ಬೆಂಗಳೂರು: ನಿಧಾನವಾದ್ರೂ ಪರವಾಗಿಲ್ಲ ಡಿಕೆಶಿ ಅವರಿಗೆ ಸಿಎಂ ಸ್ಥಾನ ಬಿಟ್ಟು ಕೊಟ್ಟು ಕೊಟ್ಟ ಮಾತನ್ನು ಸಿದ್ದರಾಮಯ್ಯ ಉಳಿಸಿಕೊಳ್ತಾರೆ ಎಂಬ ವಿಶ್ವಾಸವಿದೆ. ನನಗೆ ಈಗಲೂ ಆ ಭರವಸೆ ಇದೆಎಂದು ಮಾಜಿ ಸಚಿವ ಡಿ ಕೆ ಸುರೇಶ್ ಹೇಳಿದ್ದಾರೆ.
ವಿದೇಶ ಪ್ರವಾಸ ಯಾರು ಹೋಗ್ತಿದ್ದಾರೆ ಅವರನ್ನೇ ಕೇಳಬೇಕು. ವಿದೇಶ ಪ್ರವಾಸ ಡಿ ಕೆ ಶಿವಕುಮಾರ್ ಆಯೋಜನೆ ಮಾಡಿದ್ದಲ್ಲ.ವಿದೇಶ ಪ್ರವಾಸಕ್ಕೂ ಡಿಕೆಶಿಗೂ ಸಂಬಂಧವಿಲ್ಲ.ಅದನ್ನು ಮಾತ್ರ ಸ್ಪಷ್ಟವಾಗಿ ಹೇಳಬಲ್ಲೆ. ಆ ತರಹನೂ ಇದ್ರೆ ಅದು ರಾಜಕೀಯ ಉದ್ದೇಶ. ಬೇಕಂತಲೇ ಡಿಕೆಶಿಗೆ ಕೆಟ್ಟ ಹೆಸರು ತರೋ ಹುನ್ನಾರ ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ವಿದೇಶ ಪ್ರವಾಸದ ಆಯೋಜಕರನ್ನೇ ಕೇಳಿ ಎಂದಿರುವ ಅವರು ಬಿಜೆಪಿ ಮುಖಂಡನಿಗೆ ನಿಗಮ ಮಂಡಳಿ ಸ್ಥಾನ ನೀಡಿರೋ ವಿಚಾರದ ಬಗ್ಗೆ ಡಿ ಕೆ ಸುರೇಶ್ ತಮ್ಮ ನಾಯಕರನ್ನೇ ಲೇವಡಿ ಮಾಡಿದ್ದಾರೆ. ಕಾಂಗ್ರೆಸ್ ಎಲ್ಲರನ್ನೂ ಗೌರವಿಸುತ್ತದೆ ಅಂತಾಯ್ತಲ್ಲ. ಸಿಎಂ ಅವರು ಈ ರೀತಿ ಮಾಡಿರಬಹುದು. ಸರ್ಕಾರ ಎಲ್ಲರನ್ನ ಜೊತೆಗೆ ಕರೆದೊಯ್ಯಬೇಕು.ನಮ್ಮದು ಸರ್ವಧರ್ಮ ಪಾಲಿಸಿ ಅಲ್ವಾ. ಬಿಜೆಪಿ, ಜೆಡಿಎಸ್, ಎಲ್ಲರೂ ಕೂಡ ಇದ್ದಾರೆ ನಮಲ್ಲಿಯೇ. ಅತಿಥಿಗಳಿಗೆ ಫಸ್ಟ್ ಆದ್ಯತೆ ನೀಡೋದು.ಎಲ್ಲ ವಿಚಾರದಲ್ಲೂ ಕೂಡ ಇದೇ ಆದ್ಯತೆ ನೀಡ್ತೇವೆ. ಹೊರಗಿನವರಿಗೇ ಮೊದಲ ಆದ್ಯತೆ. ಕಾಂಗ್ರೆಸ್ ಕಾರ್ಯಕರ್ತರಿಗೆ ಎರಡನೇ ಆದ್ಯತೆ. ಇದೇ ನಡೆಯುತ್ತಿರೋದು ನಮ್ಮಲ್ಲಿ ಎಂದು ಪರೋಕ್ಷವಾಗಿ ಛಾಟಿ ಬೀಸಿದ್ದಾರೆ.
ಯತೀಂದ್ರ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಆ ವಿಚಾರ ಏನು ಅಂತಾ ಗೊತ್ತಿಲ್ಲ.ಅವರು ಹೇಳಿದ ಮೇಲೆ ಅದೇ ವೇದ ವಾಕ್ಯ ಎಂದ ಅವರು ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಇಕ್ಪಾಲ್ ಅವರು ಹೇಳಿದ್ದು ಸರಿಯಿದೆ ಎಂದಿದ್ದಾರೆ.











