ಬೆಂಗಳೂರು; ಆರ್ ಸಿಬಿ ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣದಲ್ಲಿ ಅಮಾನತ್ತಾದವರಿಗೆ ರಿಪೋಸ್ಟಿಂಗ್ ಮಾಡಲಾಗ್ತಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ.
ನಾಳೆ ಆರ್‌ಸಿಬಿ ಕ್ರಿಕೆಟ್ ಆಡಿಸುವ ಸಂಬಂಧ ಸಭೆ ವಿಚಾರದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಪ್ರತಿಕ್ರಿಯಿಸಿದ್ದು ಗುಡ್ ನ್ಯೂಸ್ ಬ್ಯಾಡ್ ನ್ಯೂಸ್ ಅಂತ ಏನೂ ಇಲ್ಲ. ನ್ಯಾ.ಕುನ್ಹಾ ವರದಿಯ ಶಿಫಾರಸುಗಳ ಅಳವಡಿಕೆ ಹೇಗೆ ಆಗಿದೆ ನೋಡ್ತೇವೆ. ನಾವು ಅದಕ್ಕಾಗಿ ಒಂದು ಸಮಿತಿಯನ್ನೇ ರಚಿಸಿದ್ದೇವೆ. ನಾಳೆ ಎಲ್ಲವನ್ನೂ ಚರ್ಚೆ ಮಾಡ್ತೇವೆ.
ಶಾರ್ಟ್ ಟರ್ಮ್, ಮೀಡಿಯಂ ಟರ್ಮ್, ಲಾಂಗ್ ಟರ್ಮ್ ಅಂತ ಮಾಡಿದ್ದೇವೆ. ತಕ್ಷಣ ಎಲ್ಲವನ್ನೂ ಮಾಡಿ ಅಂದ್ರೆ ಅದೂ ಕಷ್ಟವೇ. ಹಾಗಾಗಿ ಶಾರ್ಟ್ ಟರ್ಮ್ ಗೆ ಏನು ಕ್ರಮ ತಗೊಂಡಿದ್ದಾರೆ ಅಂತ ವರದಿ ಕೊಡ್ತಾರೆ ನಾಳೆ. ನಮ್ಮವರೂ ಕೂಡಾ ಈಗಾಗಲೇ ಎರಡು ಸಲ ಪರಿಶೀಲನೆ ಮಾಡಿದ್ದಾರೆ. ಚರ್ಚೆ ಮಾಡ್ತೇವೆ, ನಮಗೆ ಸಮಾಧಾನ ಆದರೆ ಅನುಮತಿ ಕೊಡ್ತೇವೆ. ಕಾಲ್ತುಳಿತ ಪ್ರಕರಣದಲ್ಲಿ ಅಮಾನತ್ತಾದವರಿಗೆ ರೀಪೋಸ್ಟಿಂಗ್ ಮಾಡಲಾಗ್ತಿದೆ. ಅದರ ಜತೆಗೆ ತನಿಖೆಯೂ ನಡೀತಿದೆ ಎಂದಿದ್ದಾರೆ.
ಕೈ ಮುಖಂಡ ಮತೀನ್ ಪಟೇಲ್ ಗನ್ ಹಿಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು ಯಾರಾದರೂ ಅಗಲಿ, ಕಾನೂನು ವಿರುದ್ಧದ ಚಟುವಟಿಕೆ ಮಾಡಿದ್ರೆ ಕ್ರಮ ತೆಗೆದುಕೊಳ್ಳುತ್ತಾರೆ. ಯಾವ ಪಾರ್ಟಿ ಅನ್ನೊದು ಆ ಮೇಲೆ ಪಕ್ಷ ಎಲ್ಲಾ ನೋಡಲ್ಲ. ಯಾರಿಗಾದರೂ ಆಪ್ತರೂ ಇರಲಿ, ಕಾನೂನು ವಿರುದ್ಧ ಕೆಲಸ ಮಾಡು ಎಂದು ಹೇಳ್ತಾರಾ.ಆಪ್ತರು ಸಹ ಹೇಳೋದಿಲ್ಲ ಎಂದು ಅವರು ತಿಳಿಸಿದ್ದಾರೆ.
ಬೈರತಿ ಬಸವರಾಜ್ ತಲೆಮರೆಸಿಕೊಂಡಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ನಿನ್ನೆ ಕೋರ್ಟ್ ನಲ್ಲಿ ಆದೇಶ ಆಗಿದೆ. ಅವರಾಗಿ ಅವರೇ ಬಂದು ಸರೆಂಡರ್ ಆದ್ರೆ ಒಳ್ಳೇದು. ಇಲ್ಲಾಂದ್ರೆ ಪೊಲೀಸರು ಅವರನ್ನು ಹುಡುಕ್ತಾರೆ ಎಂದ ಅವರು ವಿಧಾನಸೌಧದಲ್ಲಿ ಸಚಿವ ಸುರೇಶ್ ಕಛೇರಿಯಲ್ಲಿ ಚಿನ್ನ, ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿ ಈ ಪ್ರಕರಣದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ.ವಿಧಾನಸೌಧದ ಗೇಟ್ ನಿಂದ ಆ ಬ್ಯಾಗ್ ಹೇಗೆ ಒಳಗೆ ಹೋಯ್ತು, ಯಾವ ಗೇಟ್ ನಿಂದ ಒಳಗೆ ಹೋಯ್ತು ಅನ್ನೋದು ಮುಖ್ಯ. ಒಬ್ಬ ಸಚಿವರ ಕೊಠಡಿವರೆಗೆ ಆ ಬ್ಯಾಗ್ ಹೋಗುತ್ತೆ ಅಂದ್ರೆ ಅದೂ ಯಾರಿಗೂ ಗೊತ್ತಾಗದೇ, ಅದನ್ನೆಲ್ಲ ಪತ್ತೆ ಮಾಡಲು ಜಂಟಿ ಪೊಲೀಸ್ ಆಯುಕ್ತರಿಗೆ ಸೂಚನೆ ಕೊಟ್ಟಿದ್ದೇವೆ. ಕಳವು ಆಗಿರೋದು ಎರಡನೇ ವಿಚಾರ. ಆ ಬ್ಯಾಗ್ ಹೇಗೆ ಒಳಗೆ ತಂದ್ರು ಅನ್ನೋದು ಮುಖ್ಯ.ನವೀನ್ ಅನ್ನೋ ವ್ಯಕ್ತಿ ವಿಧಾನಸೌಧದ ಒಳಗೆ ಬ್ಯಾಗ್ ತಗೊಂಡ್ ಹೋಗಿರೋದು. ಇದರ ತನಿಖೆ ಮಾಡ್ತೇವೆ ಎಂದು ಅವರು ಹೇಳಿದ್ದಾರೆ,











