ದಾರೆ. ನಾನು ಹೇಳ್ತಿದಕ್ಕಾದ್ರೂ  ದಾಖಲೆಗಳಿವೆ.ಅವರು ಏನು ಹೇಳಿದ್ದಾರೆ. ಅವರು ಮಂತ್ರಿಗಳಲ್ವಾ. ದಾಖಲೆಗಳು ದಾಖಲೆಗಳು ಅಂತ ಬಿಜೆಪಿ ನಾಯಕರುಗಳು ಕೇಳ್ತಿದ್ದಾರೆ. ಏನಾದ್ರೂ ಒಂದು ಸರ್ಕಾರದಲ್ಲಿ ನಡೆಯುತ್ತವಲ್ಲಾ ಅಕ್ರಮ ವಿಷಯಗಳ ಬಗ್ಗೆ ನೀವೊಂದು ಹೇಳಿಕೆ ಕೊಟ್ಟಿದ್ದೀರಲ್ಲ, ಆರ್.ಎಸ್.ಎಸ್- ಬಿಜೆಪಿ ಬಗ್ಗೆ ಟೀಕೆ ಮಾಡಿದ್ದೀರಾ. ದಾಖಲೆಗಳನ್ನ ಜನರ ಮುಂದೆ ಇಡಿ.ಮೈತ್ರಿಯಲ್ಲಿ ಯಾವುದೇ ಸಮಸ್ಯೆಗಳಿಲ್ಲ, ಲೋಪಗಳಿಲ್ಲ ಎಂದಿದ್ದಾರೆ.

ವೈಯಕ್ತಿಕವಾಗಿ ಮಾತನಾಡೋದಿಕ್ಕೆ ಯಾವು ಪ್ರಾಮುಖ್ಯತೆ ಕೊಡುವ ಅವಶ್ಯಕತೆಯಿಲ್ಲ. ಕರ್ನಾಟಕ, ದೇಶದ ವ್ಯಾಪ್ತಿಯಲ್ಲಿ ನಾವು ಎನ್.ಡಿ.ಎ ಒಕ್ಕೂಟಕ್ಕೆ ಸೇರಿರುವ ಹಿನ್ನೆಲೆಯಲ್ಲಿ ಈ ಯಾವ ಇಶ್ಯೂಗಳು ಬರಲ್ಲ. ನಾನು‌ ನೂರಾರೂ ಬಾರಿ ಹೇಳಿದ್ದೀನಿ. ಜನ ಮುಖ್ಯಮಂತ್ರಿ ಅಂತ ಕೂಗ್ತಾರೆ. ಜನ ಕೂಗ್ತಿರೋದಕ್ಕೆ ನಾವು ಭ್ರಮೆಯಲ್ಲಿ ಹೋಗ್ಬಾರ್ದು. ಜನ ಪ್ರೀತಿಯಿಂದ ಮಾತನಾಡ್ತಾರೆ. ಮಗು ಹುಟ್ಟೊ ಮೊದಲು ಕುಲಾವಿ ಒಲೆಸಿದ್ರು ಅನ್ನೋ ಹಾಗೇ ನಾವು ಅದರ ಬಗ್ಗೆ ಕನಸು ಕಾಣೊದಿಕ್ಕೆ ಆಗುತ್ತಾ. ನಾನು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದೇನೆ, ಜನರ ಆಶೀರ್ವಾದದಿಂದ ಆದ್ನಾ. ಯಾರ್ಯಾರು ಹಣೆ ಬರಹದಲ್ಲಿ ಏನೇನು ಇರುತ್ತೊ. ನನ್ನ ಮೊದಲ ಆದ್ಯತೆ, ಬಿಜೆಪಿ- ಜೆಡಿಎಸ್ ಮೈತ್ರಿ ಮಾಡಿರೋದು ಇಂತಹ ಕೆಟ್ಟ ಸರ್ಕಾರ ತೆಗೆಯಲು.ಇದು ನನ್ನ ಮೊದಲ ಆದ್ಯತೆ. ಮುಖ್ಯಮಂತ್ರಿ ಸ್ಥಾನ ಅಧಿಕಾರದ ಸ್ಥಾನ ಮುಖ್ಯವಲ್ಲ. ದೆಹಲಿಯಲ್ಲೂ ನೋಡಾಗಿದೆ ಕರ್ನಾಟಕದಲ್ಲೂ ನೋಡಿ ಆಗಿದೆ ಎಂದು ಅವರು ತಿಳಿಸಿದ್ದಾರೆ.