ಮನೆ Latest News ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ...

ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ; ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಗಾಂಧಿ ಭವನದಲ್ಲಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಕಾಂಗ್ರೆಸ್ ಅಧಿಕಾರ ಹಂಚಿಕೆ ಗೊಂದಲದ ವಿಚಾರದ ಬಗ್ಗೆ ಮಾತನಾಡಿದ ಅವರು ಬಿಜೆಪಿಯವರ ಒಳ ಜಗಳದ ವಿಚಾರ ಮುಚ್ಚಿಡಲು ನಮ್ಮ ಮೇಲೆ ಬೆರಳು ತೋರಿಸುತ್ತಿದ್ದಾರೆ. ನಮ್ಮಲ್ಲಿ ಗೊಂದಲ ಇಲ್ಲ. ಹೈ ಕಮಾಂಡ್ ಕೂಡ ಸ್ಪಷ್ಟವಾಗಿ ಹೇಳಿದೆ. ಖರ್ಗೆಯವರೂ ವಿಚಾರದ ಬಗ್ಗೆ ಸ್ಪಷ್ಟನೆ ಮಾಡಿದ್ದಾರೆ‌. ಇನ್ನು ಗೊಂದಲ ಎಲ್ಲಿದೆ? ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ಶಾಸಕರ ವಿದೇಶ ಟೂರ್ ವಿಚಾರಕ್ಕೆ ಸಂಬಂಧಪಟ್ಟಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಖಾಸಗಿ ಟೂರ್ ಮಾಡೋದು ತಪ್ಪಾ? .ನಾವು ಎಲ್ಲೂ ಹೋಗಬಾರದೇ? ನಮ್ಮ ಪಕ್ಷದ ವಿಚಾರ ಬಂದಾಗ ನಾವೆಲ್ಲ ಒಂದೇ.ಹೋದ ವರ್ಷ ಕೆಲವರು ಹೋಗಿದ್ರು. ಅವತ್ತಿಲ್ಲದ ವಿಚಾರ ಈಗ್ಯಾಕೆ.ಹೋಗೋರನ್ನ ತಡೆಯಲು ಸಾಧ್ಯವೇ? .ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಕೋಮುವಾದದ ಕಾರಣ ಕರಾವಳಿಯಲ್ಲಿ ಬಂಡವಾಳ ಹಾಕಲು‌ ಹೆದರುತ್ತಿದ್ದಾರೆ. ಐಟಿ‌ ಬಿಟಿ‌ ಕಂಪನಿಗಳಿಗೆ ಹೂಡಿಕೆ ಮಾಡಿ ಎಂದು ಹೇಳುತ್ತೇವೆ.  ಅವರು ಕೂಡ ರೆಡಿ ಆಗ್ತಾರೆ.ಆದರೆ, ‌ನಾಳೆ ಅವರ ಎಂಪ್ಲಾಯಿಗಳಿಗೆ ತೊಂದರೆ ಆದರೆ ಏನು ಅನ್ನೋ‌ ಚಿಂತೆ ಅವರದ್ದು. ಎಲ್ಲಿಯವರೆಗೆ ಧರ್ಮಗುರುಗಳು ರಾಜಕಾರಣಿಗಳು ‌ಪ್ರಬುದ್ಧರಾಗಿ ಮಾತನಾಡಲ್ವೋ ಅಲ್ಲಿಯವರೆಗೂ‌ ಸಮಾಜ ಉದ್ಧಾರ ಆಗಲ್ಲ. ರಾಜಕಾರಣಿಗಳು, ಧರ್ಮಗುರುಗಳು ಸೃಷ್ಟಿಸುವ ಧರ್ಮದ ನಶೆ ನಿಲ್ಲಬೇಕು.ಬಿಜೆಪಿ ಅವರಿಗೆ ಗೊತ್ತಿಲ್ಲ, ‌ನಾನು ಅದಮಾರು ಮಠದಲ್ಲಿ ‌ಓದಿದವನು. ತೇಜಸ್ವಿ ಸೂರ್ಯ ಕಾನ್ವೆಂಟ್ ನಲ್ಲಿ ಓದಿರೋದು.

ಆದರೆ ನನ್ನನ್ನ ಕಾನ್ವೆಂಟ್ ನಲ್ಲಿ ಓದಿದವನು ಅಂತಾರೆ. ಧರ್ಮ ಮನುಷ್ಯನಿಗಾಗಿ‌ ಇರೋದು, ಮನುಷ್ಯ ಧರ್ಮಕ್ಕಾಗಿ‌ ಇಲ್ಲ. ಔರಂಗಜೇಬನ ಸಮಾಧಿ ತೆಗೆಯೋಕೆ ಈಗ ಜ್ಞಾನೋದಯ ಆಗಿದೆ. ಅರ್ ಎಸ್ ಎಸ್ ಮುಖ್ಯಸ್ಥರು ಹೇಳ್ತಾರೆ ‌ಧರ್ಮ‌ ಉಳಿಸಲು ‌ಮೂರು ಮೂರು ಮಕ್ಕಳನ್ನ ಹೆರಬೇಕು ಅಂತಾರೆ.ಆದರೆ ಅವರು ಮಾತ್ರ ‌ಭ್ರಹ್ಮಾಚಾರಿಗಳಾಗಿ ಇರ್ತಾರೆ.ಇದೆಂತದ್ದು..? ಧರ್ಮ ಜಾತಿಗಳ ನಡುವೆ ಜಗಳ ಹಚ್ಚುವವರೇ ದೇಶದ ದ್ರೋಹಿಗಳು ಅಂತಾ ಅಂಬೇಡ್ಕರ್ ಹೇಳಿದಾರೆ. ಮನುವಾದ ಪ್ರತಿಪಾದನೆ ಮಾಡೋರು ಸಂವಿಧಾನ ಎತ್ತಿ‌ ಹಿಡಿತಾರ? ಎಂದು ಪ್ರಶ್ನೆ ಮಾಡಿದ್ದಾರೆ.

ಅಮಿತ್ ಶಾ ಅವರು ಸದನದಲ್ಲಿ ಹೇಳ್ತಾರೆ, ಅಂಬೇಡ್ಕರ್ ಹೆಸರು ಹೇಳೋದು ಫ್ಯಾಷನ್ ಆಗಿದೆ ಅಂತಾರೆ. ಪಾರ್ಲಿಮೆಂಟ್ ನಲ್ಲಿ ಅಮಿತ್ ಶಾ ಹೀಗೆ ಹೇಳೋದು ಅಹಂಕಾರ ಅಲ್ವಾ? . 57 ವರ್ಷ ಆದರೂ ಆರ್ ಎಸ್ ಎಸ್ ನಮ್ಮ ದೇಶದ ಬಾವುಟವನ್ನ ಅವರು ಹಾರಿಸಲೇ‌ ಇ‌ಲ್ಲ. ಅವರಿಗೆ ಫಂಡಿಂಗ್ ಹೇಗೆ ಬರುತ್ತದೆ ಅಂತಾ ಕೇಳಿದ್ರೆ ಅವರ ಬಳಿ ಉತ್ತರವೇ ಇಲ್ಲ.ಕೊನೆಗೆ ಅದಕ್ಕೆ ಉತ್ತರ ಕೊಡಲು ಮೋಹನ್ ಭಾಗವತ್ ಅವರೇ ಬೆಂಗಳೂರಿಗೆ ಬಂದರು.ಆರ್ ಎಸ್ ಎಸ್ ರಿಜಿಸ್ಟರ್ ಮಾಡುವ ಅಗತ್ಯತೆ‌ ಇಲ್ಲ ಅಂಥಾ ಹೇಳ್ತಾರ.ಇವತ್ತಲ್ಲ ನಾಳೆ ಆರ್ ಎಸ್ ಎಸ್ ರಿಜಿಸ್ಟರ್ ಆಗಲೇಬೇಕು..‌ಇಲ್ಲವೇ ನಾನೇ ಮಾಡಿಸ್ತೀನಿ.  ಆರ್ ಎಸ್ ಎಸ್ ನವರು ಅಕ್ರಮಹಣ ವರ್ಗಾವಣೆ  ಮಾಡ್ತಿದ್ದಾರೆ . ಯಾವುದೇ ಟ್ಯಾಕ್ಸ್ ಕಟ್ಟುತ್ತಿಲ್ಲ. ಡೊನೆಷನ್ ತಗೊಳ್ಳಲ್ಲ  ಬರೀ ಗುರುದಕ್ಷಿಣೆ ತಗೋತಾರೆ. ಗುರು ದಕ್ಷಿಣೆ ಅಂದ್ರೆ ಧ್ವಜದ ಹೆಸರಿನಲ್ಲಿ ಹಣ ಸಂಗ್ರಹ ಮಾಡ್ತಾರೆ.  ಆರ್ ಎಸ್ ಎಸ್ ಇಲ್ಲ ಅಂದ್ರೆ ಬಿಜೆಪಿ ಜೆಡಿಎಸ್ ಗಿಂತಾ ಕಡೆಯಾಗಲಿದೆ ಎಂದು ಅವರು ಎಚ್ಚರಿಸಿದ್ದಾರೆ.

ಆರ್ ಎಸ್ ಎಸ್ ದೆವ್ವವಿದ್ದಂತೆ, ಬಿಜೆಪಿ ದೆವ್ವದ ನೆರಳು . ನಾವು ನೆರಳಿನ ಜೊತೆ ಹೋರಾಟ ಮಾಡಬಾರದು. ದೆವ್ವದ ಜೊತೆ ಹೋರಾಟ ಮಾಡಬೇಕು.ರಾಜಕೀಯ ನಾಯಕರ ಮಕ್ಕಳು ಧರ್ಮದ ಹೋರಾಟದಲ್ಲಿ ಇಲ್ಲ. ಖರ್ಗೆ,ಯಡಿಯೂರಪ್ಪ, ಅಶೋಕ್ ಮಕ್ಕಳು ಏನ್ ಮಾಡ್ತಿದಾರೆ ಎಲ್ಲವನ್ನು ಗಮನಿಸಿ. ನಮ್ಮ ಮಗ ವಿದೇಶದಲ್ಲಿ ಓದು್ತ್ತಿದ್ರೆ ನಿಮ್ಮ ಮಕ್ಕಳು ವಿದೇಶದಲ್ಲಿ ಓದಬೇಕು ಅಂತಾನೆ ನಾನು ಹೇಳೊದು. ಬಿಜೆಪಿಯವ್ರ ನಡೆ ನುಡಿಗೂ ಬಹಳ ವ್ಯತ್ಯಾಸವಿದೆ. ಇದ್ದಿದ್ದು ಇದ್ದಹಾಗೆ ಹೇಳ್ತೀವಿ ಅದಕ್ಕೆ ಜನ ಇಷ್ಟಪಡಲ್ಲ. ನಾವು ಹಿಂದೊಂದು ಮುಂದೊಂದು ಮಾತನಾಡಲ್ಲ ಎಂದು ಅವರು ಇದೇ ವೇಳೆ ಹೇಳಿದ್ದಾರೆ.

ಸರ್ಕಾರಕ್ಕೆ ಸಾವಿರ ದಿನದ ಕಾರ್ಯಕ್ರಮಕ್ಕೆ ಬಿಜೆಪಿ ವಿರೋಧದ ವಿಚಾರದ ಬಗ್ಗೆ ಮಾತನಾಡಿ ವಿರೋಧ ಮಾಡೋದಕ್ಕೆ ವಿರೋಧ ಮಾಡೋದನ್ನ ಏನೂ ಮಾಡೋಕೆ ಆಗಲ್ಲ. ಬೇಡಲಾರದ ವಿಚಾರದ ಬಗ್ಗೆ ಸದನದಲ್ಲೊ ಚರ್ಚೆ ಮಾಡ್ತಾರೆ. ಜನರಿಗೆ ಉಪಯೋಗವಾಗುವ ಚರ್ಚೆಗಳನ್ನ ಮಾಡಲು ಬಿಡಲ್ಲ. ನಮ್ಮ ಸರ್ಕಾರ ಜನರಿಗೆ ಒಳ್ಳೇದನ್ನ ಮಾಡ್ತಿದೆ. ಅದನ್ನೂ ಸಹಿಸಲಾಗಲ್ಲ‌ . ಜನ ಇವರಿಗೆ ವೋಟ್ ಮಾಡಲ್ಲ ಅನ್ನೋದು ಇವರಿಗೆ ಗೊತ್ತಾಗಿದೆ ಎಂದ ಅವರು ಸರ್ಕಾರದ ಸಾವಿರ ದಿನದ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರು ಬರದಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ ಕಾರ್ಯಕ್ರಮ, ಖರ್ಗೆ ಅವರಿಗೆ ಪೂರ್ವ ನಿಗಧಿತ ಕಾರ್ಯಕ್ರಮ ಇತ್ತು ಹಾಗಾಗಿ ಬರಲಿಲ್ಲ. ಮುಂಬರುವ ಸ್ಥಳೀಯ ಸಂಸ್ಥೆ ,ಬಿಜಿಎ ಹಾಗೂ ಇರತ ಎಲ್ಲ ಚುನಾವಣೆಗಳಲ್ಲೂ ನಮ್ಮ ಪಕ್ಷ ಗೆಲ್ಲಲಿದೆ ಎಂದಿದ್ದಾರೆ.